ಮೂಡಲಗಿಯಲ್ಲಿ ಭಗೀರಥ ಭಾರತ ಜನ ಕಲ್ಯಾಣ ರಥ ಯಾತ್ರೆಗೆ ಭವ್ಯ ಸ್ವಾಗತ

Must Read

ಮೂಡಲಗಿ: ಪಟ್ಟಣದಲ್ಲಿ ಮೂಡಲಗಿ ತಾಲೂಕಾ ಉಪ್ಪಾರ ಸಂಘದಿಂದ ಹಾಗೂ ಉಪ್ಪಾರ ಸಮಾಜ ಭಾಂಧವರಿಂದ ಭಗೀರಥ ಭಾರತ ಜನ ಕಲ್ಯಾಣ ರಥ ಯಾತ್ರೆಗೆ ಭವ್ಯ ಸ್ವಾಗತ ಕೋರಲಾಯಿತು.

ಶುಕ್ರವಾರ ಮೂಡಲಗಿ ಪಟ್ಟಣಕ್ಕೆ ಆಗಮಿಸಿದ ಮಹರ್ಷಿ ಭಗೀರಥ ಪ್ರತಿಮೆಯ ರಥಕ್ಕೆ ಗುಡ್ಲಮಡ್ಡಿ ಈರಣ್ಣ ದೇವಸ್ಥಾನ ಹತ್ತಿರ ಉಪ್ಪಾರ ಸಮಾಜ ಭಾಂಧವರು ರಥಕ್ಕೆ ಪೂಜೆ ಸಲ್ಲಿಸಿ ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದ, ಕರೇಮ್ಮಾ ದೇವಿ ಸರ್ಕಲ್, ಬಸವೇಶ್ವರ ಸರ್ಕಲ್, ಸಂಗಪ್ಪಣ್ಣ ಸರ್ಕಲ್ ಮುಂಖಾತರ ರಥ ಯಾತ್ರೆ ಜರುಗಿ ಕಲ್ಮೇಶ್ವರ ವೃತ್ತಕ್ಕೆ  ರಥ ಯಾತ್ರೆಯು ಆಗಮಿಸಿತು. 

ಕಲ್ಮೇಶ್ವರ ವೃತ್ತದಲ್ಲಿ  ಉಪ್ಪಾರ ಸಮಾಜದ ಗುರುಗಳಾದ ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿಗಳು ಮಾತನಾಡಿ, ಉಪ್ಪಾರ ಸಮಾಜದ ಜಾಗೃತಿಗಾಗಿ ಸೆ.24 ರಿಂದ  ಆರಂಭವಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಭಗೀರಥ ಭಾರತ ಜನ ಕಲ್ಯಾಣ ರಥ ಯಾತ್ರೆಯು ನಡೆದು ಸದ್ಯ  ಕರ್ನಾಟಕದಲ್ಲಿ ಕೂಡ ವಿವಿಧ ಪಟ್ಟಣದಲ್ಲಿ ರಥ ಯಾತ್ರೆಯು ನಡೆಯುತ್ತಿದ್ದು ಬರುವ 2024ರ ಫೆ.29 ರಂದು ಉಪ್ಪಾರ ಜನಾಂಗದ ವಿವಿಧ ಬೇಡಿಕೆಗಳಾದ ಎಸ್.ಟಿ ಮೀಸಲಾತಿ ಸೌಲಭ್ಯಕ್ಕಾಗಿ ಹಾಗೂ  ದೇಶಾದ್ಯಂತ ಮಹರ್ಷಿ ಭಗೀರಥ ಮಹಾರಾಜರ ಜಯಂತಿ ಆಚರಣೆಗಾಗಿ ಆಗ್ರಹಿಸಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ವಿವಿಧ ರಾಜ್ಯ ಮುಖಂಡರು ಸೇರಿದಂತೆ ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ಸಮಾಜ ಬಾಂಧವರು ಸೇರಿ ಸಮಾವೇಶ ಮಾಡುತ್ತಿರುವ ಹಿನ್ನೆಲೆ ಜಾಗೃತಿಗಾಗಿ ರಥ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. 

ಉಪ್ಪಾರ ಸಮಾಜದ ಹಿರಿಯ ಮುಖಂಡ ಭೀಮಪ್ಪ ಹಂದಿಗುಂದ, ತಾಲೂಕಾ ಉಪ್ಪಾರ ಸಂಘದ ಅಧ್ಯಕ್ಷ ರಾಮಣ್ಣ ಹಂದಿಗುಂದ, ನಗರ ಘಟಕ ಅಧ್ಯಕ್ಷ ಶಿವಬಸು ಹಂದಿಗುಂದ ಮತ್ತು ಮುಖಂಡರಾದ ಶಿವಬಸು ಕಂಕಣವಾಡಿ, ಈಶ್ವರ ಕಂಕಣವಾಡಿ, ಸಿದ್ದಪ್ಪ ಹಮ್ಮನವರ, ಭರಮಣ್ಣ ಉಪ್ಪಾರ, ರಾಜು ಕಸ್ತೂರಿ, ಪರಸಪ್ಪ ಉಪ್ಪಾರ, ಲಕ್ಷ್ಮಣ ಅಡಿಹುಡಿ, ಸುಭಾಸ ಗೋಡ್ಯಾಗೋಳ, ಪರಸಪ್ಪ ತಿಗಡಿ, ಬಸವರಾಜ ಹುಚ್ಚಣ್ಣವರ, ರಮೇಶ ಉಪ್ಪಾರ,  ಸುಭಾಸ ಪೂಜೇರಿ, ಶಿವಪ್ಪ ಅಟಮಟ್ಟಿ, ಮಹಾದೇವ ಮಲಗೌಡರ,  ರಘುವೀರ ಕಪ್ಪಲಗುದ್ದಿ, ಹನಮಂತ ಕಂಕಣವಾಡಿ, ಹಾಲಪ್ಪ ಅಂತರಗಟ್ಟಿ, ಆನಂದ ಮೇಳವಂಕಿ, ಅಜ್ಜಪ್ಪ ಕಂಕಣವಾಡಿ  ಸೇರಿದಂತೆ ಮೂಡಲಗಿ ತಾಲೂಕಿನ ವಿವಿಧ ಗ್ರಾಮಗಳ ಉಪ್ಪಾರ ಸಮಾಜದ ಬಾಂಧವರು ಪಾಲ್ಗೊಂಡಿದರು.

ನಂತರ ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಿಂದ ನಾಗನೂರ, ತುಕ್ಕಾನಟ್ಟಿ,  ಸಂಗನಕೇರಿ ಮಾರ್ಗವಾಗಿ ರಥ ಯಾತ್ರೆಯನ್ನು ಗೋಕಾಕ ವರೆಗೆ ಬೈಕ್ ರ್ಯಾಲಿ ಮುಖಾಂತರ ಬೀಳ್ಕೊಟ್ಟರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group