ಮೂಡಲಗಿ : ಪಾಲಕರು ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಅರಿವು ಇಲ್ಲದೇ ಕೇವಲ ತಮ್ಮ ಜವಾಬ್ದಾರಿಯನ್ನು ಕಳೆದುಕೊಳ್ಳಲು ಹಾಗೂ ರಕ್ತ ಸಂಬಂಧ ಉಳಿಸಿಕೊಳ್ಳಲು ಬಾಲ್ಯ ವಿವಾಹ ಮಾಡಲು ಮುಂದಾಗುತ್ತಾರೆ ಎಂದು ಮಧು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇವಾ ಸಂಘದ ಅಧ್ಯಕ್ಷೆ ಎ.ಎಚ್.ಗೊಡ್ಯಾಗೋಳ ಖೇದ ವ್ಯಕ್ತಪಡಿಸಿದರು.
ಇತ್ತೀಚೆಗೆ ಮಧು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇವಾ ಸಂಘ( ರಿ) ಮೂಡಲಗಿ ಹಾಗೂ ಸರ್ಕಾರಿ ಹೆಣ್ಣುಮಕ್ಕಳ ಮಾದರಿ ಶಾಲೆ ಮೂಡಲಗಿ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬಡತನ, ಅನಕ್ಷರತೆ, ಮೂಢನಂಬಿಕೆ ಬಾಲ್ಯ ವಿವಾಹಕ್ಕೆ ಮುಖ್ಯ ಕಾರಣವಾಗಿದ್ದು, ಪಾಲಕರಿಗೆ ಬಾಲ್ಯವಿವಾಹದ ಕುರಿತ ಜಾಗೃತಿ ಮೂಡಿಸಿದಾಗ ಬಾಲ್ಯ ವಿವಾಹ ತಡೆಗಟ್ಟಬಹುದು ಎಂದರು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ರೇಳೇಕರ, ಶಾಲಾ ಎಸ್ ಡಿ ಎಮ್ ಅಧ್ಯಕ್ಷ ಬಿಚ್ಚು ಝಂಡೇಕುರುಬರ, ವಕೀಲರಾದ ಎಮ್. ಭಿ. ಬಾಗೋಜಿ, ಆಯ್. ಎಂ. ಹಿರೇಮಠ, ಶಾಲಾ ಮುಖ್ಯಪಾಧ್ಯಾಯರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.ಶಾಲಾ ಶಿಕ್ಷಕರಾದ ಎ. ಪಿ. ಪರಸನ್ನವರ ನಿರೂಪಣೆ ಮಾಡಿದರು.