ಮೈಸೂರು – ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ನಂ.422, 4ನೇ ಮುಖ್ಯರಸ್ತೆ. ಸರ್ದಾರ್ ವಲ್ಲಭಾಯಿ ಪಟೇಲ್ ನಗರದಲ್ಲಿ ಜ.21ರಂದು ಭಾನುವಾರ ಬೆಳಿಗ್ಗೆ 11ರಿಂದ 12.30ರವರೆಗೆ ಉಚಿತ ‘ಪಾಸಿಟಿವ್ ಪೇರೆಂಟಿಂಗ್’ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಪ್ರತಿ ಮಗು/ವಿದ್ಯಾರ್ಥಿಯು ನಮ್ಮ ದೇಶದ ಆಸ್ತಿ. ಆದ್ದರಿಂದ ಹೇಗೆ ಅವರನ್ನು ‘ಯಂಗ್ ಮೈಂಡ್ಸ್’ನಿಂದ ‘ಪವರ್‍ಫುಲ್ ಮೈಂಡ್ಸ್’ಗೆ ಸಬಲಗೊಳಿಸಬೇಕು ಎಂಬ ವಿಷಯದ ಕುರಿತು ಮನಃಶಾಸ್ತ್ರಜ್ಞರಾದ ಬಿ.ಎಲ್.ವೇದಪ್ರದಾರವರು ಮಾತನಾಡಲಿದ್ದಾರೆ.
ನೋಂದಣಿ ಕಡ್ಡಾಯವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ 9880792079 ಅಥವಾ 9900264937 ಸಂಪರ್ಕಿಸಬಹುದು.