spot_img
spot_img

ಯಶಸ್ವಿಯಾಗಿ ನಡೆದ ಸಂಕ್ರಾಂತಿ ಸಂಭ್ರಮದ ರಾಜ್ಯಮಟ್ಟದ ಕವಿಗೋಷ್ಠಿ

Must Read

spot_img
- Advertisement -

ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ, ಹಾಸನ ಮತ್ತು ಕರ್ನಾಟಕ ರಾಜ್ಯ ಬರಹಗಾರರ ಸಂಘ ರಾಜ್ಯ ಘಟಕ, ಹೂವಿನಹಡಗಲಿ ಇವರ  ಸಂಯುಕ್ತ ಆಶ್ರಯದಲ್ಲಿ ದಿನಾಂಕ ೧೧/೦೧/೨೦೨೪ ಗುರುವಾರ ಸಂಜೆ ೫.೦೦ಗಂಟೆಗೆ ಆಯೋಜಿಸಲಾಗಿದ್ದ ರಾಜ್ಯಮಟ್ಟದ “ಸಂಕ್ರಾಂತಿ ಸಂಭ್ರಮ” ಆನ್‌ಲೈನ್ ಕವಿಗೋಷ್ಠಿ ಕಾರ್ಯಕ್ರಮ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ಪ್ರ, ಸಾ, ಸಾ, ಅ, ದ ಸಂಸ್ಥಾಪಕರು ಮುಂದಾಳತ್ವದಲ್ಲಿ ಸಾಂಗವಾಗ ನೆರವೇರಿತು.

ವಿಶೇಷ ಆಹ್ವಾನಿತರಾಗಿ ಗಣೇಶ್ ಕಾಸರಗೋಡು ಮತ್ತು  ಗೊರೂರು ಶಿವೇಶ್ ರವರು ಭಾಗವಹಿಸಿದ್ದರು. ಪತ್ರಕರ್ತರು, ಚಲನಚಿತ್ರ ವಿಮರ್ಶಕರು ಆಗಿರುವ ಗಣೇಶ ಕಾಸರಗೋಡು ಮತ್ತು ಇವರ ಪತ್ನಿ ಗಾಯಿತ್ರಿ ಗಣೇಶ್ ರವರನ್ನು ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ಬರಹಗಾರರ ಸಂಘ ರಾಜ್ಯ ಘಟಕ ಇವರ ವತಿಯಿಂದ ದಂಪತಿಗಳನ್ನು ಸನ್ಮಾನಿಸಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಧು ನಾಯಕ್ ಲಂಬಾಣಿ, ಗೊರೂರು ಅನಂತರಾಜು, ಜಿಲ್ಲಾಧ್ಯಕ್ಷರು ಕ.ರಾ.ಬ.ಸಂ ಇವರು ವಹಿಸಿದ್ದರು.ಉದ್ಘಾಟನೆಯನ್ನು  ಚು.ಸಾ.ಪ ಚನ್ನರಾಯಪಟ್ಟಣ ಅಧ್ಯಕ್ಷರಾದ  ಶಂಕರಾಚಾರ್ ಇವರು ವಹಿಸಿಕೊಂಡಿದ್ದರು.    

- Advertisement -

ಮುಖ್ಯ ಅತಿಥಿಗಳಾಗಿ ಶ್ರೀಮತಿ ಶುಭ ಮಂಗಳ, ಜಿಲ್ಲಾಧ್ಯಕ್ಷರು ಪ್ರ .ಸಾ.ಸಾ.ಅ.ಪ್ರ. ಹಾಸನ, ಶ್ರೀಮತಿ ಸಿ. ಸುವರ್ಣ ಕೆ.ಟಿ.ಶಿವಪ್ರಸಾದ್, ಶ್ರೀಮತಿ ಮಾಳೇಟಿರ ಸೀತಮ್ಮ ವಿವೇಕ್,  ಚಿದಾನಂದ ಕೆ ಎನ್ ಸಾಹಿತಿಗಳು,  ಕೊಳಚಪ್ಪೆ ಗೋವಿಂದ ಭಟ್, ದೇವರಾಜ್ ಹೆಚ್‌ಪಿ . ಪ್ರ, ಸಾ, ಸಾ, ಅ, ದ ರಾಜ್ಯ ಪ್ರಧಾನ ಕಾರ್ಯದರ್ಶಿ,  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ ಸಾವಿತ್ರಿ ಬಿ ಗೌಡ, ಕಾಂತರಾಜು, ವಿಶ್ವಾಸ್ ಡಿ ಗೌಡ, ಹೇಮಂತ ಕುಮಾರ್. ಬಿ. ಚು ಸ ಪ ಬೇಲೂರು ಅಧ್ಯಕ್ಷರು, ಶ್ರೀಮತಿ ಮಾಲತಿ ಮೇಲುಕೋಟೆ,  ಯಾಕೂಬ್ ಕಲಾವಿದರು ಗೌರವ ಉಪಸ್ಥಿತಿಯಲ್ಲಿದ್ದರು.     

