ಓಂ ಶಾಂತಿ ಅರ್ಜುನ
ಮನುಷ್ಯ ಮಾಡಿಕೊಂಡಿರುವ ಕ್ರೂರ ಆದರೆ ಸಾಮಾನ್ಯ ವ್ಯವಸ್ಥೆ ಇದು. ಮೂಕ ಪ್ರಾಣಿಗಳ ಮೇಲೆ ಜವಾಬ್ದಾರಿಯಿಲ್ಲದೆ ಗೊತ್ತಿದ್ದೋ ಗೊತ್ತಿಲ್ಲದೆಯೋ ತನ್ನ ಪ್ರಲಾಪ ತೋರೋದು ,ತಮಗೆ ಬೇಕಾದ ಹಾಗೆ ಉಪಯೋಗಿಸಿಕೊಳ್ಳೊದು ,ಅವುಗಳಿಗೆ ನೋವು ,ಸಂಕಟ,ಸಾವು ನೀಡೋದು ಆಮೇಲೆ ಅತ್ತು ತಾವು ಬೇಕು ಅಂತ ಮಾಡಿಲ್ಲ ,ಕಾನೂನು ಇರೋದು ಹೀಗೆ ಹಾಗೆ ಅದನ್ನ ಬಿಟ್ಟು ಏನು ಮಾಡೋಕೆ ಆಗಲ್ಲ ಅನ್ನೋದು.
ಬರಿಯ ತಪ್ಪುಗಳನ್ನೇ ಮಾಡೋದು,ಮೂಕ ಪ್ರಾಣಿಗಳಿಗೆ ವೇದನೆಯನ್ನೇ ನೀಡೋದು.
ಪಾಪ ಆ ನಿಸ್ವಾರ್ಥಿ ಮೂಕ ಪ್ರಾಣಿಗಳ ಬದುಕುವ ಹಕ್ಕು ಕೂಡ ಸ್ವಾರ್ಥಿ ಮನುಷ್ಯರಿಂದ ನಿರ್ಧಾರಿತ ಅನ್ನೋದು ನೋಡಿದರೆ ತುಂಬಾ ಬೇಸರ ಆಗುತ್ತೆ
ಆ ಕಂದ ಇವರಿಗಾಗಿ ನಾನು ಧೈರ್ಯ ತೋರುತ್ತಿದ್ದೇನೆ , ಚಾಮುಂಡಮ್ಮನ ವಿಗ್ರಹವಿರುವ ಅಂಬಾರಿಯನ್ನೇ ಹೊತ್ತಿದ್ದೇನೆ ನನ್ನವರಿಗಾಗಿ, ಯಾರಾದರೂ ನನ್ನನ್ನು ಕೂಡ ಅವರಿಗೆ ಬೇಕಾದವರೂ ಅಂತ ತಿಳಿದು, ತನ್ನಂತೆ ಅವರು ಕೂಡ ಅವಶ್ಯ ಬಿದ್ದರೆ ನನ್ನ ಕಾಪಾಡಬಹುದು ಅಂದುಕೊಂಡಿತ್ತೇನೋ ಆ ಧೈರ್ಯದ ಮೇಲೆ ಸಲಗದ ಮುಂದೆ ನಿಂತಿತ್ತೇನೋ.
ಆದರೆ ನಿಯತ್ತಿಲ್ಲದ ಮನುಷ್ಯ ಪ್ರಾಣಿಗಳ ನಿಯತ್ತಿನ ಮುಂದೆ ಏನೂ ಅಲ್ಲ ಬರಿಯ ಸ್ವಾರ್ಥಿ,ನಿಯತ್ತಿಲ್ಲದವರೂ ಬಿಟ್ಟರೆ ಮತ್ತಿನೇನು ಅಲ್ಲ ಅಂತ ತೋರಿಸಿಯೆ ಬಿಟ್ಟರು ಮನುಷ್ಯರು. ಪಾಪ ಆ ಆನೆಗೂ ಮಾತು ಬಂದಿದ್ದರೆ ಕೊನೆಕ್ಷಣದಲ್ಲಿ ಮನುಷ್ಯನ ಬೇಜಾವಬ್ದಾರಿ ಗುಣ ನೋಡಿ ಏನು ಹೇಳುತ್ತಿತ್ತೋ ಏನೋ?
ಸಾಹಿತ್ಯ ಬಿ.ಆರ್.,
ಕೆ. ಅರ್. ನಗರ,
ಮೈಸೂರು ಜಿಲ್ಲೆ
ಮೊಬೈಲ್ :63631 72368