ಸಾಹಿತ್ಯ ಚಿಂತನೆಗಳನ್ನು ಮುಂದಿನ ತಲೆಮಾರಿಗೂ ತಲುಪಿಸಬೇಕು – ಡಾ. ಭೇರ್ಯ ರಾಮಕುಮಾರ್

Must Read

ಹಿರಿಯ ಸಾಹಿತಿಗಳ ಚಿಂತನೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕಾದ ಜವಾಬ್ದಾರಿ ಸಾಹಿತ್ಯಾತ್ಮಕ  ಸಂಸ್ಥೆಗಳಿಗೆ ಸೇರಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಭೇರ್ಯ ರಾಮಕುಮಾರ್  ನುಡಿದರು.

ಮೈಸೂರಿನ ಅಭಿರುಚಿ ಸಂಸ್ಥೆಯು ಏರ್ಪಡಿಸಿದ್ದ ಆಕಾಶವಾಣಿಯ ನಿವೃತ್ತ  ಅಧಿಕಾರಿ ಎನ್. ವಿ. ರಮೇಶ್ ಅವರ,  ನಾನು ಹೆಮ್ಮೆಯ ಕನ್ನಡಿಗ,ಆರೋಗ್ಯ ಸಂಪದ,  ಅಮೃತ ಸಿಂಚನ, ಅರೋಗ್ಯ ಲಕ್ಷ್ಮಿ ಕೃತಿಗಳ ಲೋಕಾರ್ಪಣೆ ಹಾಗೂ ಸಾಹಿತ್ಯ ಮತ್ತು ಅರೋಗ್ಯ ಕುರಿತ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದರು.     

ಕವಿಗಳು ಸಮಾಜದ ಸಾಂಸ್ಕೃತಿಕ ರಾಯಭಾರಿಗಳು. ಸಮಾಜದ ಸರ್ವತೋಮುಖ ಅಭ್ಯುದಯ  ಕವಿಗಳ ಕನಸು. ಇಂತಹ ಕವಿಗಳು ರಚಿಸಿದ ಕೃತಿಗಳು ಸಮಾಜದ ಎಲ್ಲಾ ವರ್ಗದ ಓದುಗರನ್ನೂ ತಲುಪಬೇಕು. ಇದಕ್ಕಾಗಿ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಸಂಘ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಕನ್ನಡ ಪುಸ್ತಕ ಓದುವ ಅಭಿರುಚಿ ಹೆಚ್ಚಿಸಲು ಕಾರ್ಯಕ್ರಮ ರೂಪಿಸಬೇಕು ಎಂದು ಕರೆ ನೀಡಿದರು.

ಇತ್ತೀಚೆಗೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಕನ್ನಡ ನಾಡು – ನುಡಿ, ಸಾಹಿತ್ಯ ಹಾಗೂ ಸಂಸ್ಕೃತಿಗಳ ಮೇಲೆ ಅಪಾರ ದುಷ್ಪರಿಣಾಮ ಉಂಟು ಮಾಡಲಿದೆ ಎಂದು ಭೇರ್ಯ ರಾಮಕುಮಾರ್ ಅತಂಕ  ವ್ಯಕ್ತಪಡಿಸಿದರು.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕನ್ನಡ ಪತ್ರಿಕೆ ಹಾಗೂ ಪುಸ್ತಕ ಓದುವವರ ಪ್ರಮಾಣ ಕಡಿಮೆಯಾಗುತ್ತಿದೆ. ಕನ್ನಡ ಭಾಷೆಯ ಭವಿಷ್ಯದ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದವರು ವಿಷಾದ ವ್ಯಕ್ತಪಡಿಸಿದರು.

ಹಿರಿಯ ಕವಿ ಜಯಪ್ಪ ಹೊನ್ನಾಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಾಹಿತಿ ಎನ್. ವಿ. ರಮೇಶ್ ಅವರ ಕೃತಿಗಳಲ್ಲಿ ಮಾನವೀಯ ಚಿಂತನೆ ಇದೆ. ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರೂ ಸೇರಿದಂತೆ ಎಲ್ಲಾ ವರ್ಗದ ಜನರ ಆರೋಗ್ಯದ ಬಗ್ಗೆ ಅಪಾರ ಕಾಳಜಿ ಇದೆ. ಆಕಾಶವಾಣಿಯಲ್ಲಿ ಕಾರ್ಯಕ್ರಮ ಅಧಿಕಾರಿಗಳಾಗಿ  ಸಮಾಜವನ್ನು ಕಾಡುತ್ತಿರುವ ವಿವಿಧ ಸಮಸ್ಯೆಗಳನ್ನು ಚಿತ್ರೀಸಿ, ಅವುಗಳ ನಿವಾರಣೆಗಾಗಿ ಶ್ರಮಿಸಿರುವ ಎನ್. ವಿ. ರಮೇಶ್ ಅವರು ನಿವೃತ್ತಿಯ ನಂತರವೂ ಸಾಹಿತ್ಯ ಕೃತಿಗಳ ಮೂಲಕ ಸಾಮಾಜಿಕ ಜಾಗೃತಿ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಸಂಗತಿ ಎಂದು ಶ್ಲಾಘಸಿದರು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ  ಮಡ್ಡಿಕೆರೆ ಗೋಪಾಲ್ ಮಾತನಾಡಿ  ಎನ್. ವಿ. ರಮೇಶ್ ಅವರು ತಮ್ಮ ಸಾಹಿತ್ಯ ಕೃತಿಗಳ ಮೂಲಕ ಸಮಾಜದಲ್ಲಿ ಆರೋಗ್ಯ ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ. ಅವರ ಸೇವೆಯನ್ನು ಸಮಾಜ ಹಾಗೂ ಸರ್ಕಾರ ಗುರ್ತಿಸಬೇಕು ಎಂದು ನುಡಿದರು.

ನಂತರ ನಡೆದ ವಿಚಾರ ಸಂಕಿರಣದಲ್ಲಿ  ಸಾಹಿತಿಗಳಾದ ವಿ. ಕೆ. ಕುಲಕರ್ಣಿ, ಡಾ. ಆಗುಂಬೆ ನಟರಾಜ್, ಎನ್. ವಿ. ರಮೇಶ್, ಡಾ. ಲೀಲಾ ಪ್ರಕಾಶ್, ಸುಜಾತ ರವೀಶ್,ಶ್ರೀಮತಿ ಲಲಿತ ಹಾಸನ, ಸವಿತಾ ಪ್ರಭಾಕರ್ ಮೊದಲಾದವರು ಅರೋಗ್ಯ ಜಾಗೃತಿ ಕುರಿತು ಮಾತನಾಡಿದರು. ನಂತರ ಕವಯತ್ರಿ ಶ್ರೀಮತಿ ಯಶೋದಾ ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಎನ್. ವಿ. ರಮೇಶ್, ಶ್ರೀಮತಿ ಹೇಮಾ ರಮೇಶ್, ಪರಮೇಶ್ ಉತ್ತನಹಳ್ಳಿ ಮೊದಲಾದವರು ವೇದಿಕೆಯಲ್ಲಿ ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group