ಹೊರನಾಡು ಕನ್ನಡತಿ ಗೊಣಸಗಿ ಸವಿತಾ ಇನಾಮದಾರ ದೇಸಾಯಿ ಅವರಿಗೆ ಸತ್ಕಾರ

Must Read

ಬೆಳಗಾವಿ– ” ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ.), ಬೆಳಗಾವಿ ವತಿಯಿಂದ ಅಂತಾರಾಷ್ಟ್ರೀಯ ಖ್ಯಾತಿ ಕವಯತ್ರಿ, ಸಾಹಿತಿ, ಅನುವಾದಕಿ, ನಾಟಕ ನಿರ್ದೇಶಕಿಯಾಗಿರುವ ದೆಹಲಿ ಹೊರನಾಡು ಕನ್ನಡತಿ ಗೊಣಸಗಿ ಸವಿತಾ ಇನಾಮದಾರ ದೇಸಾಯಿ ಇವರು ಬೆಳಗಾವಿಗೆ ಭೆಟ್ಟಿ ನೀಡಿದ ಸಂದರ್ಭದಲ್ಲಿ ಇವರನ್ನು ಬೆಳಗಾವಿಯ ಗುರುಪ್ರಸಾದ್ ನಗರದ ದೇಸಾಯಿ ಮ್ಯೂಜಿಕಲ್ಸ್ ಸಂಸ್ಥೆಯಲ್ಲಿ ಸತ್ಕರಿಸಲಾಯಿತು.

ಈ ಸಂದರ್ಭದಲ್ಲಿ ಅವರು ಹೊರನಾಡು ಮತ್ತು ದೇಶ ವಿದೇಶಗಳಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. 

ಈ ಸತ್ಕಾರವನ್ನು ಹೊಂಬೆಳಕು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸ.ರಾ. ಸುಳಕೂಡೆ, ಕಾರ್ಯದರ್ಶಿ ಆರ್. ಬಿ. ಬನಶಂಕರಿ, ನಿರ್ದೇಶಕ ಡಾ. ಶಾಂತಾರಾಮ್ ಹೆಗಡೆ, ದೇಸಾಯಿ ಮ್ಯೂಜಿಕಲ್ಸ್ ಸಂಸ್ಥೆಯ ಶ್ರೀಮತಿ/ಶ್ರೀ. ಜಿ. ಎಲ್. ದೇಸಾಯಿ, ಕ.ಸಾ.ಪ. ಕಾರ್ಯದರ್ಶಿ  ಎಂ.ವಾಯ್. ಮೆಣಸಿನಕಾಯಿ ಹಾಗೂ ವಿದ್ಯಾಮಂದಿರದ ಸಂಚಾಲಕರಾದ ಶ್ರೀಮತಿ ಶಾರದಾ ಕುಲಕರ್ಣಿ ಹಾಗೂ ಇತರರು ನೆರವೇರಿಸಿದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group