ಸಿಂದಗಿಯಲ್ಲಿ ಉಚಿತ ಆರೋಗ್ಯ ತಪಾಸನಾ ಶಿಬಿರ

Must Read

ಸಿಂದಗಿ– ಮಾಜಿ ಸಚಿವ ದಿ.ಎಮ್.ಸಿ.ಮನಗೂಳಿ ಅವರ 3 ನೇ ಪುಣ್ಯ ಸ್ಮರಣೆಯ ನಿಮಿತ್ತ ಪಟ್ಟಣದ ಮನಗೂಳಿ ಆಸ್ಪತ್ರೆಯಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಜ.21 ರಂದು ರವಿವಾರ ಮುಂಜಾನೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಮನಗೂಳಿ ಆಸ್ಪತ್ರೆಯಲ್ಲಿಯೆ ಆಯೋಜಿಸಲಾಗಿದೆ ಎಂದು ಮನಗೂಳಿ ಆಸ್ಪತ್ರೆಯ ಡಾ. ಶಾಂತವೀರ ಮನಗೂಳಿ ಹೇಳಿದರು.

ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ ಅವರು ದಿ.ಎಮ್.ಸಿ.ಮನಗೂಳಿ ಅವರ ಸ್ಮರಣೆಗಾಗಿ ಶಾಸಕ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ಶಿಬಿರದಲ್ಲಿ ತಜ್ಞ ವೈದ್ಯರು ಆಗಮಿಸುವರು ವಿವಿಧ ರೋಗಗಳಾದ ಹೃದಯ ಸಂಬಂಧಿಸಿದ ಕಾಯಿಲೆ, ನರರೋಗ, ಕ್ಯಾನ್ಸರ್, ಸ್ತ್ರೀರೋಗ, ಮೂತ್ರಪಿಂಡದಲ್ಲಿ ಕಲ್ಲು, ಚರ್ಮರೋಗ, ಇಸಿಜಿ, ರಕ್ತ ತಪಾಸಣೆ, ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಅನೇಕ ರೋಗಗಳ ತಪಾಸಣಾ ಕಾರ್ಯ ನಡೆಯುವದು. ಶಿಬಿರದಲ್ಲಿ ಡಾ.ಶಾಂತವೀರ ಮನಗೂಳಿ, ಡಾ.ಸಂಧ್ಯಾ ಮನಗೂಳಿ, ಡಾ.ಕುಶಾಲ ತಾರಾಪೂರ, ಡಾ.ವಿಜಯಲಕ್ಷ್ಮೀ ತಾರಾಪೂರ, ಡಾ.ಮಲ್ಲಪ್ಪ ಹುಗ್ಗಿ, ಡಾ.ಗೌತಮ ವಗ್ಗರ, ಡಾ.ಸುನೀಲ ಸಜ್ಜನ, ಡಾ.ಸೌಮ್ಯಾ ಮನಗೂಳಿ ಸೇರಿದಂತೆ ಅನೇಕ ನುರಿತ ವೈದ್ಯರು ಭಾಗವಹಿಸುವರು. ಶಿಬಿರದಲ್ಲಿ ಪಾಲ್ಗೊಳ್ಳುವವರು ಕೂಡಲೇ ಹೆಸರನ್ನು ನೊಂದಾಯಿಸಬೇಕು ಮತ್ತು ಈ ಮೊಬೈಲ ಸಂಖ್ಯೆ 9141163387, 9740673613, 6366676400 ಗೆ ಸಂಪರ್ಕಿಸಲು ಕೋರಲಾಗಿದೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group