spot_img
spot_img

ವಿಶ್ವ ಶಾಂತಿಗೆ ಕುವೆಂಪು ಚಿಂತನೆಗಳೇ ದಾರಿದೀಪ : ಡಾ. ಭೇರ್ಯ ರಾಮಕುಮಾರ್

Must Read

- Advertisement -

ಇಂದು ವಿಶ್ವವನ್ನು ಕಾಡುತ್ತಿರುವ ಹಿಂಸೆ, ಭಯೋತ್ಪಾದನೆ, ಯುದ್ಧಗಳ ನಿವಾರಣೆಗೆ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವವೊಂದೇ ಪರಿಹಾರ ಎಂದು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಭೇರ್ಯ ರಾಮಕುಮಾರ್  ನುಡಿದರು.

ಹಾಸನದ ವಿಶ್ವ ಮಾನವ ಬಂಧುತ್ವ ಸಭಾಂಗಣದಲ್ಲಿ ನಡೆದ ಹಾಸನ ಮನೆಮನೆ ಕವಿಗೋಷ್ಠಿ ಸಂಘಟನೆಯ 312 ನೇ  ಮನೆಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ನಾ ಕಂಡಂತೆ ಕುವೆಂಪು ವಿಷಯ ಕುರಿತು

ಉಪನ್ಯಾಸ ಮಾಡುತ್ತಿದ್ದ ಅವರು ಮಲೆನಾಡಿನಲಿ ಜನಿಸಿದ ಕುವೆಂಪು ರಾಜ್ಯದ ಸಾಹಿತ್ಯ, ಸಾಂಸ್ಕೃತಿಕ ರಂಗಕ್ಕೆ ನೀಡಿದ ಕೊಡುಗೆ ಅಪಾರ. ಮೈಸೂರಿನ ಮಹಾರಾಜಾ ಕಾಲೇಜಿನ ವಿದ್ಯಾರ್ಥಿಯಾಗಿ ನಂತರ ಅದೇ ಕಾಲೇಜಿನ ಉಪನ್ಯಾಸಕರಾ ಗಿ, ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ, ನಂತರ ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಪತಿತಗಳಾಗಿ ಕುವೆಂಪು ಅವರು ಧಾಖಲೆ ಸ್ಥಾಪಿಸಿದರು. ರಾಜ್ಯದ ಮೊದಲ ವಿಶ್ವ ವಿದ್ಯಾನಿಲಯವಾದ  ಮೈಸೂರು ವಿಶ್ವ ವಿದ್ಯಾನಿಲಯಕ್ಕೆ ವಿಸ್ತಾರವಾದ ಪ್ರದೇಶದಲ್ಲಿ ಮಾನಸ ಗಂಗೋತ್ರಿ ನಿರ್ಮಿಸಿದರು. ಸುಂದರ ಹಸಿರು ಪರಿಸರ ಹಾಗೂ ವಿಶಾಲವಾದ ಕುಕ್ಕರಹಳ್ಳಿ ಕೆರೆ ನಿರ್ಮಾಣ ಮಾಡಿ ಇಡೀ ರಾಷ್ಟ್ರದ ಗಮನ ಸೆಳೆದರು ಎಂದು ಬಣ್ಣಿಸಿದರು.

- Advertisement -

ಕುವೆಂಪು ಅವರು ಸಮಾನತೆ, ವಿಶ್ವಮಾನವ ಪ್ರಜ್ಞೆ, ಪರಿಸರ ಪ್ರಜ್ಞೆ ಹಾಗೂ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಚಿಂತನೆಗಳನ್ನು ತಮ್ಮ ಕೃತಿಗಳಲ್ಲಿ ನೀಡಿದ್ದಾರೆ. ಕರ್ನಾ ಟಕ ಏಕೀಕರಣಕ್ಕೆ ಕುವೆಂಪು ಅವರ  ಕೊಡುಗೆ ಅಪಾರ. ಉಳುವ ರೈತನಿಗೆ ಯೋಗಿಯ  ಸ್ಥಾನ ನೀಡಿ ಗೌರವಿಸಿದರು. ಸರಳ ಮದುವೆ ಆಚರಣೆ ಕುರಿತು ಮಂತ್ರ ಮಾಂಗಲ್ಯ ವಿಧಾನ ಬೋದಿಸಿದರು. ಅವರ ಕೃತಿಗಳಲ್ಲಿ ಪರಿಸರ ಕುರಿತು ಚಿಂತನೆ ಇದೆ. ಜಾತ್ಯತೀತ ನಿಲುವುಗಳಿದೆ. ಅವರ ಮಹಾ ಕಾವ್ಯ ಶ್ರೀ ರಾಮಾಯಣ ದರ್ಶನಮ್ ಕೃತಿಯನ್ನು, ವಿಶ್ವಮಾನವ ತತ್ವವನ್ನು, ಮಂತ್ರಮಂಗಲ್ಯ ಚಿಂತನೆಗಳನ್ನು  ಮುಂದಿನ ಜನಾಂಗಕ್ಕೂ ತಲುಪಿಸುವ ಕೆಲಸವನ್ನು ಸಮಾಜ, ಸರ್ಕಾರಗಳು ಮಾಡಬೇಕಿದೆ ಎಂದವರು ನುಡಿದರು. ತಾವು ವಿದ್ಯಾರ್ಥಿ ದೆಸೆಯಲ್ಲಿಯೀ ಕುವೆಂಪು ಅವರ ಪ್ರಭಾವಕ್ಕೆ ಒಳಗಾದ ಕ್ಷಣಗಳನ್ನು ಅವರು ಚಿತ್ರಿಸಿದರು. ಕುವೆಂಪು  ಅವರು ಕರ್ನಾಟಕ ಏಕೀಕರಣಕ್ಕೆ ನೀಡಿದ ಕೊಡುಗೆಗಳನ್ನು, ಗೋಕಾಕ್ ವರದಿ ಹೋರಾಟದಲ್ಲಿ ಅವರು ನೀಡಿದ ಅಪಾರ ಸಹಕಾರವನ್ನು ಭೇರ್ಯ ರಾಮಕುಮಾರ್ ವಿವರಿಸಿದರು.

