ಪಶುಸಂಗೋಪನೆ ಸಚಿವ ಕೆ ವೆಂಕಟೇಶ ನಾಮಕಾವಾಸ್ತೆ – ಪ್ರಭು ಚವ್ಹಾಣ್

Must Read

ಬೀದರ– ರಾಜ್ಯದಲ್ಲಿ ಗೋ ಹತ್ಯೆ ಕಾನೂನು ಜಾರಿಯಿದ್ದರೂ ಇಂದು ಜಾನುವಾರುಗಳು ಕಸಾಯಿಖಾನೆಗೆ ಹೋಗುತ್ತಿವೆ. ರಾಜ್ಯದ ಸರ್ಕಾರ ಹಾಗೂ ಪೊಲೀಸರು ಯಾರೂ ನೋಡುತ್ತಿಲ್ಲ. ನಾವು ಗೋ ಹತ್ಯೆ ನಿಷೇದ ಕಾನೂನು ಮಾಡಿದ್ದೇವೆ ನೀವು ಕಾನೂನು ಬಂದ್ ಮಾಡಲು ಹೋರಟಿದ್ದೀರಿ. ನಾನು ಜನ ಹಾಗೂ ಜಾನುವಾರುಗಳ ಪರವಾಗಿ ಇದ್ದೇನೆ‌ ಎಂದು ಸಿಎಂ ಹೇಳುತ್ತಾರೆ ಯಾಕೆ ಎಲ್ಲಾ ಯೋಜನೆಯನ್ನು ಬಂದ ಮಾಡಲು ಹೊರಟಿದ್ದೀರಿ ಪಶು ಸಂಜೀವಿನಿ ಆಂಬುಲೆನ್ಸ್ ಬಂದ್ ಮಾಡಿದ್ದೀರಿ ಸಿಎಂ ಸಿದ್ದರಾಮಯ್ಯನವರೇ ಎಂದು ಔರಾದ ಬಿಜೆಪಿ ಶಾಸಕ ಪ್ರಭು ಚವ್ಹಾಣ ಆಕ್ರೋಶ ವ್ಯಕ್ತಪಡಿಸಿದರು.

ಬೀದರ್ ನಲ್ಲಿ ಮುಖ್ಯಮಂತ್ರಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಅವರು, ಯಾಕೆ ಮೂಕ ಪ್ರಾಣಿಗಳ ಮೇಲೆ ನಿಮಗೆ ಇಷ್ಟು ಸಿಟ್ಟು ಸಿಎಂ ಸಾಹೇಬ್ರೆ.ಜಾನುವಾರುಗಳಿಗೆ ಮೋಸ ಮಾಡುತ್ತಿದ್ದೀರಿ, ಜಾನುವಾರುಗಳನ್ನು ಕಸಾಯಿಖಾನೆಗೆ ಕಳಿಸುತ್ತಿದ್ದೀರಿ. ಪಶು ಸಂಗೋಪನಾ ಸಚಿವರಿಗೆ‌ ಯೋಜನೆಗಳ ಬಗ್ಗೆ‌ ಗೊತ್ತೆ ಇಲ್ಲಾ. ಅವರು ನಾಮ ಕೆ ವಾಸ್ತೆ ಸಚಿವರಾಗಿದ್ದು ಪಶು ಸಂಗೋಪನಾ ಸಚಿವ‌ ವೆಂಕಟೇಶರನ್ನು ಈ ಕೂಡಲೇ ಸಚಿವ ಸ್ಥಾನದಿಂದ ಬದಲು ಮಾಡಬೇಕು ಎಂದು ಆಗ್ರಹಿಸಿದರು.

ಇಲ್ಲವಾದರೆ ನಾವು ಜಾನುವಾರುಗಳನ್ನು ತೆಗೆದುಕೊಂಡು ಪ್ರತಿಭಟನೆ ಮಾಡುತ್ತೇವೆ ಎಂದು ಚವ್ಹಾಣ್ ಹೇಳಿದರು. ಚವ್ಹಾಣ್ ಗೆ ಶಾಸಕ ಶರಣು ಸಲಗರ್ ಹಾಗೂ ಶೈಲೇಂದ್ರ ಬೆಲ್ದಾಳೆ ಸಾಥ್ ನೀಡಿದರು.


ವರದಿ : ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group