spot_img
spot_img

ದೇಶದ ತುಂಬಾ ದೇವರಿದ್ದಾರೆ ಆದರೆ ಜನರಲ್ಲಿ ದೈವತ್ವ ಮರೆಯಾಗುತ್ತಿದೆ

Must Read

- Advertisement -

ಬಿಟ್ಟುಬಿಡಿ ರಾಜಕಾರಣಿಗಳನ್ನು ಬಳಸಿ ಅಧರ್ಮ ನಡೆಸೋದನ್ನು, ಅಸತ್ಯದಿಂದ ಜನರನ್ನು ಆಳೋದನ್ನು, ಮಕ್ಕಳನ್ನು ಭ್ರಷ್ಟಾಚಾರದ ಹಣದಲ್ಲಿ ಸಾಕೋದನ್ನು, ರೋಗವನ್ನೇ ಬಂಡವಾಳ ಮಾಡಿಕೊಂಡು ವ್ಯವಹಾರ ನಡೆಸೋದನ್ನು, ಶಿಕ್ಷಣದ ಭ್ರಷ್ಟಾಚಾರವನ್ನು, ದೇಶದ ಹೆಸರಲ್ಲಿ ಅಧರ್ಮ, ಅಸತ್ಯ ಬೆಳೆಸೋದನ್ನು, ದೇಶವನ್ನೇ ವಿದೇಶ ಮಾಡೋದನ್ನು, ಆತ್ಮಹತ್ಯೆಯಂತಹ ಮಹಾಪಾಪವನ್ನು, ಪ್ರತಿಮೆಯಿಂದ ಪ್ರತಿಷ್ಠೆ ಬೆಳೆಸಿ ಪ್ರತಿಭೆಯನ್ನು ಹೊಸಕಿ ಹಾಕೋದನ್ನು, ಜ್ಞಾನದ ಹೆಸರಲ್ಲಿ ವಿಜ್ಞಾನ ಬೆಳೆಸಿ ಸಾಮಾನ್ಯಜ್ಞಾನವನ್ನು ನಿರ್ಲಕ್ಷ್ಯ ಮಾಡಿ ಲಕ್ಷ ಹಣಗಳಿಸೋದನ್ನು, ಸ್ತ್ರೀ ಶೋಷಣೆಯನ್ನು, ಭೂಮಿಯ ದುರ್ಭಳಕೆಯನ್ನು, ಮೆಟ್ಟುವುದು ಸುಲಭ ಕಟ್ಟುವುದೆ ಕಷ್ಟ ಎಂದ ಹಾಗೆ ದುಷ್ಟ ಗುಣಗಳನ್ನು ಜನರು ಬಹಳ ಬೇಗ ಕಲಿಯುತ್ತಾರೆ.

ಕಾರಣ ಭೌತಿಕದಲ್ಲಿ ಹೆಚ್ಚು ಶಕ್ತಿ ಇರೋದು ಇದೇ.ಒಳಗೆ ಇದ್ದ ಶಿಷ್ಟಾಚಾರ ಬೆಳೆಸೋ ಶಿಕ್ಷಣವಿಲ್ಲದೆ ಇಂದು ಭೌತಿಕ ಜಗತ್ತಿನಲ್ಲಿ ಹಣದಿಂದ ಏನನ್ನಾದರೂ ಖರೀದಿಸಿ ಸಾಧಕರಾಗಬಹುದೆನ್ನುವ ಭ್ರಮೆಯಲ್ಲಿ ರಾಜಕೀಯಕ್ಕೆ ಸಹಕರಿಸಿ ಭ್ರಷ್ಟರ ಪಕ್ಷವಹಿಸಿ ಮನಸ್ಸನ್ನು ಹೊರಗೆ ಬಿಟ್ಟು ತಿರುಗಿ ಒಳಗೆ ಬರಲಾಗದೆ ಸ್ವೇಚ್ಛಾಚಾರಕ್ಕೆ ತಿರುಗಿ ಒಂದು ರೀತಿಯಲ್ಲಿ ಹುಚ್ಚರ ನಡುವೆ ಹುಚ್ಚರ ಸಂತೆ.

ಧರ್ಮದ ಆಚರಣೆ ಅವರವರಿಗೆ ಬಿಟ್ಟ ವಿಚಾರ. ಇದನ್ನು ಅವರವರ ಮನೆ, ಮನಸ್ಸಿನಲ್ಲಿ ಮೊದಲು ಇಟ್ಟುಕೊಂಡು ನಂತರ ಸಮಾಜದ ಕಡೆ ಮುಖಮಾಡಬೇಕಿತ್ತು. ಆದರೆ ನಮ್ಮೊಳಗೇ ಇಲ್ಲದ ಸತ್ಯ ಧರ್ಮವನ್ನು ಪ್ರಚಾರಕ್ಕೆ ಬಳಸಿ, ಜನರನ್ನು ಹೊರಗೆಳೆದು ವ್ಯವಹಾರದಲ್ಲಿ ರಾಜಕೀಯತೆ ಬೆಳೆಸಿಕೊಂಡರೆ ಅಧರ್ಮವೆ ಬೆಳೆಯೋದು.

