ರಾಣಿ ಚನ್ನಮ್ಮ ವಿವಿಯ ಏಕವಲಯ ಅಂತರ ಮಹಾವಿದ್ಯಾಲಯಗಳ ಪುರುಷರ ಬಾಲ್-ಬ್ಯಾಡ್ಮಿಂಟನ್ ಉದ್ಘಾಟನೆ

Must Read

ಮೂಡಲಗಿ: ಭಾರತೀಯ ಕ್ರೀಡೆಯಲ್ಲಿ ಅಂತ್ಯಂತ ಜನಪ್ರಿಯ ಕ್ರೀಡೆಯಾದ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ  ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಏಕಾಗ್ರತೆಯೊಂದಿಗೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಲು ಸಹಕಾರಿಯಾಗುವುದು ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ರಾಮಚಂದ್ರಪ್ಪ ಸೋನವಾಲಕರ ಹೇಳಿದರು

ಅವರು ಬುಧವಾರದಂದು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯ(ಬಿ.ಪಿ.ಇಡಿ ಮತ್ತು ಎಮ್.ಪಿ.ಇಡಿ) ದ ಆಶ್ರಯದಲ್ಲಿ ಸಂಸ್ಥೆಯ ಆವರಣದಲ್ಲಿ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕವಲಯ ಅಂತರ ಮಹಾವಿದ್ಯಾಲಯಗಳ ಪುರುಷರ ಬಾಲ್-ಬ್ಯಾಡ್ಮಿಂಟನ್ ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯ ತಂಡದ ಆಯ್ಕೆಯ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೇಲುವು ಮುಖ್ಯವಲ್ಲ, ಮನುಷ್ಯ ಆರೋಗ್ಯವಂತರಾಗಿರಲು ಒಂದಿಲ್ಲ ಒಂದು ಕ್ರೀಡೆಯಲ್ಲಿ ಭಾಗವಹಿಸುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಮುಖ್ಯವಾಗಿದೆ ಎಂದರು.  

ಮುಖ್ಯ ಅತಿಥಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯ ಪ್ರೊ. ಸಂಗಮೇಶ ಗುಜಗೊಂಡ ಮಾತನಾಡಿ,  ಮೂಡಲಗಿ ಶೀಕ್ಷಣ ಸಂಸ್ಥೆಯಲ್ಲಿ ನಿರಂತವಾಗಿ ವಿಶ್ವವಿದ್ಯಾಲಯದ ಮಟ್ಟಣ ಹಾಗೂ ರಾಜ್ಯ ಮಟ್ಟದ ಕ್ರೀಡಾ ಚಟುವಟಿಕೆ ಏರ್ಪಡಿಸುವ ಮೂಲಕ ಕ್ರೀಡೆಗಳಿಗೆ ಪ್ರೊತ್ಸಾಹ ಮತ್ತು ಬೆಂಬಲ ನೀಡುತ್ತಾ ಬಂದು ಗ್ರಾಮೀಣ ಸಂಸ್ಥೆಯಾಗಿದೆ, ಮನುಷ್ಯನಿಗೆ ಎಲ್ಲ ಚಟುವಟಿಕೆಗಳಲ್ಲಿ ಸಿದ್ದತೆಯನ್ನು ಮಾಡಿಕೊಡುವುದೇ ಕ್ರೀಡೆ, ಜೀವನದಲ್ಲಿ ಕ್ರೀಡೆಗೆ ಬಹಳಷ್ಟು ಮಹತ್ವವಿದೆ, ಭೌತಿಕ ಮತ್ತು ಮಾನಸಿಕ ವಿಕಾಸ ಎರಡನ್ನು ಕ್ರೀಡೆಯಿಂದ ಸಾಧಿಸಬಹುದು ಎಂದ ಅವರು ಕ್ರೀಡೆಯಲ್ಲಿ ಸೋಲು-ಗೆಲುವು ಬಿಟ್ಟು ಶಿಸ್ತು, ಸಂಯಮ, ಸಾಂಘಿಕ ಜೀವನ ಮತ್ತು ತಾಳ್ಮೆಯನ್ನು ಕಲಿಯುತ್ತೇವೆ, ಕ್ರೀಡಾ ನಿಯಮವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ನಮ್ಮ ಬದುಕಿನ ಪಾಠಗಳು ಕೂಡಾ ಕ್ರೀಡೆಯಲ್ಲಿವೆ  ಎಂದರು.

ಸಮಾರಂಭ ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ರವೀಂದ್ರ ಸೋನವಾಲಕರ, ನಿರ್ದೇಶಕರಾದ ಎ.ವಿ.ಹೊಸಕೋಟಿ, ಅನೀಲ ಸತರಡ್ಡಿ, ಡಾ.ವಾಯ್.ಬಿ.ಮಳವಾಡ, ಸರಕಾರಿ ಕಾಲೇಜಿ ದೈಹಿಕ ನಿರ್ದೇಶಕ ಡಾ.ರವಿ ಗಡದನ್ನವರ, ದೈಹಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಮ್.ಕೆ.ಕಂಕಣವಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಮೂಡಲಗಿ ತಾಲೂಕಾ ಘಟಕದ ಅಧ್ಯಕ್ಷ ಕೃಷ್ಣಪ್ಪ ಗಿರೆಣ್ಣವರ ಹಾಗೂ ವಿವಿಧ ಮಹಾವಿದ್ಯಾಲಯಗಳ ದೈಹಿಕ ನಿರ್ದೇಶಕರು ಉಪಸ್ಥಿತರಿದ್ದರು.

ದೈಹಿಕ ಉಪನ್ಯಾಸಕ ಭೀಮಶಿ ಬಡಗಣ್ಣವರ ಸ್ವಾಗತಿಸಿದರು, ಪ್ರೊ.ಎ.ಎಸ್.ಮಿಸಿನಾಯಿಕ ನಿರೂಪಿಸಿದರು, ಡಾ.ಮಲ್ಲಪ್ಪ ಕಂಕಣವಾಡಿ ವಂದಿಸಿದರು.

ಕ್ರೀಡಾಕೂಟದಲ್ಲಿ ಬೆಳಗಾವಿ, ಬಾಗಲಕೋಟ, ವಿಜಯಪೂರ ಜಿಲ್ಲೆಗಳಿಂದ ಸೂಮಾರು ಹದಿನಾಲ್ಕು ತಂಡಗಳು ಭಾಗವಹಿಸಿದವು.  ಕ್ರೀಡಾಕೂಟದ ಉಪಾಂತ್ಯ ಮತ್ತು ಅಂತಿಮ ಅಂತಕ್ಕೆ ಮೂಡಲಗಿ ದೈಹಿಕ ಶಿಕ್ಷಣ ಮಹಾವಿದ್ಯಾಲಯ ತಂಡ, ಹುನಗುಂದದ ವಿ.ಎಂ.ಎಸ್.ಆರ್.ವಿ ಕಾಲೇಜು ತಂಡ, ತಾಳಿಕೋಟಿಯ ಎಸ್.ಕೆ.ಎಸ್ ಕಾಲೇಜು ತಂಡ ಮತ್ತು ಇಳಕಲದ ಎಸ್.ಪಿ.ಸಿ ಕಾಲೇಜು ತಂಡಗಳು ತಲುಪಿವೆ.

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...

More Articles Like This

error: Content is protected !!
Join WhatsApp Group