ಸಿಂದಗಿ: ವಿದ್ಯುನ್ಮಾನ ಮತಯಂತ್ರ (ಇವಿಎಂ) ಹಾಗೂ ವಿವಿಪ್ಯಾಟ್(ಮತದಾನ ಖಾತ್ರಿ ಯಂತ್ರ) ಪ್ರಾತ್ಯಕ್ಷಿಕಯನ್ನು ತಾಲೂಕಿನ ಬಂದಾಳ ಗ್ರಾಮದ ಬನ್ನಿ ಮಂಟಪದ ಹತ್ತಿರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಶಿಕ್ಷಣ ಸಂಯೋಜಕ ಆನಂದ ಮಾಡಗಿ ಅವರು ಮತದಾರರ ಸಮ್ಮುಖದಲ್ಲಿ ಮಂಗಳವಾರ ವಿಷಯ ವಿವರಿಸಿ ಅವರು ಮಾತನಾಡಿ, ತಾಲೂಕಿನ ಪ್ರತಿ ಗ್ರಾಮದಲ್ಲಿ ವಿದ್ಯುನ್ಮಾನ ಮತಯಂತ್ರ ಮತ್ತು ವಿವಿಪ್ಯಾಟ್ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಭಾರತ ಚುನಾವಣಾ ಆಯೋಗವು ಇವಿಎಂ/ ವಿವಿಪ್ಯಾಟ್‌ಗಳ ಕುರಿತು ಜಾಗೃತಿ ಮತ್ತು ಪ್ರಾತ್ಯಕ್ಷಿಕೆ ನೀಡುವುದರ ಮೂಲಕ ಮತದಾರರಲ್ಲಿ/ ನಾಗರಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದರು.
ಇವಿಎಂ/ ವಿವಿಪ್ಯಾಟ್‌ಗಳ ಕುರಿತು ಜಾಗೃತಿ ಮತ್ತು ಪ್ರಾತ್ಯಕ್ಷಿಕೆಗೆ ಸಂಬಂದಿಸಿದಂತೆ ಡಮ್ಮಿ ಬ್ಯಾಲೆಟ್ ಪೇಪರ್ ಬಳಸಲಾಗುತ್ತದೆ ಎಂದು ವಿವರಿಸಿದರು.
ಭಾರತ ಚುನಾವಣಾ ಆಯೋಗದ ಪರವಾಗಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳಾದ ಯು.ಪಿ.ಸೋನಾವನೆ, ಹರೀಶ ಜೇವೂರ, ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಪಾಠ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಬಿ ಎಲ್ ಓ ಅಧಿಕಾರಿ ನಿಂಗನಗೌಡ ಪಾಟೀಲ, ಶಿಕ್ಷಕ ಬಿ ಎಲ್ ಓ ಅಧಿಕಾರಿ ಸಿದ್ದಲಿಂಗಪ್ಪ ಪೊದ್ದಾರ ಹಾಗೂ ಮತದಾರರು ಹಾಗೂ ಇತರರು ಇದ್ದರು.