spot_img
spot_img

ವಿದ್ಯಾ ಚೇತನ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಕಲರವ

Must Read

- Advertisement -

ಸಿಂದಗಿ: ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವನ್ನು ‘ವಾರ್ಷಿಕ ಕಲರವ 2K24’ ಶಿರೋನಾಮೆ ಅಡಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾಕ್ಟರ್ ಚನ್ನಪ್ಪ ಕಟ್ಟಿ ಹಿರಿಯ ಸಾಹಿತಿಗಳು ಸಿಂದಗಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಕ್ಷಣ ಸಂಸ್ಥೆಯನ್ನು ನಡೆಸುವುದು ಶಿಕ್ಷಣದ ಸೇವೆಯಾಗಬೇಕು ವ್ಯಾಪಾರವಾಗಬಾರದು ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರ ತರುವ ನೈತಿಕ ಸಾಮಾಜಿಕ ಮತ್ತು ಭಾವೈಕ್ಯತೆಯನ್ನು ಬೆಳೆಸುವ ಶಿಕ್ಷಣವನ್ನು ನೀಡುವ ಜವಾಬ್ದಾರಿಯನ್ನು ಶಿಕ್ಷಣ ಸಂಸ್ಥೆಗಳು ಹೊಂದಿವೆ ಅಷ್ಟೇ ,ಅಲ್ಲದೆ ಸಮಯದ ಮಹತ್ವ ವ್ಯಕ್ತಿಗಳ ವ್ಯಕ್ತಿತ್ವ , ದೇಶಭಕ್ತಿ ಜಾತ್ಯತೀತ ಮನೋಭಾವ ಮಕ್ಕಳಲ್ಲಿ ಮೂಡಿಸುವ ಮುಂತಾದ ವಿಷಯಗಳ ಕುರಿತು ಕಥೆಗಳ ಮೂಲಕ ಮಕ್ಕಳನ್ನು ಪ್ರಶ್ನಿಸುತ್ತ ಮಕ್ಕಳಿಗೆ ಪ್ರೇರಣಾದಾಯಕ ಮಾತುಗಳನ್ನಾಡಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ದೇಶಭಕ್ತಿ ಕನ್ನಡ ನಾಡು ನುಡಿ ಸಾಮಾಜಿಕ ಕಳಕಳಿ , ಪರಿಸರ ರಕ್ಷಣೆ, ಭಾವೈಕ್ಯತೆಯ ನೃತ್ಯಗಳನ್ನು ಮಕ್ಕಳು ಪ್ರದರ್ಶಿಸಿದರು ಅದರಲ್ಲೂ ವಿಶೇಷವಾಗಿ ಸಿದ್ದೇಶ್ವರ ಶ್ರೀಗಳನ್ನು ಕುರಿತ ನೃತ್ಯ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರೆ, ಜೈ ಗಣೇಶ ನೃತ್ಯ ಎಲ್ಲರ ಮೈ ನವಿರೇಳಿಸುವಂತೆ ಮಾಡಿತು.                 

ಕಾರ್ಯಕ್ರಮದಲ್ಲಿ ನೃತ್ಯದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕ ನೀಡಿ ಗೌರವಿಸಲಾಯಿತು . ಕಾರ್ಯಕ್ರಮದಲ್ಲಿ ಪಾಲಕರ ಪ್ರತಿನಿಧಿಯಾಗಿ ಎಸ್ ಐ ಅರಿಕೇರಿಮಠ್ ಅವರು ಭಾಗವಹಿಸಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮತಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಕುಸುಮ ರಮೇಶ್ ಯಾಳಗಿಯವರು ಅಧ್ಯಕ್ಷೀಯ ಭಾಷಣದಲ್ಲಿ ತಮ್ಮ ಶಾಲೆಯ ಕುರಿತು ಯೋಜನೆಗಳ ಬಗ್ಗೆ ಮತ್ತು ಪಾಲಕರ ಸಹಕಾರವನ್ನು ಕೋರಿದರು. ಶ್ರೀಮತಿ ಸಕ್ಕುಬಾಯಿ ಡಾಂಗಿ ಇವರು ಶಾಲಾ ವಾರ್ಷಿಕ ವರದಿ ವಾಚನ ಹಾಗೂ ಪ್ರಾಸ್ತಾವಿಕ ಮಾತನಾಡುತ್ತಾ ಈ ವರ್ಷದ ಕಾರ್ಯ ಚಟುವಟಿಕೆಗಳು ಹಾಗೂ ವಿದ್ಯಾಚೇತನ ಶಾಲೆಯ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದರು ಅತಿಥಿ ಅಭ್ಯಾಗತರನ್ನು ಶ್ರೀಮತಿ ದೀಕ್ಷಾ ಕನ್ನೊಳ್ಳಿ ಇವರು ಸ್ವಾಗತಿಸಿ ಪರಿಚಯಿಸಿದರು ಕಾರ್ಯಕ್ರಮದ ವಂದನಾರ್ಪಣೆಯನ್ನು ಶ್ರೀಮತಿ ರೂಪ ಮೇಡಂ ಅವರು ನೆರವೇರಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ವಿಕಾಸ ಸರ್ ಅವರು ಮಾಡಿದರು ಶಾಲೆಯ ಮುಖ್ಯೋಪಾಧ್ಯಾಯರಾದ ಅಕ್ಷಯ್ ಯಲಗಟ್ಟಿ ಶಾಲೆ ಶಿಕ್ಷಕರು ವಿದ್ಯಾರ್ಥಿಗಳು ಪಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಒಟ್ಟಾರೆ ಸಾಂಸ್ಕೃತಿಕ ಉತ್ಸವ ವಿದ್ಯಾಚೇತನ ಶಾಲೆಯಲ್ಲಿ ನಡೆಯಿತು

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಧನಕನಕ‌ ನವರತ್ನ ನಿನ್ನೊಡವೆಯಲ್ಲಬಿಡು ನಿನ್ನೊಡವೆಯೆಂಬುವುದು ಜ್ಞಾನರತ್ನ ಈ ರತ್ನ ಧರಿಸಿದೊಡೆ ಲೋಕದಲಿ‌ ನಿನಗಿಂತ ಸಿರಿವಂತರಾರಿಲ್ಲ - ಎಮ್ಮೆತಮ್ಮ ||೧೩೧|| ಶಬ್ಧಾರ್ಥ ಧನಕನಕ = ಹಣ ಬಂಗಾರ. ನವರತ್ನ = ಒಂಬತ್ತು ಹರಳು ತಾತ್ಪರ್ಯ ಗಳಿಸಿರುವ ಹಣ‌...
- Advertisement -

More Articles Like This

- Advertisement -
close
error: Content is protected !!
Join WhatsApp Group