ಸರ್ಕಾರಿ ಕಾರ್ಯಕ್ರಮದ ಭಾವಚಿತ್ರಕ್ಕಾಗಿ ಕಿತ್ತಾಡಿಕೊಂಡ ಸಹೋದರರು

Must Read

ಬೀದರ – ಸರ್ಕಾರಿ ಕಾರ್ಯಕ್ರಮದ ನಿಮಿತ್ತ ಹಾಕಲಾದ ಬ್ಯಾನರ್ ನಲ್ಲಿ ಹಾಕಲಾದ ಫೋಟೋಗಳಿಂದಾಗಿ ಹುಮನಾಬಾದ ಪಾಟೀಲ ಕುಟುಂಬದಲ್ಲಿ ಮತ್ತೆ ಅಸಮಾಧಾನ ಭುಗಿಲೆದ್ದಿದ್ದು ಇಬ್ಬರುಯ ಸಹೋದರರು ಬಹಿರಂಗವಾಗಿಯೇ ಕಿತ್ತಾಡಿಕೊಂಡಿದ್ದಾರೆ.

ಸರ್ಕಾರಿ ಕಾರ್ಯಕ್ರಮದ ಬ್ಯಾನರ್ ನಲ್ಲಿ ಎಮ್ಎಲ್ಸಿಗಳ ಭಾವಚಿತ್ರ ಹಾಕದೆ ಇರೋದಕ್ಕೆ ಆಕ್ರೋಶಗೊಂಡು ಬಿಜೆಪಿ ಶಾಸಕ ಸಿದ್ದು ಪಾಟೀಲ್, ಪರಿಷತ್ ಸದಸ್ಯರಾದ ಭೀಮರಾವ್ ಪಾಟೀಲ್, ಚಂದ್ರಶೇಖರ ಪಾಟೀಲ್ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ದುಬಲಗುಂಡಿಯಲ್ಲಿ ಜೆಜೆಎಂ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮದ ಬ್ಯಾನರ್ ನಲ್ಲಿ ಫೋಟೋ ಹಾಕದಿದ್ದಕ್ಕೆ ತಗಾದೆ ತೆಗೆದ ಪರಿಷತ್ ಸದಸ್ಯರಾದ  ರಾಜಶೇಖರ ಪಾಟೀಲ್ ಪುತ್ರ ಅಭಿಷೇಕ ಪಾಟೀಲ್ ಕಾರ್ಯಕ್ರಮದಲ್ಲಿ ಭಾಗಿಯಾಗದೆ ವಾಪಸಾದರು

ಮಾಜಿ ಸಚಿವ ರಾಜಶೇಖರ ಪಾಟೀಲ್ ಸಹೋದರರಾದ ಭೀಮರಾವ್ ಪಾಟೀಲ್, ಚಂದ್ರಶೇಖರ ಪಾಟೀಲ್, ರಾಜಶೇಖರ ಪಾಟೀಲ್ ಅವರ ಸಹೋದರ ಸಂಬಂಧಿಯಾಗಿರುವ ಬಿಜೆಪಿ ಶಾಸಕ ಸಿದ್ದು ಪಾಟೀಲ್ ಈಗ ಪ್ರತಿ ಸರ್ಕಾರಿ ಕಾರ್ಯಕ್ರಮದಲ್ಲಿ ಕಿತ್ತಾಡಿಕೊಳ್ಳುವುದು ಸಾಮಾನ್ಯ ಎನ್ನುವಂತಾಗಿದ್ದು ಬೀದರ ಜಿಲ್ಲಾ ರಾಜಕಾರಣ ಮುಂದಿನ ದಿನಗಳಲ್ಲಿ ಯಾವ ದಾರಿ ಹಿಡಿಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group