- Advertisement -

ಈಗ ಸರ್ಕಾರ ಇದನ್ನು ತಡೆಯಲು ಹೋಗೋದರಲ್ಲಿ ಅರ್ಥ ವಿಲ್ಲ. ಇದಕ್ಕೆ ಹೊಸ ಪರಿಹಾರ ಮಾರ್ಗ ವಾಗಿ ದೇವಸ್ಥಾನಕ್ಕೆ ಬದಲಾಗಿ ಶಿಕ್ಷಣ ಸಂಸ್ಥೆಗಳು ಎದ್ದರೆ ಅಲ್ಲಿ ಕೇವಲ ಮಾನವೀಯತೆಯ ,ನೈತಿಕ ಮೌಲ್ಯಗಳಿಂದ ಮಕ್ಕಳಿಗೆ ಶಿಕ್ಷಣ ನೀಡಬಹುದು. ಈಗಾಗಲೇ ಎಷ್ಟರಮಟ್ಟಿಗೆ ಎಷ್ಟೋ ಯುವಕ ಯುವತಿಯರು ನಿರುದ್ಯೋಗದ ಸಮಸ್ಯೆಯಲ್ಲಿದ್ದಾರೆ.

ಬುದ್ದಿವಂತರಿಗೆ ಶಿಕ್ಷಕ ಹುದ್ದೆ ನೀಡುವುದರಿಂದ ಉತ್ತಮ ಬೆಳವಣಿಗೆ ಸಾಧ್ಯವಿದೆ. ಮೊದಲು ಶಿಕ್ಷಕರು ಬದಲಾಗಬೇಕಿದೆ. ಇದರ ಬಗ್ಗೆ ಮಾಧ್ಯಮ ಚರ್ಚೆ ಮಾಡಿ ಸರ್ಕಾರಕ್ಕೆ ಸಹಕರಿಸಬೇಕು. ಎಲ್ಲಿ ನಾರಿಯರನ್ನು ಗೌರವದಿಂದ ಪವಿತ್ರವಾದ ದೃಷ್ಟಿಯಿಂದ ನೋಡಲಾಗುವುದೋ ಅಲ್ಲಿ ದೇವತೆಗಳು ಇರುತ್ತಾರಂತೆ. ಪ್ರತಿಮೆಯನ್ನು ಪೂಜಿಸುವುದಕ್ಕೆ ಭೌತಿಕ ಜಗತ್ತಿನ ಸಹಕಾರ,ಹಣ,ಅಧಿಕಾರವೆಲ್ಲವೂ ಇದೆ.

ಅದೇ ಮನೆಯೊಳಗಿರುವ ಸ್ತ್ರೀ ಯರಿಗೆ ಯಾವ ಅಧಿಕಾರ, ಸ್ಥಾನಮಾನ, ಗೌರವ, ಪ್ರೀತಿ, ವಿಶ್ವಾಸವಿಲ್ಲದೆ ಸಹಿಸಿಕೊಂಡು ಜೀವನ ನಡೆಸಬೇಕೆಂದರೆ ಅವಳ ಮನಸ್ಸು ಎಷ್ಟು ಕಲ್ಲಾಗಿರಬೇಕು. ಕಲ್ಲಿನಲ್ಲಿ ದೇವರಿದ್ದರೆ ಮಹಿಳೆಯಲ್ಲಿ ಯಾಕಿಲ್ಲ? ಕಾರಣ ಅವಳ ದೈವತ್ವವನ್ನು ಹಿಂದೆ ತಳ್ಳಿದವರು ಅಸುರರೆ.

- Advertisement -

ಅಸುರರನ್ನು ಪ್ರೀತಿಸಿ ಅವರ ಭ್ರಷ್ಟಾಚಾರ ಹೆಚ್ಚಿಸಿದರೆ ಭೂಮಿಯಲ್ಲಿ ಸ್ತ್ರೀ ಗೆ ಸ್ಥಾನಮಾನ, ಗೌರವ ಭೌತಿಕದಲ್ಲಿ ಸಿಕ್ಕರೂ ಅಧರ್ಮಕ್ಕೆ ತಕ್ಕಂತೆ ಪ್ರತಿಫಲವೂ ಸ್ತ್ರೀ ಅನುಭವಿಸುವಾಗ ಯಾವ ಅಸುರರೂ ಹತ್ತಿರವಿರೋದಿಲ್ಲ.

