ಪರಿಶುದ್ಧತೆಯೇ ಪರಮಾತ್ಮ.ಗುರುವಿನ ಆರಾಧನೆ ನಮ್ಮ ಪರಂಪರೆಯಾಗಿದೆ – ಶ್ರೀ ಸಿದ್ಧಶಿವಯೋಗಿ ಸ್ವಾಮೀಜಿ

Must Read

ಮುನವಳ್ಳಿ –  “ದೀಪ ಮತ್ತೊಂದು ದೀಪವನ್ನು ಹಚ್ಚುವಂತೆ ಸತ್ಸಂಗದಲ್ಲಿ ಇದ್ದವರು ಶಾಸ್ತ್ರಮುಖೇನ ತಮ್ಮ ಜೀವನದಲ್ಲಿ ಮತ್ತೊಬ್ಬರಿಗೆ ಒಳ್ಳೆಯದನ್ನು ಹೇಳುವರು. ಪರಿಶುದ್ಧತೆಯೇ ಪರಮಾತ್ಮ. ಶೃದ್ಧೆ ಭಕ್ತಿ ಇದ್ದವರಿಗೆ ಭಗವಂತನ ಆರಾಧನೆ ಸುಲಭ. ಯಶವಂತಗೌಡರದು ಗುರುವಿನ ಆರಾಧನೆಯ ಫಲ. ಗುರುವಿನ ಆರಾಧನೆ ನಮ್ಮ ಪರಂಪರೆಯಾಗಿದೆ. ಇಂಥ ಶಾಸ್ತ್ರವನ್ನು ಸುಲಭವಾಗಿ ಜನಸಾಮಾನ್ಯರಿಗೂ ತಿಳಿಯುವ ಹಾಗೆ ಹೇಳುವ ಜೊತೆಗೆ ಬರೆಯುವ ಕಲೆ ಯಶವಂತಗೌಡರಿಗೆ ಸಿದ್ಧಿಸಿದೆ. ಈ ದೃಷ್ಟಿಯಲ್ಲಿ ಶೋಧ ಮಹತ್ವಪೂರ್ಣ ಕೃತಿ. ಈ ಹಿಂದೆ ಅವರು ಸ್ಪೂರ್ತಿ ಗ್ರಂಥವನ್ನು ಬರೆದು ಓದುಗರಿಗೆ ಅನುಕೂಲ ಕಲ್ಪಿಸಿದ್ದು ಈಗ ಹಳೆಗನ್ನಡ ಶಾಸ್ತ್ರವನ್ನು ಹೊಸಗನ್ನಡ ರೂಪದಲ್ಲಿ ಎಲ್ಲರಿಗೂ ತಿಳಿಯುವ ಹಾಗೆ ಬರೆದು ಶೋಧ ಎನ್ನುವ ಕೃತಿಯ ಮೂಲಕ ಬರೆದಿರುವರು” ಎಂದು ದೇವರ ಹುಬ್ಬಳ್ಳಿಯ ಶ್ರೀ ಸಿದ್ಧಾಶ್ರಮದ ಶ್ರೀ ಸಿದ್ದಶಿವಯೋಗಿ ಸ್ವಾಮೀಜಿಯವರು ಹೇಳಿದರು.

ಅವರು ಸಿಂದೋಗಿ ಮುನವಳ್ಳಿಯ ನಿತ್ಯಾನಂದ ಸತ್ಸಂಗ ಆಶ್ರಮದಲ್ಲಿ ಜರುಗಿದ ಯಶವಂತಗೌಡರು ರಚಿಸಿದ “ಶೋಧ” ಕೃತಿ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಮುಕ್ತಾನಂದ ಸ್ವಾಮೀಜಿಯವರು ಮಾತನಾಡುತ್ತ “ಈ ದಿನ ಗುರು ಆರಾಧನೆ ಜೊತೆಗೆ ಶೋಧ ಕೃತಿ ಲೋಕಾರ್ಪಣೆಗೊಳಿಸುತ್ತಿರುವುದು ಮಹತ್ವದ ಕಾರ್ಯಕ್ರಮ ಶಾಸ್ತ್ರದ ಸಾರವನ್ನು ವೈಜ್ಞಾನಿಕ ಹಾಗೂ ವ್ಯವಹಾರಿಕವಾಗಿ ತಿಳಿಯುವಂತೆ ಬರೆಯುವುದು ಸಾಮಾನ್ಯವಾದುದಲ್ಲ. ಅಂತಹ ಬರವಣಿಗೆ ಯಶವಂತ ಗೌಡರಿಗೆ ಕರಗತವಾಗಿದೆ.ಅವರ ಗುರುಗಳಾದ ವಿಜಯಾನಂದರ ಶಾಸ್ತ್ರಾಭ್ಯಾಸವೂ ಇದಕ್ಕೆ ಕಾರಣ.ಇಂಥ ಗ್ರಂಥವನ್ನು ಹಲವಾರು ಪೂಜ್ಯರು ಮೆಚ್ಚಿರುವುದು ಶ್ಲಾಘನೀಯ” ಎಂದರು.

