10ರಂದು ಅಬ್ಬಿಗೇರಿ ದಂಪತಿಯ 15 ಕೃತಿ ಲೋಕಾರ್ಪಣೆ

Must Read

ಬೆಳಗಾವಿ: ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ ಹಾಗೂ ಲೋಕವಿದ್ಯಾ ಪ್ರಕಾಶನ ಸಂಕೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಉಪನ್ಯಾಸಕಿ, ಲೇಖಕಿ ಜಯಶ್ರೀ ಮತ್ತು ಜಯಪ್ರಕಾಶ ಅಬ್ಬಿಗೇರಿ ದಂಪತಿಗಳ 15 ಕೃತಿಗಳ ಲೋಕಾರ್ಪಣೆ ಸಮಾರಂಭ ಡಿ.10ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ.

ಉಪನ್ಯಾಸಕಿ, ಚಿಂತಕಿ, ಅಂಕಣಕಾರ್ತಿ, ಲೇಖಕಿ ಜಯಶ್ರೀ ಅಬ್ಬಿಗೇರಿ ಅವರ ನಿಮ್ಮನ್ನು ನೀವು ಯಶಸ್ವಿ ವ್ಯಕ್ತಿ ಎಂದು ಭಾವಿಸಿ, ಮೆಲ್ಲ ಮೆಲ್ಲ ಈ ಪ್ರೀತಿ ಮೆಲ್ಲುವಾ, ಜೀವನದಿ, ಜೀವ ನೀಡುವ ಜೀವ ಅಪಾಯದಲ್ಲಿದೆ, ವಚನ ವಾಹಿನಿ, ಸೋಲಿನ ಸುಳಿಯಲ್ಲಿ ಗೆಲುವಿನ ತುದಿ ಇದೆ, ಕುಂತರೂ ನಿಂತರೂ ನಿನ್ನದೇ ತುಂತುರು, ಹಬ್ಬ ಬಂತು ಹಬ್ಬ, ಸೋಲು ಒಪ್ಪಿಕೊಳ್ಳುವ ಮುನ್ನ ಕೊಂಚ ಪ್ರಶ್ನಿಸಿಕೊಳ್ಳಿ, ಮನೋಲ್ಲಾಸ ಭಾಗ-1, ಮನೋಲ್ಲಾಸ ಭಾಗ-2 ಹಾಗೂ ಹಾಸ್ಯ ಸಾಹಿತಿ ಜಯಪ್ರಕಾಶ ಅವರ ಶ್ರೀಮತಿಗಳ ಶೃಂಗಸಭೆಗಳು, ಬಾನುಲಿ ನಗೆ, ಹೃದಯವೀಣೆ ಮಿಡಿದಾಗ ಡಾ. ಸಿದ್ದನಗೌಡ ಪಾಟೀಲ ಕೃತಿಗಳ ಲೋಕಾರ್ಪಣೆ ನಡೆಯಲಿದೆ.

ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಶ್ರೀಮತಿ ಜಯಶೀಲಾ ಬ್ಯಾಕೋಡ ವಹಿಸಲಿದ್ದಾರೆ. ಕೃತಿ ಲೋಕಾರ್ಪಣೆ ನಿವೃತ್ತ ಪ್ರಾಚಾರ್ಯ ಬಿ ಎಸ್ ಗವಿಮಠ ಅವರಿಂದ ನಡೆಯಲಿದೆ.

ಈ ಸಮಾರಂಭಕ್ಕೆ ಗೌರವ ಉಪಸ್ಥಿತಿ ಡಾ. ಪಿ ಜಿ ಕೆಂಪಣ್ಣವರ ಅವರದು.

ಡಾ. ಗುರುದೇವಿ ಹುಲೆಪ್ಪನವರಮಠ, ಶ್ರೀಮತಿ ಸುನಂದಾ ಎಮ್ಮಿ, ಡಾ. ನಿರ್ಮಲಾ ಬಟ್ಟಲ ಕೃತಿಗಳ ಪರಿಚಯ ಮಾಡಿಕೊಡಲಿದ್ದಾರೆ.

ಕವಯಿತ್ರಿ ಶ್ರೀಮತಿ ಆಶಾ ಯಮಕನಮರಡಿ ಕಾರ್ಯಕ್ರಮ ನಿರ್ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Latest News

ಎಲ್ಲಾ ಜಿಲ್ಲೆಗಳ ಯುವ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ  

ಮೂಡಲಗಿ:-ತಾಲೂಕಿನ ಹಳ್ಳೂರ ಗ್ರಾಮದಲ್ಲಿ ರಾಜ್ಯದ ೩೧ ಜಿಲ್ಲೆಯ "ಯುವ ಸಾಧಕರಿಗೆ ಪ್ರಶಸ್ತಿ" ಪ್ರದಾನ ಸಮಾರಂಭ ಕಾರ್ಯಕ್ರಮ ದಿ. 26 ಹಾಗೂ 27 ರಂದು ಜರುಗುವುದು.ಕರ್ನಾಟಕ ರಾಜ್ಯ...

More Articles Like This

error: Content is protected !!
Join WhatsApp Group