- Advertisement -
ಮೈಸೂರು -ನಗರದ ಅಗ್ರಹಾರ ಖಿಲ್ಲೆ ಮೊಹಲ್ಲಾದಲ್ಲಿರುವ ಶ್ರೀ ಉತ್ತರಾದಿ ಮಠ ರೋಗಮೋಚನ ಶ್ರೀ ಧನ್ವಂತರಿ ಸನ್ನಿಧಾನದಲ್ಲಿ ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆಜ್ಞೆ ಮತ್ತು ಅನುಗ್ರಹದಿಂದ ಜ.28ರಿಂದ ಫೆ.1ರವರೆಗೆ ಪ್ರತಿದಿನ ಸಂಜೆ 6.30ರಿಂದ 7.30ರವರೆಗೆ ನಾಡಿನ ಸುಪ್ರಸಿದ್ಧ ಪ್ರವಚನಕಾರರಾದ ಪಂ.ಶ್ರೀ ಶ್ರೀನಿಧಿ ಆಚಾರ್ಯ ಜಮನಿಸ್‍ರಿಂದ ಭಗವದ್ಗೀತೆ ಪ್ರವಚನ-ಅಧ್ಯಾಯ 15 ಎಂಬ ವಿಷಯದ ಕುರಿತು ಎಂಟನೇ ತಿಂಗಳ ಪ್ರವಚನವನ್ನು ಆಯೋಜಿಸಲಾಗಿದೆ ಎಂದು ಮಠದ ಪ್ರಧಾನ ವ್ಯವಸ್ಥಾಪಕರಾದ ಪಂ.ಶ್ರೀ ಅನಿರುದ್ಧಾಚಾರ್ಯ ಪಾಂಡುರಂಗಿಯವರು ತಿಳಿಸಿದ್ದಾರೆ.
ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ. ಮಾಹಿತಿಗೆ ಮೊಬೈಲ್ 9448147459 ಸಂಪರ್ಕಿಸಬಹುದು.