ಮೆಚ್ಚನ್ನವರಿಗೆ “ರಾಷ್ರೀಯ ಸೇವಾ ರತ್ನ” ಪ್ರಶಸ್ತಿ

Must Read

ಗುರ್ಲಾಪೂರ: ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣ ಕನ್ನಡ ಭವನ ನಯನ ಸಭಾಂಗಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗದ ಹುಕ್ಕೇರಿ ಘಟಕದಲ್ಲಿ  ನಿರ್ವಾಹಕರಾಗಿ ಕಾರ್ಯನಿರ್ವಹಿಸುವ ಶ್ರೀಮಂತ ಯ ಮೆಚ್ಚನ್ನವರ ಅವರಿಗೆ “ರಾಷ್ಟ್ರೀಯ ಸೇವಾ ರತ್ನ” ಪ್ರಶಸ್ತಿಯನ್ನು ಅವರ ಸಾಧನೆಯನ್ನು ಗುರುತಿಸಿ ನೀಡಲಾಯಿತು.

ಮೆಚ್ಚನ್ನವರ ಅವರು ತಮ್ಮ ಕೆಲಸದಲ್ಲಿ ಪ್ರಯಾಣಿಕರ ಜೊತೆ ತಮ್ಮ ಕುಟುಂಬದವರಂತೆ ಮಾತನಾಡುತ್ತಾ ವೃದ್ದರಿಗೆ ತಮ್ಮ ಕೈಲಾದಷ್ಟು ಸಹಾಯ ಸಹಕಾರ ನೀಡುತ್ತಾ ಮೇಲಧಿಕಾರಿಗಳ ಮೆಚ್ಚುಗೆಯನ್ನು ಪಡೆದಿರುತ್ತಾರೆ. ತಾವು ಹಲವಾರು ಘಟಕಗಳಲ್ಲಿ ಉತ್ತಮ ರೀತಿಯಾಗಿ ಸೇವೆ ಮಾಡಿರುತ್ತಾರೆ. ಅವರು ಮಾಡುವ ಕೆಲಸವು ಇನ್ನೂ ಹಲವಾರು ಜನರಿಗೆ ಮಾದರಿಯಾಗಲಿ ಎಂದು ಗಣ್ಯ ಮಾನ್ಯರು ಗುರು ಹಿರಿಯರು ಆಶಿಸಿದರು.

ಈ ಪ್ರಶಸ್ತಿಯನ್ನು  ನಾಡಿನ ಹೆಸರಾಂತ ಸ್ವಾಮೀಜಿಗಳು, ಸಾಹಿತಿಗಳು, ಗಣ್ಯಮಾನ್ಯರು ಸೇರಿ ಮೆಚ್ಚನ್ನವರ ಅವರಿಗೆ ನೀಡಿ ಗೌರವಿಸಿ ಸನ್ಮಾನಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group