ಕನ್ನಡ ಭಾಷೆ ಹಾಲು ಜೇನಿನಂತೆ: ಡಾ. ಎ.ಕೆ .ಚಿಕ್ಕಮಠ

Must Read

ಬೆಳಗಾವಿ: ಕನ್ನಡ ಭಾಷೆ ಪುರಾತನವಾದದ್ದು ಇದರ ಚೆಲುವು ಕಾಮನ ಬಿಲ್ಲು ಮುರಿದು ಬಿದ್ದಂತೆ ಸೌಂದರ್ಯಯುತವಾಗಿ ಇದೆ ಎಂದು ಡಾ. ಚಿಕ್ಕಮಠ ಹೇಳಿದರು.

ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಹಾಗೂ ಐಕ್ಯೂಎ ಎಸ್ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಕರ್ನಾಟಕ ಏಕೀಕರಣ ಇತಿಹಾಸ ಕುರಿತು ಸವಿಸ್ತಾರವಾಗಿ ಉಪನ್ಯಾಸ ನೀಡುತ್ತಾ, ಇಲ್ಲಿನ ರಾಜರು ಸಾಹಿತಿ ಕವಿಗಳು ಸಂಶೋಧಕರು ಇದರ ಇತಿಹಾಸವನ್ನು ಸುಮಾರು 2000 ವರ್ಷಗಳ ಹಿಂದಿನ  ಸಂಗತಿಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವ ಹಾಗೆ ತಿಳಿಸಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇತಿಹಾಸ ಸಹ ಪ್ರಾಧ್ಯಾಪಕರಾದ ಡಾ. ಸಿ ಬಿ ತಾಬೂಜಿಯವರು ವಹಿಸಿಕೊಂಡು ಮಾತನಾಡುತ್ತಾ, ಕನ್ನಡದ ಕಂದ ಎಲ್ಲರ ಮನದಲ್ಲಿ ನೆಲೆಯೂರ ಬೇಕು ಎಂದು ಹೇಳಿದರು. 

ಸಂಯೋಜಕರಾದ ಪ್ರೊ. ಅಂಬರೀಶ್ ರೇವತಗಾವ್ ಅವರು ಅತಿಥಿಗಳಾಗಿ ಭಾಗವಹಿಸಿ ಕನ್ನಡದ ಹಿರಿಮೆಯನ್ನು ಕೊಂಡಾಡಿದರು. ಕನ್ನಡದ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಕೌಶಲ್ಯ ಡಿ ಯವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿಕೊಂಡರು 

ಡಾ. ಎ.ಬಿ .ಇಟಗಿ ಅವರು ಪರಿಚಯ ಭಾಷಣ ಮಾಡಿದರು ಪ್ರೊ. ಯಲ್ಲಪ್ಪ ಗುಡೇನ್ನವರ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸೂಯಲ್ ಪಟೇದಾರ್ ಹಾಗೂ ಸುರೇಖಾ ಇಟಗಿ  ನಡಿಸಿದರು  ಕುಮಾರಿ ವರ್ಷಾ ಹಿರೇಮಠ ವಂದಿಸಿದರು ಉಪನ್ಯಾಸದಲ್ಲಿ ಕಾಲೇಜಿನ ವಿದ್ಯಾರ್ಥಿ ವೃಂದವು ಪಾಲ್ಗೊಂಡಿತ್ತು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group