ರಾಷ್ಟ್ರಕವಿ ಕುವೆಂಪು ಅವರ ಚಿಂತನೆಗಳನ್ನು  ಮುಂದಿನ ತಲೆಮಾರಿಗೂ ತಲುಪಿಸುವ  ಕಾರ್ಯವನ್ನು ರಾಜ್ಯಸರ್ಕಾರ ಮಾಡಬೇಕು. ರಾಮಾಯಣ ದರ್ಶನ ಮಹಾಕಾವ್ಯವನ್ನು, ವಿಶ್ವಮನವ ಸಂದೇಶ ವನ್ನು ಕಡಿಮೆ ಬೆಲೆಗೆ ಜನಸಾಮಾನ್ಯರಿಗೆ  ತಲುಪಿಸುವ ವ್ಯವಸ್ಥೆಯನ್ನು ರಾಜ್ಯಸರ್ಕಾರ ಮಾಡಬೇಕೆಂದು  ಭೇರ್ಯ  ರಾಮಕುಮಾರ್ ಒತ್ತಾಯಿಸಿದರು.

ಹಾಸನದ ಮನೆಮನೆ ಕವಿಗೋಷ್ಠಿ ಬಳಗದ 111  ನೇ ಕವಿಗೋಷ್ಠಿಯನ್ನು ಈ ಹಿಂದೆ ತಾವು ಉದ್ಘಾಟಿಸಿದ್ದು, ಇದೀಗ ಸಂಸ್ಥೆಯ 312 ನೇ ಮನೆಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಅವರನ್ನು ಕುರಿತು ಮಾತನಾಡುತ್ತಿರುವುದು ತಮಗೆ ಸಂತಸ ತಂದಿದೆ ಎಂದು ಭೇರ್ಯ ರಾಮಕುಮಾರ್ ನುಡಿದರು.

- Advertisement -

ಮನೆಮನೆ ಕವಿಗೋಷ್ಠಿಯ ಸಂಚಾಲಕ ಹಾಗೂ ಸಾಹಿತಿ ಗೊರೂರು ಅನಂತರಾಜು ಪ್ರಸ್ತವಿಕ ಭಾಷಣ ಮಾಡಿದರು. ಶ್ರೀಮತಿ ಸುಶೀಲ ಸೋಮಶೇಖರ್, ಸಮಾಜ  ಸೇವಕರಾದ ಜೆ. ಓ. ಮಹಾಂತಪ್ಪ, ದಿಬ್ಬುರು ರಮೇಶ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪತ್ರಕರ್ತರಾದ ಜೆ. ರವಿಕುಮಾರ್, ಗ್ಯಾರಂಟಿ ರಾಮಣ್ಣ, ಉಮೇಶ್ ಹೊಸಳ್ಳಿ, ಸಾವಿತ್ರಮ್ಮ ಬಿ. ಗೌಡ, ಧನಲಕ್ಶ್ಮೀ, ಲಕ್ಷ್ಮೀದೇವಿ ದಾಸಪ್ಪ, ಚೂಡಾಮಣಿ, ಪರಮೇಶ್ ಮಡಲು, ಸರೋಜ. ಬಿ., ರಾಣಿ, ಚಂದ್ರಶೇಖರ ಹಾನಗಲ್ಲು, ಬಸವರಾಜು, ದಿಬ್ಬುರ್ ರಮೇಶ್, ಗೋರೂರುಅನಂತರಾಜು, ಭೇರ್ಯ ರಾಮಕುಮಾರ್  ಕವಿಗೋಷ್ಠಿಯಲ್ಲಿ ಕವನ ವಾಚಿಸಿದರು.

ರಂಗ ಕರ್ಮಿಗಳಾದ ಶಾಂತಕುಮಾರ್,ಶೇಖರಪ್ಪ, ಯೋಗೇಂದ್ರ ದುದ್ದ, ಪಾಲಾಕ್ಷಚಾರ್, ಮಧು, ಮಂಜೇಗೌಡ, ಸೋಮಶೇಖರ್, ವಕೀಲರಾದ  ತಿಮ್ಮೇಗೌಡ ರಂಗ ಗೀತೆಗಳನ್ನು ಹಾಡಿ ಕಾವ್ಯಪ್ರೇಮಿಗಳ ಮಾನ ರಂಜಿಸಿದರು.

- Advertisement -
- Advertisement -

Latest News

Yuva Movie: ಯುವ ರಾಜ್‌ಕುಮಾರ್ ಅವರ ಚಿತ್ರದ ಕಥೆ ಲೀಕ್ ಆಯ್ತಾ?

ಕನ್ನಡ ಚಲನಚಿತ್ರ "ಯುವ" ಮಾರ್ಚ್ 2024 ರಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಪ್ರಸಿದ್ಧ ಕನ್ನಡ ನಟ ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ಯುವ ರಾಜ್‌ಕುಮಾರ್...
- Advertisement -

More Articles Like This

- Advertisement -
close
error: Content is protected !!
Join WhatsApp Group