ಸಿಂದಗಿ; ಸರ್ಕಾರದ ಅಧಿಸೂಚನೆ ಸಂಖ್ಯೆಯುಡಿ/145/ಎಂಬಿ/98, ದಿನಾಂಕ:27.05.1998 ರಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 4(ಎ) ರಡಿಯಲ್ಲಿ ಸಿಂದಗಿ ಪುರಸಭೆ ವ್ಯಾಪ್ತಿಯನ್ನು ಸ್ಥಳೀಯ ಯೋಜನಾ ಪ್ರದೇಶವನ್ನಾಗಿ ಘೋಷಿಸಿ ಸದರಿ ಕಾಯ್ದೆಯ ಕಲಂ 2(7)(ಬಿ) ರಲ್ಲಿ ಸಿಂದಗಿ ಪುರಸಭೆಯನ್ನು ಪುರಸಭೆ ಯೋಜನಾ ಪ್ರಾಧಿಕಾರ ಎಂದು ಆದೇಶಿಸಲಾಗಿತ್ತು ಅದನ್ನು ಪುನರ್ ಪರಿಶೀಲಿಸಿ ಯೋಜನಾ ಪ್ರಾಧಿಕಾರಕ್ಕೆ ಒಳಪಡಿಸಿ ಘೋಷಣೆ ಮಾಡಿದೆ ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದರು.
ಈ ಕುರಿತು ಪತ್ರಿಕಾ ಪ್ರತಿನಿಧಿಯೊಂದಿಗೆ ಮಾತನಾಡಿ, ಸಿಂದಗಿ ಪಟ್ಟಣದ ಹಾಲಿ ಇರುವ ಸ್ಥಳೀಯ ಯೋಜನಾ ಪ್ರದೇಶದೊಂದಿಗೆ ಸಿಂದಗಿ ಪಟ್ಟಣಕ್ಕೆ ಹೊಂದಿಕೊಂಡಿರುವ ಚಿಕ್ಕ ಸಿಂದಗಿ, ಬಂದಾಳ, ಸೋಮಪುರ, ರಾಂಪುರ ಮತ್ತು ಯರಗಲ ಬಿ.ಕೆ ಒಟ್ಟು 05 ಗ್ರಾಮಗಳನ್ನು ಸೇರಿಸಿಕೊಂಡು ಸ್ಥಳೀಯ ಯೋಜನಾ ಪ್ರದೇಶದ ಎಲ್ಲೆಯನ್ನು ಗುರುತಿಸಿ, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 4(ಎ) ರಡಿಯಲ್ಲಿ, ಅನುಬಂಧ-1 ರಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡಂತೆ ಪರಿಷ್ಕರಿಸಿ ವಿಸ್ತರಿತ ಸ್ಥಳೀಯ ಯೋಜನಾ ಪ್ರದೇಶ ಎಂದು ಘೋಷಿಸಲಾಗಿದೆ. ಪರಿಷತ್ ಸ್ಥಳೀಯ ಯೋಜನಾ ಪ್ರದೇಶದ ಎಲ್ಲೆಯ ವಿವರಗಳನ್ನು ಅನುಬಂಧ II ರಲ್ಲಿ ನೀಡಲಾಗಿದೆ ಎಂದರು.
ಸದರಿ ಪ್ರದೇಶದ ವ್ಯಾಪ್ತಿಯಲ್ಲಿನ ಅಭಿವೃದ್ಧಿಗಳನ್ನು ನಿಯಂತ್ರಿಸಲು ಮತ್ತು ಮಹಾಯೋಜನೆ ತಯಾರಿಸಲು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961 ರ ಕಲಂ 4(ಸಿ)(1) ರನ್ವಯ ಮತ್ತು 4(ಸಿ)(3)(1)(0)(0) ದ ಎ ಹಾಗೂ (ತ) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಕಲಾಯಿ, ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣಕ್ಕೆ ಪ್ರತ್ಯೇಕ ಯೋಜನಾ ಪ್ರಾಧಿಕಾರವನ್ನು ರಚಿಸಿ ಆದೇಶಿಸಲಾಗಿದೆ.
ಪದನಾಮ ಸದಸ್ಯ ಕಾರ್ಯದರ್ಶಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹೆಸರು ಮತ್ತು ವಿಳಾಸ ಸರ್ಕಾರದಿಂದ ನೇಮಿಸಲಾಗುವುದು. ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರು, ವಿಜಯಪುರ ಇವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಸಿಂದಗಿ ಪುರಸಭೆಯ ಚುನಾಯಿತ ಸದಸ್ಯರೊಬ್ಬರು. ಸಿಂದಗಿ ಪುರಸಭೆಯ ಮುಖ್ಯಾಧಿಕಾರಿಗಳು ಸರ್ಕಾರದಿಂದ ನೇಮಿಸಲ್ಪಡುವ ಅಧಿಕಾರಿಯವರ ಐದು ಜನ ಇತರ ಸದಸ್ಯರು ಸ್ಥಳೀಯ ಯೋಜನಾ ಪ್ರದೇಶಕ್ಕೆ ಅನುಮೋದನೆಯಾಗಿ ಜಾರಿಗೆ ಬರುವವರೆಗೆ ಅಭಿವೃದ್ಧಿಗಳನ್ನು ನಿಯಂತ್ರಿಸಲು ಸಿಂದಗಿ ಪುರಸಭೆ ಯೋಜನಾ ಪ್ರಾಧಿಕಾರದ ಚಾಲ್ತಿ ವಲಯ ನಿಯಮಾವಳಿಗಳನ್ನು ಅನುಸರಿಸಲು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಸರ್ಕಾರದ ಅಧೀನ ಕಾರ್ಯದರ್ಶಿ, (ಅಭಿವೃದ್ಧಿ ಪ್ರಾಧಿಕಾರ ಮತ್ತು ನಯೋಸು, ನಗರಾಭಿವೃದ್ಧಿ ಇಲಾಖೆ ಅನುಮತಿಸಲಾಗಿದೆ ಎಂದು ಹೇಳಿದರು.