spot_img
spot_img

ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆ ಬೇಕು – ಬಿಇಓ ಮನ್ನಿಕೇರಿ

Must Read

- Advertisement -

ಮೂಡಲಗಿ: ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳು ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಲು ಸಹಕಾರಿ ಆಗುತ್ತವೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು. 

ಅವರು ಮೂಡಲಗಿ ಶ್ರೀ ಶಿವಬೋಧ ರಂಗ ಬ್ಯಾಂಕಿನಲ್ಲಿ ಮಧು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇವಾ ಸಂಘದ 5 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ನಿರಂತರ ಸಾಮಾಜಿಕ ಕಾರ್ಯ ಚಟುವಟಿಕೆ ಮಾಡುವುದು ಸಂಘದ ಸೇವೆ ಶ್ಲಾಘನೀಯವಾಗಿದೆ ಎಂದರು. 

ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತ ಸಿದ್ದಣ್ಣ ದುರದುಂಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹೊಲಿಗೆ ತರಬೇತಿ, ಕಂಪ್ಯೂಟರ್ ತರಬೇತಿ, ಅರೋಗ್ಯ ಜಾಗೃತಿ, ಕಾನೂನು ಅರಿವು ಹೀಗೆ ಹಲವಾರು ಜನಜಾಗೃತಿ ಕಾರ್ಯಕ್ರಮ ಮಾಡುತ್ತಾ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ನಿರಂತರ ನಿಸ್ವಾರ್ಥ ಸೇವೆ ಈ ಸಂಘದಲ್ಲಿ ಮೂಡಿ ಬರಲಿ ಎಂದು ಹೇಳಿದರು. 

- Advertisement -

 ಬೆಳಗಾವಿಯ ನ್ಯಾಯವಾದಿ ಡಾ. ಅಪೇಕ್ಷಾ ಯಡಹಳ್ಳಿ ಮಾತನಾಡಿ, ಮಕ್ಕಳು ಎಂದರೆ ದೇವರಿದ್ದಂತೆ ಅವರಿಗೆ ಮನೆಯಲ್ಲಿ ಸಂಸ್ಕಾರ ಮತ್ತು ಜ್ಞಾನದ ಬಗ್ಗೆ ತಿಳಿಸಬೇಕು ಎಂದು ಹೇಳಿದರು.

ದಿವ್ಯ ಸಾನ್ನಿಧ್ಯ ವಹಿಸಿದ ನಾಗನೂರಿನ ಮಾತೋಶ್ರೀ ಕಾವ್ಯಶ್ರೀ ಅಮ್ಮನವರು ಮಾತನಾಡುತ್ತಾ, ಮಹಿಳೆಯರು ಮಕ್ಕಳಿಗೆ ಅಧ್ಯಾತ್ಮದ ವಿಷಯದ ಕುರಿತು ದಿನನಿತ್ಯ ತಿಳಿಸಬೇಕು ಅಂದಾಗ ಮಾತ್ರ ಪ್ರತಿಯೊಬ್ಬರು ಸುಂದರ ಜೀವನ ನಡೆಸಲು ಸಾಧ್ಯ ಎಂದರು. ಸಂಘದ ಅಧ್ಯಕ್ಷೆ ಮಧು ಸುಣಗದ ಅಧ್ಯಕ್ಷತೆ ವಹಿಸಿದ್ದರು. 

ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ಭಾಗವಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಮೆಡಲ್ ಬಹುಮಾನ ವಿತರಿಸಲಾಯಿತು. ಮೂಡಲಗಿ ಕ್ಷೇತ್ರ  ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಬೆಳಗಾವಿ ಡಾ. ಅಪೇಕ್ಷಾ ನಡಹಳ್ಳಿ, ರಾಜ್ಯ ಯುವ ಪ್ರಶಸ್ತಿ ವಿಜೇತ ಸಿದ್ದಣ್ಣ ದುರದುಂಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ಶಿವಬೋಧ ರಂಗ ಬ್ಯಾಂಕಿನ ಅಧ್ಯಕ್ಷರಾದ ಬಸವರಾಜ ಗುಲಗಾಜಂಬಗಿ, ಮೂಡಲಗಿ ನ್ಯಾಯವಾದಿಗಳ ಸಂಘದ ಮಾಜಿ ಕಾರ್ಯದರ್ಶಿ ಲಕ್ಷ್ಮಣ ಅಡಿಹುಡಿ, ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘದ ಖಜಾಂಚಿ ಪೂರ್ಣಿಮಾ ಗೊಡ್ಯಾಗೋಳ, ನ್ಯಾಯವಾದಿ ಎಸ್ ವಾಯ್ ಸಣ್ಣಕ್ಕಿ, ಸುಭಾಷ ಗೊಡ್ಯಾಗೋಳ, ಮಂಜುನಾಥ ರೇಳೆಕರ, ಕೋಮಲ ಶಿಂಧೆ, ಲಕ್ಷ್ಮಿ ಗೊಡ್ಯಾಗೋಳ ಶಶಿರೇಖಾ ಬೆಳ್ಳಕ್ಕಿ ವಿಜಯಲಕ್ಷ್ಮಿ ರೇಳೆಕರ ಹಾಗೂ ಸಂಘದ ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.  ಎಮ್ ಆಯ್ ಬಡಿಗೇರ ಸ್ವಾಗತಿಸಿದರು. ಶಿಕ್ಷಕ ಅಲ್ಲಪ್ಪ ಕೌಜಲಗಿ ನಿರೂಪಿಸಿದರು. ಮೌನೇಶ ಬಡಿಗೇರ ವಂದಿಸಿದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group