ಲೇಖಕ ಯಶವಂತ ಗೌಡರ ಮಾತನಾಡುತ್ತ “ತಮ್ಮ ಗುರುಗಳಾದ ವಿಜಯಾನಂದರ ಪ್ರವಚನವನ್ನು ಸಂಗ್ರಹಿಸಿ ಪುಸ್ತಕ ಹೊರ ತರುವ ಸಂದರ್ಭದಲ್ಲಿ ಇಂಥದೊಂದು ಗ್ರಂಥ ಹೊರತರುವ ಆಲೋಚನೆ ಮೂಡಿತ್ತು. ಅದನ್ನು ಗುರುದೇವರು ಕರುಣಿಸಿದರು. ಅಂದು ೧೯೮೬ ಕಾರ್ತಿಕ ಏಕಾದಶಿಗೆ ಮುನವಳ್ಳಿಯಲ್ಲಿ ಸತ್ಸಂಗ ಆರಂಭವಾಯಿತು. ೩೨ ವರ್ಷದ ಹಿಂದೆ ಈ ಮಠದ ಕಟ್ಟಡ ಉದ್ಘಾಟನೆಯಾದ ಸಂದರ್ಭ ಇಂದು ಈ ಗ್ರಂಥ ಕೂಡ ಅದೇ ಸಂದರ್ಭದಂದು ಲೋಕಾರ್ಪಣೆಗೊಳ್ಳುತ್ತಿರುವುದು ಗುರು ಕರುಣೆ. ಜನ ಸಾಮಾನ್ಯರು ಇಂಥ ಗ್ರಂಥವನ್ನು ಓದಿದರೆ ವೇದಾಂತ ಸಾರ ಅರಿಯುವ ಜೊತೆಗೆ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯ. ಈಗಾಗಲೇ ನಮ್ಮ ಸತ್ಸಂಗದಲ್ಲಿ ತೊಡಗಿರುವವರಿಗೆ ಇದರಲ್ಲಿನ ಅಂಶಗಳು ತಿಳಿದಿರುವಂತೆ ಹೆಚ್ಚಿನದನ್ನು ತಿಳಿಯಲು ಈ ಕೃತಿ ಅನುಕೂಲ” ಎಂದು ಕೃತಿ ಮೂಡಿ ಬಂದ ಬಗೆಯನ್ನು ತಿಳಿಸಿದರು. 

ಶರಣೆ ಮುಕ್ತಾತಾಯಿ ಮಾತನಾಡಿ “ಸತ್ಯವನ್ನು ತಿಳಿದುಕೊಳ್ಳ ಬಯಸುವವರಿಗೆ ಸತ್ಸಂಗ ಎಷ್ಟು ಮಹತ್ವದ್ದೋ ಅಷ್ಟೇ ಸತ್ಸಂಗಿಗಳ ಗ್ರಂಥ ಕೂಡ ಮಹತ್ವದ್ದು. ಶೋಧ ಬದುಕಿನ ಅಧ್ಯಾತ್ಮದ ಶೋಧನೆಯಾಗಿದೆ.ಇಂಥ ಕೃತಿಗಳು ಸತ್ಸಂಗಿಗಳಾದ ಯಶವಂತ ಗೌಡರಿಂದ ಇನ್ನೂ ಹೆಚ್ಚು ಹೆಚ್ಚು ಮೂಡಿಬರಲಿ”ಎಂದು ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಸುಳ್ಳದ ಬಸವರಾಜ ಸ್ವಾಮಿಗಳು. ಮಲ್ಲೂರಿನ ಶ್ರೀಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸತ್ಸಂಗಿಗಳಾದ ಬಸವರಾಜ ಹಲಗತ್ತಿ, ಚನ್ನಬಸು ನಲವಡೆ, ಪಂಚನಗೌಡರ ಬಿಕ್ಕನಗೌಡರ, ವಸಂತ ಸಣಕಲ್, ಮಂಜುನಾಥ ಬೆಟಗೇರಿ, ಅನುರಾಧ ಬೆಟಗೇರಿ, ಅನಸೂಯ ಹೊನ್ನಳ್ಳಿ, ಸವಿತಾ ಕೆಂದೂರ, ಸುಧಾ ಗೌಡರ,  ಬಿ.ಬಿ.ಹುಲಿಗೊಪ್ಪ, ವೀರಣ್ಣ ಕೊಳಕಿ, ವೈ.ಬಿ.ಕಡಕೋಳ ಸೇರಿದಂತೆ ಸತ್ಸಂಗ ಬಳಗದ ಸದಸ್ಯರು ಮುನವಳ್ಳಿ ಸಿಂದೋಗಿ ಮಲ್ಲೂರು, ಧಾರವಾಡ, ಕುರುವಿನಕೊಪ್ಪ ಸುತ್ತಮುತ್ತಲಿನ ಗ್ರಾಮಗಳ ಶ್ರೀ ಮಠದ ಸದ್ಭಕ್ತರು ಉಪಸ್ಥಿತರಿದ್ದರು.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group