ಎಲ್ಲರೂ ನಿಯಮಿತ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು – ಡಾ. ಪಾಟೀಲ

Must Read

ಮೂಡಲಗಿ: ಸಾರ್ವಜನಿಕರು ನಿಯಮಿತ ತಪಾಸಣೆಗಳ ಮೂಲಕ ಆರೋಗ್ಯದ ಕುರಿತು ಮಾಹಿತಿ ತಿಳಿಯುವ ಮೂಲಕ  ದೇಹಾರೋಗ್ಯ ಕಾಪಾಡಿಕೊಳ್ಳುವದು ಪ್ರಸಕ್ತ ದಿನಗಳಲ್ಲಿ ಅತ್ಯವಶ್ಯಕವಾಗಿದೆ ಎಂದು ಸುರಕ್ಷಾ ಪ್ಯಾರಾ ಮೆಡಿಕಲ್ ಕಾಲೇಜ ಅಧ್ಯಕ್ಷ ಡಾ. ಎಸ್.ಎಸ್ ಪಾಟೀಲ ಹೇಳಿದರು.

ಅವರು ರವಿವಾರ ಪಟ್ಟಣದಲ್ಲಿ ಜರುಗಿದ ಡಾ. ಹೊಂಗಲ ಆಸ್ಪತ್ರೆಯವರ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.  

ಪ್ರತಿಯೊಬ್ಬರಿಗೂ ಆರೋಗ್ಯ ಕಾಳಜಿ ಅವಶ್ಯಕವಾಗಿದೆ. ಪ್ರತಿಯೊಬ್ಬ ಮನುಷ್ಯನು ತಾಯಿಯು ಜನ್ಮ ನೀಡಿದ ನಂತರ ಬಾಹ್ಯ ಜಗತ್ತಿನ ಕಲ್ಪನೆಗೆ ಸಿಗುತ್ತದೆ. ಆದರೆ ಜನ್ಮ ನೀಡುವಲ್ಲಿ ಪ್ರಮುಖ ಪಾತ್ರವಹಿಸುವ ತಾಯಿಯ ಪಾಲನೆ ಪೋಷನೆ ಆರೈಕೆ ಅವಶ್ಯಕವಾಗಿದೆ. ಪ್ರಪಂಚದ ಅರಿವಿಲ್ಲದ ಶಿಶುವಿನ ಆರೈಕೆ ಮಾಡುವ ತಾಯಿಯ ಆರೈಕೆಯನ್ನು ನೂರಿತ ವೈದ್ಯರ ಸಲಹೆಗಳನ್ನು ಪಡೆದು ಆಕೆಯು ಬೇಗ ಗುಣಮುಖವಾಗುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದಾಗ ಮಾತ್ರ ಆರೋಗ್ಯಯುತ ವಾತಾವರಣ ನಿರ್ಮಾಣವಾಗುವದು ಎಂದರು. 

ಡಾ. ಪ್ರವೀಣ ಹೊಂಗಲ ಮಾತನಾಡಿ, ತಾಯಿ ಮಗುವಿನ ಆರೈಕೆಯಲ್ಲಿ ವೈದ್ಯರ ಪಾತ್ರ ಹಾಗೂ ಆಕಸ್ಮಿಕವಾಗಿ ಜರುಗುವ ಅಪಘಾತಗಳ ಸಂಭವಿಸಬಹುದಾದ ಅನಾಹುತಗಳು ಶೀಘ್ರ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ವಿವರಿಸಿದರು.

ಶಿಬಿರದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ ಹೊಂಗಲ, ಯುವ ಮುಖಂಡರಾದ ಭೀಮಶಿ ಮಗದುಮ್, ಹನಮಂತ ತೇರದಾಳ, ಡಾ. ಲಲಿತಾ ಹೊಂಗಲ, ಡಾ. ಸಚಿನ ಬೆನಚನಮರಡಿ, ಡಾ. ಗೋಪಾಲ ಹೊಂಗಲ, ಪ್ರಯೋಗಾಲಯದ ಪ್ರಕಾಶ ಲಾಲಿ, ಔಷಧಾಲಯದ ಲಕ್ಷ್ಮಣ ಶಿವಾಪೂರ ಹಾಗೂ ಆಸ್ಪತ್ರೆಯ ಸಿಬ್ಬಂದಿವರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group