ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ; 52 ಲಕ್ಕಕ್ಕೂ ಅಧಿಕ ಮೌಲ್ಯದ ವಸ್ತುಗಳು ಜಪ್ತಿ

Must Read

ಬೀದರ – ಜಿಲ್ಲೆಯ 13 ಠಾಣೆ ಹಾಗೂ ಹೈದರಾಬಾದಿನ ಒಂದು ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು. ಓರ್ವ ಅಂತಾರಾಜ್ಯ ಖದೀಮ ಸೇರಿ 28 ಜನ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಬಂಧಿತ ಆರೋಪಿಗಳಿಂದ 52 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತು ಜಪ್ತಿ ಮಾಡಿದ ಪೊಲೀಸರು. 23.91 ಲಕ್ಷ ಮೌಲ್ಯದ 396 ಗ್ರಾಂ ತೂಕದ ಬಂಗಾರ, 40 ಸಾವಿರ ಮೌಲ್ಯದ 320 ಗ್ರಾಂ ತೂಕದ ಬೆಳ್ಳಿ ಹಾಗು 7.76 ಲಕ್ಷ ನಗದು ಹಣ ಜಪ್ತಿ ಮಾಡಿದ್ದಾರೆ.

7 ಜಾನುವಾರು ಹಾಗೂ ಆಹಾರ ದಾನ್ಯದ ಚೀಲಗಳು ಸೇರಿ 2.49 ಲಕ್ಷ, 18.36 ಲಕ್ಷ ಮೌಲ್ಯದ ವಾಹನಗಳನ್ನ ಜಪ್ತಿ ಮಾಡಿ, ಒಟ್ಟು 28 ಜನ ಬಂಧಿತ ಆರೋಪಿಗಳಿಂದ 52.93 ಲಕ್ಷ ಮೌಲ್ಯದ ವಸ್ತು ಜಪ್ತಿ ಮಾಡಿದ್ದಾಗಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಎಸ್‌ಪಿ ಚನ್ನಬಸವಣ್ಣ ಲಂಗೋಟಿ. ಪ್ರಕರಣ ಭೇದಿಸಿದ ಪೊಲೀಸರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ತೆರಿಗೆಗಳ ಬಗ್ಗೆ ಎಲ್ಲರಲ್ಲಿ ಅರಿವು ಮುಖ್ಯ : ಪ್ರೊ. ಎಂ.ವಾಯ್. ಕಂಬಾರ

ಮೂಡಲಗಿ: ಸರಕು ಮತ್ತು ಸೇವಾ ತೆರಿಗೆ ಚೌಕಟ್ಟು ಭಾರತದಲ್ಲಿ ಜುಲೈ 1, 2017 ರಿಂದ ಜಾರಿಗೆ ಬಂದಿರುವ ಏಕರೂಪದ, ಗುರಿ-ಆಧಾರಿತ, ಪರೋಕ್ಷ ತೆರಿಗೆ ವ್ಯವಸ್ಥೆಯಾಗಿದೆ. ಇದು...

More Articles Like This

error: Content is protected !!
Join WhatsApp Group