spot_img
spot_img

ರಾಮ ಮನಗೂಳಿ ಅವರ ನಿಧನ; ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟವಾಗಿದೆ – ದರಗಾದ

Must Read

- Advertisement -

ಹುನಗುಂದ: ಬಾಗಲಕೋಟಿ ಜಿಲ್ಲೆಯ ಹಿರಿಯ ಪತ್ರಕರ್ತ ರಾಮ ಮನಗೂಳಿ ನಿಧನದ ಹಿನ್ನೆಲೆಯಲಿ ಹುನಗುಂದ ಕಾರ್ಯ ನಿರತ ಪತ್ರಕರ್ತರ ಸಂಘದಿ೦ದ ಶ್ರದ್ದಾಂಜಲಿ ಅರ್ಪಿಸಲಾಯಿತು.

ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಿ.ರಾಮ ಮನಗೂಳಿ ಅವರ ಶ್ರದ್ದಾಂಜಲಿ ಸಭೆ ಮತ್ತು ನುಡಿ ನಮನ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ದರಗಾದ ಮಾತನಾಡಿ, ದಿ.ರಾಮ ಮನಗೂಳಿ ಪತ್ರಿಕಾರಂಗದಲ್ಲಿ ಅವರಿಗೆ ಅವರೇ ಸಾಟಿಯಾಗಿದ್ದರು, ಬಾಗಲಕೋಟ ಜಿಲ್ಲೆಯ ಅನೇಕ ಜ್ವಲಂತ ಸಮಸ್ಯೆಗಳ ಕುರಿತು ಅವರು ಬರೆದ ದಿಟ್ಟ ವರದಿಗಳು ರಾಜಕಾರಣಿಗಳನ್ನು ಮತ್ತು ಅಧಿಕಾರಿಗಳ ಕಣ್ಣತೆರೆಸುವ ಕಾರ್ಯ ಮಾಡಿದರು ಜೊತೆಗೆ ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದರು. ೪೦ ವರ್ಷ ಪತ್ರಿಕಾ ರಂಗದಲ್ಲಿ ಅವರು ಅಗಾಧವಾದ ಸೇವೆಯನ್ನು ಸಲ್ಲಿಸಿದ್ದಾರೆ ಎಂದರು.

ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊಸಮನಿ ಮಾತನಾಡಿ, ದಿ.ರಾಮ ಮನಗೂಳಿ ಅವರ ನಿಧನ ಪತ್ರಿಕಾ ರಂಗಕ್ಕೆ ನಷ್ಟವುಂಟಾಗಿದೆ. ರಾಮ ಮನಗೂಳಿಯವರು ಪತ್ರಿಕಾ ರಂಗದಲ್ಲಿ ಬಾಗಲಕೋಟೆ ಸೇರಿದಂತೆ ಅನೇಕ ಮುಳಗಡೆಯ ಪ್ರದೇಶಗಳ ಜ್ವಲಂತ ಸಮಸ್ಯೆಗಳ ಕುರಿತು ವರದಿಯನ್ನು ಬರೆದು ಸಂತ್ರಸ್ತರ ಸಂಕಷ್ಟವನ್ನು ಪರಿಹರಿಸುವ ಕಾರ್ಯವನ್ನು ಮಾಡುವ ಮೂಲಕ ಜಿಲ್ಲೆಯ ಹೆಸರಾಂತ ಪತ್ರಕರ್ತರಾಗಿದ್ದರು ಎಂದರು.

- Advertisement -

ಇದೇ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಮಹಾಂತೇಶ ಪಾಟೀಲ, ವೀರೇಶ ಕುರ್ತಕೋಟಿ, ಮಹಾಂತೇಶ ತೋಪಲಕಟ್ಟಿ, ಸಂಗಮೇಶ ಹೂಗಾರ, ಚಂದ್ರು ಗಂಗೂರ, ಬಸವರಾಜ ಬಡಿಗೇರ, ಜಗದೀಶ ಹದ್ಲಿ, ರಮೇಶ ತಾರಿವಾಳ, ಮಲ್ಲಿಕಾರ್ಜುನ ಬಂಡರಗಲ್ಲ, ಅಶೋಕ ಹಂದ್ರಾಳ, ರಿಯಾಜ ಸರಕಾವಸ ಸೇರಿದಂತೆ ಅನೇಕರು ಇದ್ದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group