ಶ್ರೀಮತಿ ಹೆಚ್.ಎಸ್. ಪ್ರತಿಮಾ ಹಾಸನ್ ಅವರ ಸುಂದರ ನಿರೂಪಣೆಯೊಂದಿಗೆ ೫ ಗಂಟೆಗೆ ಸರಿಯಾಗಿ ಕಾರ್ಯಕ್ರಮ ಆರಂಭಗೊಂಡಿತ್ತು. ನಾಗರತ್ನರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಶುಭಾರಂಭ ಗೊಂಡಿತು. ಸಂಕ್ರಾಂತಿ ಹಬ್ಬ ಕುರಿತಾಗಿ ತಾವು ರಚಿಸಿದ ಕವನಗಳನ್ನು ವಾಚಿಸಿದ ಕವಿ ಹಾಗೂ ಕವಯಿತ್ರಿಯರಲ್ಲಿ ಪ್ರಥಮ ಬಹುಮಾನವನ್ನು  ೧ ಶ್ರೀಮತಿ ಬಸಮ್ಮ ಸಜ್ಜನ ಕಲಬುರ್ಗಿ,  ೨. ಡಾ. ಸುರೇಶ ನೆಗಳಗುಳಿ ಮಂಗಳೂರು ,ಇವರು ದ್ವಿತೀಯ ಬಹುಮಾನವನ್ನು ೧. ಶ್ರೀಮತಿ ಶಾಹೀನಬಾನು ಎಂ ಬಳ್ಳಾರಿ ಧಾರವಾಡ.೨ ಪೂರ್ಣಿಮಾ ರಾಜೇಶ್  ಬೆಂಗಳೂರು

- Advertisement -

ತೃತೀಯ ಬಹುಮಾನವನ್ನು 

೧.ಮಾರುತಿ. ರಾ. ಆಲೂರ ( ಸಂಶಿ ) ಧಾರವಾಡ ಜಿಲ್ಲೆ 

೨.ದೇವರಾಜ್ ಬಡವನ ಹಳ್ಳಿ ಹಾಸನ

ಭಾಗವಹಿಸಿ ಬಹುಮಾನಿತರಾದರು. ತೀರ್ಪುಗಾರರಾಗಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ್ದ ಹಾ ಮ ಸತೀಶ್‌ರವರು ಮಾತನಾಡಿ, ಕವನ ರಚಿಸುವ ವಿಧಾನವನ್ನು, ತೀರ್ಪು ನೀಡಲು ಅಳವಡಿಸಿಕೊಂಡ ನಿಯಮ ಮತ್ತು ಮಕರ ಸಂಕ್ರಾಂತಿ ಕುರಿತು ಮಾತನಾಡುತ್ತಾ ನಾಡಿನ ಸಮಸ್ತ ಜನರಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ಒಟ್ಟು ರಾಜ್ಯದ ೪೦ಕ್ಕೂ ಹೆಚ್ಚು  ಕವಿಗಳು ಕವಿಗೋಷ್ಠಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. 30ಕ್ಕೂ ಹೆಚ್ಚು  ಕವಿಗಳು ಉತ್ಸಾಹದಿಂದ ಕವಿತೆಗಳ ವಾಚನವನ್ನು ಮಾಡಿದರು. ಸಿ ಸುವರ್ಣ ಕೆ. ಟಿ. ಶಿವಪ್ರಸಾದ್, ಮಾಳೇಟಿರ ಸೀತಮ್ಮ ವಿವೇಕ್ ಅವರು ಸಂಕ್ರಾಂತಿ ಹಬ್ಬದ ಬಗ್ಗೆ ಮಾಹಿತಿ ತಿಳಿಸಿದರು. ಕ.ರಾ.ಬ.ಸಂ ರಾಜ್ಯಾಧ್ಯಕ್ಷರಾದ ಮಧುನಾಯ್ಕ್ ಅವರು ಕಾರ್ಯಕ್ರಮ ಪ್ರತಿ ಕ್ಷಣಗಳನ್ನು, ಪ್ರತಿಯೊಬ್ಬರ ವಸ್ತು ವಿಚಾರ ಸೆರೆ ಹಿಡಿದು ಮಾರ್ಗದರ್ಶನ ನೀಡುತ್ತ ಅರ್ಥಪೂರ್ಣವಾಗಿ ಮಾತನಾಡಿದರು. 

ಗೊರೂರು ಅನಂತರಾಜು ಅವರು ಮಾತನಾಡುತ್ತ ಕಾರ್ಯಕ್ರಮ ಯಶಸ್ಸಿಗೆ ಕಾರಣಕರ್ತರಾದವರಿಗೆ ಧನ್ಯವಾದ ತಿಳಿಸುತ್ತ ಅಭಿನಂದಿಸಿದರು. ಸ್ವಾಗತವನ್ನು ದಿನೇಶ್  ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು  ಪ್ರ,ಸಾ, ಸಾ, ಅ, ಪ್ರ. ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರು ವಂದನಾರ್ಪಣೆ ಮಾಡಿದರು. ಒಟ್ಟಿನಲ್ಲಿ ಮೂರು  ಗಂಟೆಗಳ ಕಾಲ ನಡೆದ ಕಾರ್ಯಕ್ರಮ ಎಲ್ಲರನ್ನು ಕೊನೆಯವರೆಗೆ ಹಿಡಿದಿಟ್ಟು ಅಚ್ಚುಕಟ್ಟಾಗಿ ಮೂಡಿ ಬಂತು.

- Advertisement -
- Advertisement -

Latest News

10 ನೆಯ ತರಗತಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಧೈರ್ಯ ನೀಡಿದ ತಾಲೂಕಾಧಿಕಾರಿಗಳು

ಮೂಡಲಗಿ:- ಮಾರ್ಚ್ ನಲ್ಲಿ ನಡೆಯುವ 10 ನೆಯ ತರಗತಿ ವಿದ್ಯಾರ್ಥಿಗಳ ಪರೀಕ್ಷೆ, ಅದರ ಪೂರ್ವ ತಯಾರಿ ನಡೆಸುತ್ತಿರುವ ತಾಲೂಕಾ ಅಧಿಕಾರಿಗಳು ಪೂರ್ವಭಾವಿಯಾಗಿ ವಿದ್ಯಾರ್ಥಿಗಳ ಮನೆಗೆ ಭೇಟಿ...
- Advertisement -

More Articles Like This

- Advertisement -
close
error: Content is protected !!
Join WhatsApp Group