- Advertisement -
ಮೂಡಲಗಿ: ಮೂಡಲಗಿ ತಾಲೂಕಿನ ಅರಳಿಮಟ್ಟಿ ಗ್ರಾಮದ ಬಸವರಾಜ ಕುದ್ರೆಮನಿ ಇವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಯೋಜನೆಯಡಿ ಇವರ ಚಿಕಿತ್ಸೆಗೆ ಸಂಸದ ಈರಣ್ಣ ಕಡಾಡಿಯವರ ಶಿಫಾರಸ್ಸಿನ ಮೇರೆಗೆ ವೈದ್ಯಕೀಯ ಚಿಕಿತ್ಸೆಗಾಗಿ 25 ಸಾವಿರ ರೂ.ಗಳ ಮೊತ್ತ ಮಂಜೂರಾಗಿದೆ ಎಂದು ತಿಳಿಸಿದ್ದಾರೆ.
ಮಂಗಳವಾರ ಫೆ-13 ರಂದು ಕಲ್ಲೋಳಿ ಪಟ್ಟಣದ ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ ಆದೇಶ ಪ್ರತಿಯನ್ನು ವಿತರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಕಡುಬಡವರು ರೋಗ ರುಜಿನಗಳಿಗೆ ಈಡಾದಾಗ ಚಿಕಿತ್ಸೆಗಾಗಿ ರಾಜ್ಯ ಸರಕಾರ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಅನುದಾನವನ್ನು ನೀಡುತ್ತದೆ. ಪಡೆದಂಥಹವರು ಇಂತಹ ಅನುದಾನವನ್ನು ಆರೋಗ್ಯ ಕಾಯ್ದುಕೊಳ್ಳಲು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಮಗೌಡ ಪಾಟೀಲ, ಮಹೇಶ ಚಿಮ್ಮಡ, ಕೆಂಚಪ್ಪ ನಂದಗಾಂವಿ ಉಪಸ್ಥಿತರಿದ್ದರು.