ಗುರ್ಲಾಪೂರ ಸೊಸಾಯಿಟಿಗೆ ಅವಿರೋಧ ಆಯ್ಕೆ

Must Read

ಮೂಡಲಗಿ: ಸಮೀಪದ ಗುರ್ಲಾಪೂರ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಿಟಿ ಲಿ. ಗುರ್ಲಾಪೂರ ಇದರ 2024ನೇ ಸಾಲಿನಿಂದ ಮುಂದಿನ 5 ವರ್ಷದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಶಿವಬಸು ಇಟನಾಳ, ಉಪಾಧ್ಯಕ್ಷರಾಗಿ ಭೀಮಪ್ಪ ಮರಾಠೆ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ ಕೆ ಗೋಖಲೆ  ಪತ್ರಿಕಾ ಮಾಧ್ಯಮದವರಿಗೆ ತಿಳಿಸಿದ್ದಾರೆ.

ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಅಧ್ಯಕ್ಷರಾದ ಶಿವಬಸು ಇಟನಾಳರವರು ಮಾತನಾಡಿ, ಸಂಘದ ಅಬಿವೃದ್ದಿಗಾಗಿ ಎಲ್ಲರೂ ಕೊಡಿಕೊಂಡು ದುಡಿಯುತ್ತೇವೆ ಸಂಘದ ಸಾಲ ಪಡೆದ ಸಾಲಗಾರರು ನಮ್ಮ ಕುಟುಂಬದವರಿದ್ದಂತೆ ಸಕಾಲದಲ್ಲಿ ಸಾಲ ಪಡೆದು ಸರಿಯಾದ ಅವಧಿಯಲ್ಲಿ ಸಾಲ ಮರುಪಾವತಿ ಮಾಡುವಂತೆ ಕಾರ್ಯ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ನೂತನವಾಗಿ ಅವಿರೋಧವಾಗಿ ಆಯ್ಕೆಯಾದ ಆಡಳಿತ ಮಂಡಳಿ ನಿರ್ದೇಶಕರಾದ ಕೆಂಪಣ್ನಾ.ಆರ್ ದೇವರಮನಿ, ಬಸಪ್ಪ ನಿಂ ಮುಗಳಖೋಡ, ಪುಂಡಲಿಕ ರಾ. ಮುಗಳಖೋಡ, ಮಹಾದೇವ ಬ ಕುಲಗುಡ,  ಶಂಕರ ಭೀ ಮುಗಳಖೋಡ, ಶಿದಗೌಡ ಶಿ. ಮುಗಳಖೋಡ, ಅಪ್ಪಯ್ಯ ಮ ಹಳ್ಳೂರ,  ಶ್ರೀಮತಿ ಕಸ್ತೂರಿ ವಿ. ಮುಗಳಖೋಡ, ಮಹಾದೇವಿ ದು ಮುಗಳಖೋಡ, ಮಹಾದೇವ ನಡವಿನಕೇರಿ, ಶಿವಪ್ಪ ರಾ ಟಪಾಲದಾರ ಇವರನ್ನು  ಸೂಸಾಯಿಟಿಯ ಮುಖ್ಯಕಾರ್ಯನಿರ್ವಾಹಕರಾದ ಶ್ರೀಶೈಲ ಕಾ ಮುಗಳಖೊಡ ಹಾಗು ಚುನಾವಣೆ ಅಧಿಕಾರಿಯವರಾದ ಬಿ ಕೆ ಗೋಖಲೆ ರವರು ಸತ್ಕರಿಸಿದರು. ಈ ಸಂದರ್ಭದಲ್ಲಿ ಗ್ರಾಮದ ವೇದಮೂರ್ತಿ ಚಿದಾನಂದ ಹಿರೇಮಠ,ವಿರುಪಾಕ್ಷಿ ಭೀ ಮುಗಳಖೋಡ, ದುಂಡಪ್ಪ ಮುಗಳಖೋಡ, ಯಲ್ಲಪ್ಪ ಸುಳ್ಳನವರ, ಸದಾಶಿವ ನೇರ್ಲಿ, ಕರಿಯಪ್ಪ ಕಂಬಳಿ ಹಾಗು ಸಂಘದ ಸದಸ್ಯರು ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group