ಇದೇ ಮಾಯೆಯ ಆಟ ಪ್ರಜಾಪ್ರಭುತ್ವದಲ್ಲಿ ರಾಜರಂತೆ ಅಧಿಕಾರ ಚಲಾಯಿಸುವ ಸ್ವಾತಂತ್ರ್ಯವಿರಲಿಲ್ಲ.ಆದರೆ ಇದನ್ನು ಧರ್ಮಮಾರ್ಗದಲ್ಲಿ ನಡೆದವರು ಮಾಡಿದ್ದರೆ ಈ ಸ್ಥಿತಿಗೆ ದೇಶವಿರುತ್ತಿರಲಿಲ್ಲ. ಈಗಲೂ ಕಾಲಮಿಂಚಿಲ್ಲ ಸಾಮಾನ್ಯ ಪ್ರಜೆಗಳೆ ತಮ್ಮೊಳಗೇ ಇರುವ ಸತ್ಯಕ್ಕೆ ಬೆಲೆಕೊಟ್ಟು ಭೌತಿಕ ಜಗತ್ತಿನ ರಾಜಕೀಯದಿಂದ ದೂರವಿದ್ದು ಸ್ವತಂತ್ರ ಜೀವನ ನಡೆಸೋದಕ್ಕೆ ಅವರವರ ಮೂಲ ಧರ್ಮ ಕರ್ಮದ ಕಡೆಗೆ ನಡೆದರೆ ಜೀವಕ್ಕೆ ಮುಕ್ತಿ, ತೃಪ್ತಿ.

ಅತಿಯಾಗಿ ಸಾಲ ಮಾಡಿಕೊಂಡವರು ಸಮಾಜಸೇವೆ ನಿಸ್ವಾರ್ಥ, ನಿರಹಂಕಾರ, ಪ್ರತಿಫಲಾಪೇಕ್ಷೆಯಿಲ್ಲದೆ ಎಲ್ಲರಂತೆ ಸರಳ ಜೀವನ ನಡೆಸಿ ಋಣ ತೀರಿಸುವತ್ತ ನಡೆದರೆ ಉತ್ತಮ. ನಮ್ಮ ಶಾಸ್ತ್ರ ಪುರಾಣ ಇತಿಹಾಸದ ಕಥೆಗಳಿಂದ ಒಗ್ಗಟ್ಟು ಬೆಳೆದಿದ್ದರೆ ಸರಿ.ಇಲ್ಲವಾಗಿದ್ದರೆ ನಮ್ಮ ಆಚಾರ, ವಿಚಾರ, ಪ್ರಚಾರದೊಳಗೇ ಭ್ರಷ್ಟಾಚಾರ ಇದೆ ಎಂದರ್ಥ.

ಎಲ್ಲರಿಗೂ ಗೊತ್ತಿದ್ದೂ ತಪ್ಪು ನಡೆದಿದೆ. ನಡೆದ ಮೇಲೆ ಅದನ್ನು ಮುಚ್ಚಿಹಾಕೋ ಪ್ರಯತ್ನಕ್ಕೆ ಸಹಕಾರವೂ ಸಿಕ್ಕಿದೆ. ಈ ಸಹಕಾರಕ್ಕೆ ತಕ್ಕಂತೆ ಪ್ರಕೃತಿ ವಿಕೋಪವೂ ಹೆಚ್ಚಾಗಿ ಜೀವ ಹೋಗಿದೆ. ಹಾಗಾದರೆ ಇಲ್ಲಿ ನಡೆದಿರೋದಕ್ಕೆ ನಾನು ಕಾರಣವಲ್ಲವಾದರೆ ನನಗೆ ಯಾಕೆ ಸಮಸ್ಯೆಯಾಗುತ್ತಿದೆ? ಉತ್ತರ ಒಳಗಿದೆ.

ನಿನ್ನ ಆತ್ಮರಕ್ಷಣೆಗಾಗಿ ನೀನೇ ಹಿಂದೆ ತಿರುಗಿ ನೋಡಬೇಕಿದೆ. ದೇಶದ ತುಂಬಾ ದೇವರಿದ್ದಾರೆ. ಆದರೆ ಜನರಲ್ಲಿ ದೈವತ್ವ ಮರೆಯಾಗುತ್ತಿದೆ. ಹಾಗಾದರೆ ದೇವರಿರೋದೆಲ್ಲಿ? ಹೀಗೇ ಒಳಗೇ ಪ್ರಶ್ನೆಗೆ ಉತ್ತರ ಹುಡುಕಿದರೆ ಸಿಗಬಹುದು.ಇಲ್ಲಿ ಯಾರೂ ಯಾರನ್ನೋ ಆಳೋದಕ್ಕೆ ರಾಜಪ್ರಭುತ್ವ ವಿಲ್ಲ.

ಹಿಂದಿನ ಕಾಲವೇ ಬೇರೆ ಈಗ ಬೇರೆ.ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳಲು ಸಾಮಾನ್ಯಜ್ಞಾನ ಅಗತ್ಯವಿದೆ. ವಿಶೇಷಜ್ಞಾನ ಅಧರ್ಮದ ರಾಜಕೀಯ ನಡೆಸಿದೆ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು.

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group