ಪೇಪರ್ ಕಪ್‌ನಲ್ಲಿ ಚಹಾ ಕುಡಿಯೋ ಮುನ್ನ ಮತ್ತೊಮ್ಮೆ ಯೋಚಿಸಿ!

Must Read

ನಾವು ಸಾರ್ವಜನಿಕ ಸ್ಥಳಗಳಲ್ಲಿ, ಹೊಟೆಲ್‌ಗಳಲ್ಲಿ ಚಹಾ, ಕಾಫಿಯನ್ನು ಪೇಪರ್ ಕಪ್‌ನಲ್ಲಿ ಕುಡಿಯುವುದು ಕೂಡ ಅಪಾಯಕಾರಿಯೇ?

ಹೌದೆನ್ನುತ್ತಾರೆ ವೈದ್ಯ ಮಹಾಶಯರು. ರೈಲ್ವೆ ಇಲಾಖೆಯಲ್ಲಿ ಮತ್ತು ಇತರೆ ಕಡೆಗಳಲ್ಲಿ ಪೇಪರ್ ಕಪ್ ಬಳಸುವುದಕ್ಕೆ ಅನುಮತಿಯಿದೆ. ಪೇಪರ್ ಕಪ್ ಸಂಪೂರ್ಣ ಪೇಪರ್‌ನಿಂದ ತಯಾರಾಗಿಲ್ಲ. ಸಾಮಾನ್ಯವಾಗಿ ಚಹಾ, ಕಾಫಿ ಮಾರಾಟಗಾರರು ಸ್ಟೀಲ್ ಲೋಟಗಳನ್ನು ಸರಿಯಾಗಿ ತೊಳೆಯದಿರುವುದರಿಂದ ರೋಗ, ರುಜಿನಗಳು ಹರಡುತ್ತದೆ. ಇದನ್ನು ತಪ್ಪಿಸಲು ಮತ್ತು ಸುಲಭವಾಗಿ ಡಿಸ್ಪೋಸ್ ಮಾಡಬಹುದಾದ ಪೇಪರ್ ಕಪ್‌ಗಳಿಗೆ ವ್ಯಾಪಾರಿಗಳು ಮೊರೆ ಹೋಗಿದ್ದಾರೆ. ಆದರೆ ಪೇಪರ್ ಕಪ್‌ಗಳನ್ನು ದಿನನಿತ್ಯ ಬಳಸುವುದರಿಂದ ದೀರ್ಘಾವಧಿಯಲ್ಲಿ ಮೂತ್ರಪಿಂಡ, ಲಿವರ್‌ಗೆ ಹಾನಿಯಾಗಬಹುದು ಮತ್ತು ಕ್ಯಾನ್ಸರ್ ಕೂಡ ಉಂಟಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಇದೊಂದು ಭಯ ಹುಟ್ಟಿಸುವ ಸಂಗತಿಯಾಗಿದೆ. ಪೇಪರ್ ಕಪ್‌ ಸಂಪೂರ್ಣ ಪೇಪರ್‌ನಿಂದ ತಯಾರಾಗಿಲ್ಲ. ವಾಟರ್‌ಪ್ರೂಫ್‌ಗಾಗಿ ಮೇಣವನ್ನು ಹಚ್ಚಿರುತ್ತಾರೆ.

ಬಿಸಿಯಾದ ಚಹಾ, ಕಾಫಿ ಸೇವನೆಯಲ್ಲಿ ರಾಸಾಯನಿಕಗಳು ಕೂಡ ಬಿಡುಗಡೆಯಾಗಿ ದೇಹದ ಮೇಲೆ ದುಷ್ಪರಿಣಾಮ ಬೀರುತ್ತವೆ. ರೋಗನಿರೋಧಕ ಶಕ್ತಿ ಕಡಿಮೆಯಿರುವವರಿಗೆ ಪೇಪರ್ ಕಪ್ ರಿಸ್ಕಿ ಎನ್ನುವುದರಲ್ಲಿ ಸಂಶಯವಿಲ್ಲ. ಪ್ಲಾಸ್ಟಿಕ್ ಕಪ್ ಸಹ ಒಳ್ಳೆಯದಲ್ಲ, ಅದಕ್ಕೆ ಸಹ ಬಿಸಿ ತಗುಲಿದಾಗ ದುಷ್ಪರಿಣಾಮಗಳು ಹೆಚ್ಚು, ಇನ್ನಾದರೂ ಪೇಪರ್ ಕಪ್‌ ಅನ್ನು ಚಹಾ ಕುಡಿಯಲು ಬಾಯಿಗೆ ಹಾಕುವ ಮುನ್ನ ಮತ್ತೊಮ್ಮೆ ಯೋಚಿಸಿ, ಇಲ್ಲದಿದ್ದರೆ ಜೀವಕ್ಕೆ ಅಪಾಯ.


ಹೇಮಂತ ಚಿನ್ನು 

ಕರ್ನಾಟಕ ಶಿಕ್ಷಕರ ಬಳಗ

Latest News

ಯಾವುದು ಸರಿ, ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ?

೧೯೫೬ ನವಂಬರ್ ೧ ರಂದು ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗು ಮದ್ರಾಸ್ ಕರ್ನಾಟಕ ಎಲ್ಲ ಸೇರಿ ಮೈಸೂರು ರಾಜ್ಯ ಉದಯವಾಯಿತು. ಆಗ...

More Articles Like This

error: Content is protected !!
Join WhatsApp Group