spot_img
spot_img

ಸಂತೋಷ ಪಾರ್ಶಿ ಮತ್ತು ಸಲೀಮ ನದಾಫ್‍ಗೆ ಸತ್ಕಾರ

Must Read

- Advertisement -

ಮೂಡಲಗಿ: ಅಖಿಲ ಭಾರತ ವಿದ್ಯುತ್ ಕ್ರೀಡಾ ನಿಯಂತ್ರಣ ಮಂಡಳಿಯವರು ಉತ್ತರಪ್ರದೇಶದ ಲಕ್ನೋದಲ್ಲಿ  ಜರುಗಿದ 45ನೇ ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಸುವರ್ಣ ಪದಕ ಪಡೆದ ಮೂಡಲಗಿ ಹೆಸ್ಕಾಂ ನೌಕರ ಸಲೀಮ ಇಸಾಕಹ್ಮದ ನದಾಫ್ ಅವರನ್ನು ಮತ್ತು  ರಾಮದುರ್ಗ ತಾಲೂಕಿನ ಚಂದರಗಿ ಕ್ರೀಡಾ ವಸತಿ ಶಾಲೆಯ ಚುನಾವಣೆಯಲ್ಲಿ ಎರಡನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾದ ಮೂಡಲಗಿಯ ಆರ್.ಡಿ.ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ  ಮಹಾಲಕ್ಷ್ಮೀ ಅರ್ಬನ್ ಸೊಸಾಯಿಟಿಯ ನಿರ್ದೇಶಕ  ಸಂತೋಷ ತಮ್ಮಣ್ಣ ಪಾರ್ಶಿ ಅವರನ್ನು  ಮೂಡಲಗಿ ಕಾಶೀಮಅಲಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಮತ್ತು ಕರ್ನಾಟಕ ರಾಜ್ಯ ನದಾಫ್(ಪಿಂಜಾರ) ಸಂಘದ ಪದಾಧಿಕಾರಿಗಳು ಸೊಸಾಯಿಟಿ ಸಭಾಭವನದಲ್ಲಿ ಸತ್ಕರಿಸಿ ಗೌರವಿಸಿದರು.

ಸತ್ಕಾರ ಸಮಾರಂಭದಲ್ಲಿ ಕಾಶೀಮಅಲಿ ಅರ್ಬನ್  ಸೊಸಾಯಿಟಿಯ ಮತ್ತು ಕರ್ನಾಟಕ ರಾಜ್ಯ ನದಾಫ್ ಸಂಘದ ಅಧ್ಯಕ್ಷ ಅನ್ವರ ನದಾಫ್ ಮಾತನಾಡಿ, ಸಂತೋಷ ಪಾರ್ಶಿ ಮತ್ತು ಸಲೀಮ್ ನದಾಫ್ ಅವರು ಮೂಡಲಗಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಶುಭಹಾರೈಸಿದರು. 

ಈ ಸಮಯದಲ್ಲಿ ಸೊಸೈಟಿಯ ಉಪಾಧ್ಯಕ್ಷ ಇಸಾಕಅಹ್ಮದ ನದಾಪ್, ನಿರ್ದೇಶಕರಾದ ಮೀರಾಸಾಬ ನದಾಫ್, ಮಲೀಕಜಾನ ನದಾಫ್, ಅಪ್ಪಾಸಾಬ ನದಾಫ್, ಮುಬಾರಕ ಪಿಂಜಾರ, ಮೀರಾಸಾಬ ಸಿ.ನದಾಫ್, ನೂರಸಾಬ ನದಾಫ್, ಪ್ರಧಾನ ಕಾರ್ಯದರ್ಶಿ ಮಹ್ಮದಇರ್ಫಾನ ನದಾಫ್ ಮತ್ತು ಕರ್ನಾಟಕ ರಾಜ್ಯ ನದಾಫ್(ಪಿಂಜಾರ) ಸಂಘ ಪದಾಧಿಕಾರಿಗಳು ಹಾಗೂ  ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಮಂಗದಿಂ ಮಾನವನು ಜನಿಸಿಬಂದೆನ್ನುವರು ಈಗಿರುವ ಮಂಗದಿಂ ಜನಿಸನೇಕೆ ? ಮಂಗ ಮಾನಸದಿಂದ ಮನುಜ‌ ಮಾನಸವೆಂಬ ಸಿದ್ಧಾಂತ ಸರಿಯೇನೋ ! - ಎಮ್ಮೆತಮ್ಮ ಶಬ್ಧಾರ್ಥ ಮಂಗ = ಕೋತಿ. ಮಾನಸ = ಮನ. ಮನುಜ...
- Advertisement -

More Articles Like This

- Advertisement -
close
error: Content is protected !!
Join WhatsApp Group