ಅಲೈಯನ್ಸ್ ಇಂಟರ್‍ನ್ಯಾಷನಲ್ ಕ್ಲಬ್ ವತಿಯಿಂದ ಶಾಲಾ ಶಿಕ್ಷಣ ಪದಾಧಿಕಾರಿಗಳ ಕಾರ್ಯಾಗಾರ

0
180

ಮೈಸೂರು – ಅಸೋಸಿಯೇಷನ್ ಆಫ್ ಅಲೈಯನ್ಸ್ ಕ್ಲಬ್ ಇಂಟರ್‍ನ್ಯಾಷನಲ್ ಮೈಸೂರು ಜಿಲ್ಲೆ 255 ಮತ್ತು ಮಂಡ್ಯ ಜಿಲ್ಲೆ 268 (ದಕ್ಷಿಣ) ಈ ಎರಡು ಜಿಲ್ಲೆಗಳ ಪದಾಧಿಕಾರಿಗಳಿಗೆ ಶಾಲಾ ಶಿಕ್ಷಣ (ಸ್ಕೂಲಿಂಗ್) ಒಂದು ದಿನದ ಕಾರ್ಯಾಗಾರವನ್ನು ಇತ್ತೀಚೆಗೆ ಮೈಸೂರಿನ ಹೆಬ್ಬಾಳು ರಿಂಗ್‍ರೋಡ್‍ನ ಖಾಸಗಿ ಹೊಟೇಲ್‍ನಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅಂತಾರಾಷ್ಟ್ರೀಯ ನಿರ್ದೇಶಕರಾದ (ಎಎಸಿಐ) ಡಾ.ಅಲೈ ನಾಗರಾಜ್ ವಿ.ಭೈರಿಯವರು ನೆರವೇರಿಸಿದರು. 

ಈ ಸಂದರ್ಭದಲ್ಲಿ ಮಾಜಿ ಅಂತಾರಾಷ್ಟ್ರೀಯ ನಿರ್ದೇಶಕರಾದ ಅಲೈ ದಿವಾಕರ್ ಹಾಗೂ ಇಂಟರ್‍ನ್ಯಾಷನಲ್ ಕಮಿಟಿ ಚೇರ್‍ಮನ್‍ಗಳಾದ ಅಲೈ ಮುನಿಯಪ್ಪ, ಅಲೈ ಅಜಂತ ರಂಗಸ್ವಾಮಿ, ಮೈಸೂರು ಜಿಲ್ಲೆ 255ರ ರಾಜ್ಯಪಾಲರಾದ ಅಲೈ ನಂಜುಂಡಸ್ವಾಮಿ ಹಾಗೂ ಒಂದನೇ ಉಪ ರಾಜ್ಯಪಾಲರಾದ ಅಲೈ ಸಿರಿಬಾಲು, ಎರಡನೇ ಉಪ ರಾಜ್ಯಪಾಲರಾದ ಎಸ್.ವೆಂಕಟೇಶ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಎಂ.ಎಸ್.ಸಂತೋಷ್‍ಕುಮಾರ್, ಜಿಲ್ಲಾ ಸಂಪುಟ ಖಜಾಂಜಿ ಎನ್.ಗಂಗಾಧರಪ್ಪ, ಪಿಆರ್‍ಓ ಟಿ.ಎಸ್.ರವೀಂದ್ರನಾಥ್ ಇವರುಗಳು ಉಪಸ್ಥಿತರಿದ್ದರು. 

ಈ ಕಾರ್ಯಾಗಾರದಲ್ಲಿ ಸುಮಾರು 110ಕ್ಕೂ ಹೆಚ್ಚು ಪದಾಧಿಕಾರಿಗಳು ಪಾಲ್ಗೊಂಡು ಇದರ ಸದುಪಯೋಗವನ್ನು ಪಡೆದರು. ಇದೇ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ 268ರ ರಾಜ್ಯಪಾಲರಾದ ಕೆ.ಟಿ.ಹನುಮಂತು ಹಾಗೂ ಒಂದನೇ ಉಪರಾಜ್ಯಪಾಲರಾದ ಮಾದೇಗೌಡ, ಎರಡನೇ ಉಪ ರಾಜ್ಯಪಾಲ ಶಶಿಧರ್ ಈಚ್ಗೆರೆ ಹಾಗೂ ಸಂಪುಟ ಕಾರ್ಯದರ್ಶಿ ಆರ್.ರಮೇಶ್, ಸಂಪುಟ ಖಜಾಂಚಿ ಕೆ.ಜಿ.ಚಂದ್ರಶೇಖರ್ ಹಾಗೂ ಪಿಆರ್‍ಓ ಅಪ್ಪಾಜಿ ಉಪಸ್ಥಿತರಿದ್ದರು.