spot_img
spot_img

ಸಮನ್ವಯ ಕವಿ ಜಿ.ಎಸ್.ಶಿವರುದ್ರಪ್ಪನವರ ಕಾವ್ಯದಲ್ಲಿ ಬದುಕು ಚಿಂತನೆಗಳ ಅನಾವರಣ

Must Read

spot_img
- Advertisement -

ಜಿಎಸ್‍ಎಸ್ ಎಂದೇ ಖ್ಯಾತಿ ಪಡೆದ ಜಿ.ಎಸ್.ಶಿವರುದ್ರಪ್ಪನವರು ಕನ್ನಡ ಸಾಹಿತ್ಯದಲ್ಲಿ ಪ್ರಬುದ್ಧ ವಿಮರ್ಶಕರು. ಗೋವಿಂದ ಪೈ, ಕುವೆಂಪು ನಂತರ 2006ರಲ್ಲಿ ರಾಷ್ಟ್ರಕವಿ ಗೌರವಕ್ಕೆ ಪಾತ್ರರಾದವರು. ಸಮನ್ವಯ ಕವಿ ಎಂದೇ ಗುರುತಿಸಲ್ಪಟ್ಟ ಜಿ.ಎಸ್.ಎಸ್.ರವರ ಕಾವ್ಯದಲ್ಲಿ ಬದುಕು ಮತ್ತು ಚಿಂತನೆಗಳು ಅನಾವರಣಗೊಂಡಿವೆ ಎಂದು ಶಿಕ್ಷಕಿ ಕಲಾವಿದೆ ರಾಣ  ಚರಾಶ್ರೀ ತಿಳಿಸಿದರು.

ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪ ಪಕ್ಕದ ಗಣಪತಿ ದೇವಸ್ಥಾನ ಆವರಣದಲ್ಲಿ ಹಾಸನಾಂಬ ವೇದಿಕೆ  ಅಧ್ಯಕ್ಷರು, ಕವಯಿತ್ರಿ ಪದ್ಮಾವತಿ ವೆಂಕಟೇಶ್ ಅವರ ಪ್ರಾಯೋಜನೆಯಲ್ಲಿ ಭಾನುವಾರ ನಡೆದ ಮನೆ ಮನೆ ಕವಿಗೋಷ್ಠಿಯ 315 ತಿಂಗಳ ಕಾರ್ಯಕ್ರಮದಲ್ಲಿ ಜಿಎಸ್‍ಎಸ್ ಕಾವ್ಯ ಕುರಿತಂತೆ ಮಾತನಾಡಿ, ‘ಎದೆ ತುಂಬಿ ಹಾಡಿದೆನು ಅಂದು ನಾನು ಮನವಿಟ್ಟು ಕೇಳಿದಿರಿ ಅಲ್ಲಿ ನೀವು ಇಂದು ನಾ ಹಾಡಿದರೂ ಅಂದಿನಂತೆಯೇ ಕುಳಿತು ಕೇಳುವಿರಿ ಸಾಕೆನಗೆ ಅದುವೆ ಬಹುಮಾನ..’ ಎಂಬ ಕವಿತೆಯ ಸಾಲು ಇಂದಿಗೂ ಮನನೀಯ ಎಂದರು.

- Advertisement -

ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ‘ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ.. ಎಲ್ಲಿದೆ ನಂದನ ಎಲ್ಲಿದೆ ಬಂಧನ ಎಲ್ಲಾ ಇದೇ ಈ ನಮ್ಮೊಳಗೆ..’ ಇವೇ ಮೊದಲಾದ ಕವಿತೆಗಳ ಸಾಲುಗಳು ಅರ್ಥಗರ್ಭಿತವಾಗಿವೆ ಎಂದರು.

ಜಿ.ಎಸ್.ಎಸ್. ಅವರು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬಳ್ಳಾರಿಯಲ್ಲಿ 1988ರಲ್ಲಿ ನಡೆದ 10 ದಿನಗಳ ಕಥಾ ಕಮ್ಮಟದಲ್ಲಿ ತಾವು ಭಾಗವಹಿಸಿ ನಾಡಿನ ಶ್ರೇಷ್ಠ ಕವಿಯೊಂದಿಗೆ ಕಳೆದ ಮಧುರ ಕ್ಷಣಗಳನ್ನು ಸ್ಮರಿಸಿದರು. ಕವಿ ಜೆ.ಆರ್.ರವಿಕುಮಾರ್ ಅವರು ಕವಿಯ ‘ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಕವಿತೆಯ ಸಾಲು ಉಲ್ಲೇಖಿಸಿ ಎತ್ತಿದ ಪ್ರಶ್ನೆ ಸ್ವಾರಸ್ಯಕರ ಚರ್ಚೆಗೆ ಒಳಪಟ್ಟಿತು. ಧನಲಕ್ಷ್ಮಿ ಗೊರೂರು, ದಿಬ್ಬೂರು ರಮೇಶ್, ಬಾಲಕೃಷ್ಣ ಹೆಚ್.ಎನ್. ಪದ್ಮಾವತಿ ವೆಂಕಟೇಶ್ ರಾಣ  ಚರಾಶ್ರಿ ಜಿ.ಎಸ್.ಎಸ್. ರವರ ಭಾವಗೀತೆಗಳನ್ನು ಹಾಡಿದರು.    

ಕೆ.ಎನ್.ಚಿದಾನಂದ  ಜಿ.ಎಸ್.ಎಸ್.ಅವರ ಕವಿತೆ ವಾಚಿಸಿದರು. ಕವಿಗೋಷ್ಠಿಯಲ್ಲಿ ನೀಲಾವತಿ ಸಿ.ಎನ್., ಜೆ.ಆರ್.ರವಿಕುಮಾರ್, ಎನ್.ಎಲ್.ಚನ್ನೇಗೌಡ, ಗ್ಯಾರಂಟಿ ರಾಮಣ್ಣ, ಮಲ್ಲೇಶ್ ಜಿ., ಗೊರೂರು ಅನಂತರಾಜು, ದಿಬ್ಬೂರು ರಮೇಶ್ ಸ್ವರಚಿತ ಕವಿತೆಗಳನ್ನು ವಾಚಿಸಿದರು. 

- Advertisement -

ಎ.ವಿ.ರುದ್ರಪ್ಪಾಜಿರಾವ್. ಜಯದೇವಪ್ಪ, ಜಯಲಕ್ಷ್ಮಿ, ಹರಿಣ , ಮೀನಾಕ್ಷಿ, ಯಾಕೂಬ್, ಕಮಲಾಕ್ಷಿ ಬಿ.ಜಿ. ಹೆಚ್.ವಿ.ಚಂದ್ರಣ್ಣಗೌಡ, ಎಲ್.ಎಸ್.ನಿರ್ಮಲ ಇದ್ದರು. ಕವಿ ಸಮುದ್ರವಳ್ಳಿ ವಾಸು ಸ್ವಾಗತಿಸಿದರು. ರಾಣ  ಮೇಡಂ ತಂಡದವರು ಸಮೂಹ ಗೀತೆಗಳಿಂದ ರಂಜಿಸಿದರು. ಕಲಾ ಸೇವೆಗಾಗಿ ಜಿಲ್ಲಾಡಳಿತದಿಂದ 2024ರ ಗಣರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ರಾಣ  ಚರಾಶ್ರೀಯವರನ್ನು ಮನೆ ಮನೆ ಕವಿಗೋಷ್ಠಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group