ಘಟಪ್ರಭಾ: ಸಂಸತ್ತಿನ ಆವರಣದಲ್ಲಿಯೇ ದೇಶದ ಗೌರವಾನ್ವಿತ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಸಾಂವಿಧಾನಿಕ ಸ್ಥಾನದಲ್ಲಿರುವ ಉಪರಾಷ್ಟ್ರಪತಿಯವರನ್ನು ಅನುಕರಿಸಿ ಅಪಹಾಸ್ಯ ಮಾಡಿ ಆ ಸ್ಥಾನಕ್ಕೇ ಅವಮಾನ ಮಾಡಿದ್ದು ಪ್ರಜಾಪ್ರಭುತ್ವಕ್ಕೆ ವಿರೋಧವಾಗಿದೆ. ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಣಕಿಸುತ್ತಿರುವ ದೃಶ್ಯವನ್ನು ಚಿತ್ರೀಕರಣ ಮಾಡುತ್ತಿರುವುದು ಅತ್ಯಂತ ನಾಚಿಕೆಗೇಡಿನ ವರ್ತನೆಯಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಘಟನೆಯ ನಡೆಯುತ್ತಿರುವ ಸಂದರ್ಭದಲ್ಲಿ ಘಟನೆಯನ್ನು ಗಮನಿಸಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ಇಂತಹ ಸಂಸದರು ಆಯ್ಕೆಯಾಗಿ ಬರುತ್ತಿರುವ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಉಪರಾಷ್ಟ್ರಪತಿಗಳನ್ನು ಅಪಹಾಸ್ಯ ಮಾಡುತ್ತಿದ್ದ ಸಂದರ್ಭದಲ್ಲಿ ಹಿರಿಯ ಸಂಸದರು ಮತ್ತು ವಿರೋಧ ಪಕ್ಷದ ನಾಯಕರು ಸಹ ಅವರ್ಯಾರು ಈ ಘಟನೆ ಬಗ್ಗೆ ಪ್ರತಿರೋಧಿಸದೆ ಇರುವುದು ಹೇಯ್ ಕೃತ್ಯ ಎಂದಿದ್ದಾರೆ. ಸಂಸತ್ತಿನ ಹೊರಗೆ ಈ ರೀತಿ ವರ್ತಿಸುವ ಈ ಸಂಸದರು, ಸಂಸತ್ತಿನ ಒಳಗೆ ಯಾವ ರೀತಿ ವರ್ತಿಸಬಹುದು ಎಂದು ನೀವೆ ತರ್ಕಿಸಿ ಎಂದು ಈರಣ್ಣ ಕಡಾಡಿ ಹೇಳಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.