ಸಿಂದಗಿ: ಮನೆಯಿಂದ ಶಾಲೆಗೆ ಬಂದ ಮಗುವಿನಲ್ಲಿ ಉತ್ತಮ ಸಂಸ್ಕಾರ ತುಂಬಿ ಪೂರ್ಣಪ್ರಜ್ಞನನ್ನಾಗಿ ಮಾಡಿ ಸಮಾಜಕ್ಕೆ ಕೊಡುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಆದರ್ಶ ಶಿಕ್ಷಕ ಎಚ್.ಟಿ. ಕುಲಕರ್ಣಿ ಹೇಳಿದರು.
ಪಟ್ಟಣದ ಕ್ರಿಯೇಟಿವ್ ಕಿಡ್ಸ್ ಹೋಮ್ ಸಭಾಭವನದಲ್ಲಿ ಹಮ್ಮಿಕೊಂಡ ಕ್ರಿಯೇಟಿವ್ ಕಿಡ್ಸ್ ಫೆಸ್ಟಿವಲ್-2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಮಕ್ಕಳ ಹೃದಯವು ಹದವಾದ ಭೂಮಿಯಿದ್ದಂತೆ ಅವರಿಗೆ ಶಿಕ್ಷಣ ನೀಡುವ ಜೊತೆಗೆ ಸಂಸ್ಕಾರ ನೀಡಬೇಕು. ಉತ್ತಮ ನಾಗರಿಕರನ್ನಾಗಿ ಸಿದ್ದಪಡಿಸಬೇಕು. ಮಕ್ಕಳಿಗೆ ಪರಿಸರದ ಪರಿಕಲ್ಪನೆ ಮೂಡಿಸಬೇಕು. ಕ್ರಿಯೇಟಿವ್ ಕಿಡ್ಸ್ ಹೋಮ್ ಪೂರ್ವಪ್ರಾಥಮಿಕ ಶಾಲೆ ತನ್ನ ವಾರ್ಷಿಕ ಸ್ನೇಹ ಸಮ್ಮೇಳವನ್ನು ಕ್ರಿಯೇಟಿವ್ ಕಿಡ್ಸ್ ಫೆಸ್ಟಿವಲ್-2024 ಎಂದು ಈ ದೇಶಪ್ರೇಮದ ಬಗ್ಗೆ ಪರಿಕಲ್ಪನೆ ಇಟ್ಟುಕೊಂಡು ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಈ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜೊತೆಗೆ ಸಂಸ್ಕಾರ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
Aರಾಷ್ಟ್ರಪ್ರಶಸ್ತಿ ಪುರಸ್ಕೃತ ಆದರ್ಶ ಶಿಕ್ಷಕ ಹ.ಮ. ಪೂಜಾರ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಕ್ರಿಯೇಟಿವ್ ಕಿಡ್ಸ್ ಹೋಮ್ ಮೌಲ್ಯಾಧಾರಿತ ಶಿಕ್ಷಣ ನೀಡುವ ಜೊತೆಗೆ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಅವರ ವ್ಯಕ್ತಿತ್ವ ರೂಪಿಸುತ್ತಿವೆ ಎಂದು ಹೇಳಿದರು.
ಮುಖ್ಯಅತಿಥಿ ಶ್ರೀ ಸಿದ್ದೇಶ್ವರ ಬ್ಯಾಂಕ್‍ನ ವಿಸ್ತರಣಾಧಿಕಾರಿ ಅರವಿಂದ ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತುವುಂಟು ಮಾಡಲು ಅವರನ್ನು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಸ್ಥಳಿಯ ಕ್ರೀಯೇಟಿವ್ ಕಿಡ್ಸ್ ಹೋಮದ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ ಸಂಸ್ಥೆ ಸಂಸ್ಥಾಪಕ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಹ.ಮ.ಪೂಜಾರ ಮಾತನಾಡಿ, ಮಕ್ಕಳಿಗೆ ಸಾಂಪ್ರದಾಯಿಕ ಶಿಕ್ಷಣ ನೀಡುವ ಜೊತೆಗೆ ಅವರ ವ್ಯಕ್ತಿತ್ವ ರೂಪಿಸುವ ಚಟುವಟಿಕೆಗಳನ್ನು ಶಾಲೆ ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳಿಗೆ ಉನ್ನತ ಶಿಕ್ಷಣ, ಮೌಲ್ಯಾಧಾರಿತ ಸಂಸ್ಕಾರ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೋಡಗಿಸಿಕೊಳ್ಳವುದು ಶಿಕ್ಷಣ ಸಂಸ್ಥೆಯ ಧ್ಯೇಯವಾಗಿದೆ ಎಂದು ತಿಳಿಸಿದರು.
ಸಂಸ್ಥೆ ಕಾರ್ಯದರ್ಶಿ, ಮುಖ್ಯ ಗುರುಮಾತೆ ಡಾ.ಜ್ಯೋತಿ ರಮೇಶ ಪೂಜಾರ, ಸಂಸ್ಥೆ ಅಧ್ಯಕ್ಷ ರಮೇಶ ಪೂಜಾರ ಅವರು ವೇದಿಕೆ ಮೇಲೆ ಇದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಮೆಡಲ್ ನೀಡಿ ಗೌರವಿಸಿದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಎಂ.ಎಂ. ಹೂಗಾರ, ಆನಂದ ಹೂಗಾರ, ಕಸ್ತೂರಿ ಪೂಜಾರಿ, ಶಿಕ್ಷಕಿಯರಾದ ಮಂಗಲಾ ಬಮ್ಮಣ್ಣಿ, ಸಾದನಾ ಇಮಡೆ, ಗೌರಿ ಪಾಟೀಲ, ವಿದ್ಯಾರ್ಥಿಗಳು, ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮುಖ್ಯಗುರುಮಾತೆ ಡಾ.ಜ್ಯೋತಿ ಪೂಜಾರ ವರದಿ ವಾಚಿಸಿದರು. ರಮೇಶ ಪೂಜಾರ ಸ್ವಾಗತಿಸಿದರು. ಶಾಂತಾ ಮೋಸಲಗಿ ನಿರೂಪಿಸಿದರು. ಅಶ್ವಿನಿ ಲೋಣಿ ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ವಿಜಯಪೂರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸಾಮೀಜಿ ಅವರ ಪುಣ್ಯಸ್ಮರಣೆ ನಿಮಿತ್ತ ಗೌರವ ನಮನ ಸಲ್ಲಿಸಲಾಯಿತು.