ಕಿತ್ತೂರು ವಿಜಯೋತ್ಸವ ರಾಷ್ಟ್ರೀಯ ವಿಜಯೋತ್ಸವವನ್ನಾಗಿ ಆಚರಿಸಲು ಮನವಿ

Must Read

ಮೂಡಲಗಿ: ಕಿತ್ತೂರು ರಾಣಿ ಚನ್ನಮ್ಮನ 200ನೇ ವಿಜಯೋತ್ಸವವನ್ನು ರಾಷ್ಟ್ರೀಯ ಉತ್ಸವವಾಗಿ ಆಚರಿಸಬೇಕೆಂದು ಕೇಂದ್ರ ಸಂಸ್ಕೃತಿ ಇಲಾಖೆ ಸಚಿವ ಜಿ. ಕಿಶನ್ ರೆಡ್ಡಿ ಅವರಿಗೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ನವದೆಹಲಿಯಲ್ಲಿ ಭೇಟಿಯಾಗಿ  ಮನವಿ ಸಲ್ಲಿಸಿದರು.

1824ರಲ್ಲೇ ಸೂರ್ಯ ಮುಳಗದ ಬ್ರಿಟಿಷ್  ಸಾಮ್ರಾಜ್ಯದ ಎದುರು ಯುದ್ದ ನಡೆಸಿ ಬ್ರಿಟಿಷ್‌ ಅಧಿಕಾರಿ ಥ್ಯಾಕರೆಯ ಹತ್ಯೆಗೈಯುವ ಮೂಲಕ ಸ್ವಾತಂತ್ರ್ಯ ಹೋರಾಟದ ಮೊದಲ ಭಾರತೀಯ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಎಂದು ಸಚಿವರಿಗೆ ವಿವರಿಸಿದರು.

     ಕಿತ್ತೂರು ಸಂಸ್ಥಾನ ಸಣ್ಣ ಸಂಸ್ಥಾನವಾದರೂ ಕೂಡ ಸ್ವಾಭಿಮಾನ ಮತ್ತು ನಾಡಿನ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ದ ಹೊರಾಡಿ 2024ಕ್ಕೆ 200 ವರ್ಷಗಳಾಗಲಿದೆ. ಈ ಹಿನ್ನೆಲೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮನ ತ್ಯಾಗ, ಬಲಿದಾನ ಮತ್ತು ಶೌರ್ಯಗಳ ಸ್ಮರಣೆಗಾಗಿ ಕರ್ನಾಟಕ ಸರ್ಕಾರ ರಾಜ್ಯ ಮಟ್ಟದಲ್ಲಿ ವಿಜಯೋತ್ಸವವನ್ನು ಆಚರಿಸುತ್ತಾ ಬಂದಿದೆ. ಈ 200ನೇ ವರ್ಷದ ಸ್ಮರಣೆಗಾಗಿ ರಾಷ್ಟ್ರೀಯ ಉತ್ಸವವನ್ನು ಆಚರಿಸಲು ಕ್ರಮ ವಹಿಸಬೇಕೆಂದು ವಿನಂತಿಸಿದರು. 

ಈ ಸ್ಮರಣೆಗಾಗಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ ವಿಮಾನ ನಿಲ್ದಾಣವೆಂದು ನಾಮಕರಣ ಮಾಡಬೇಕೆಂದೂ ಕೂಡ ಸಚಿವರಿಗೆ ವಿನಂತಿಸಿದರು. ಸಚಿವರು ಸಂಸದರ ಮನವಿಗೆ ಸ್ಪಂದಿಸಿದ್ದು, ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಈರಣ್ಣ ಕಡಾಡಿ ತಿಳಿಸಿದರು.

ಈ ಸಂದರ್ಭದಲ್ಲಿ ಚಿಕ್ಕೋಡಿ ಲೋಕಸಭಾ ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸಂಸದ ಕೆ. ನಾರಾಯಣ ಉಪಸ್ಥಿತರಿದ್ದರು.

Latest News

ಶಿವರಾತ್ರಿ ಚಂದಾ ನೀಡದ್ದಕ್ಕೆ ಯುವಕನಿಗೆ ಚಾಕು ಇರಿತ !

ಬೀದರ - ಶಿವರಾತ್ರಿ ಆಚರಣೆಗೆ ಕೇಳಿದಷ್ಟು ಚಂದಾ ಕೊಡಲಿಲ್ಲವೆಂಬ ಕಾರಣಕ್ಕೆ ಚಂದಾ ವಸೂಲಿ ಮಾಡ್ತಿದ್ದ ಯುವಕರಿಂದ ಅಂಗಡಿ ಮಾಲೀಕನ ಮೇಲೆ ಹಲ್ಲೆಯಾಗಿದೆಮಹೇಶ್ ಎಂಬ ಯುವಕನ ಕುತ್ತಿಗೆಯ‌...

More Articles Like This

error: Content is protected !!
Join WhatsApp Group