spot_img
spot_img

ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪ ಬೆಳಗಾವಿಗೆ ಬರಲಿ

Must Read

- Advertisement -

ಮೂಡಲಗಿ – ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗಬೇಕಾದರೆ ಬಿಜೆಪಿ ಮುಖಂಡ ಈಶ್ವರಪ್ಪ ಅವರು ಬಂಡಾಯ ಅಭ್ಯರ್ಥಿಯಾಗಿ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸಬೇಕಿ ಎಂದು ತಾಲೂಕಿನ ಸಾಮಾಜಿಕ ಕಾರ್ಯಕರ್ತ, ವಕೀಲ ಮಲ್ಲಿಕಾರ್ಜುನ ಚೌಕಾಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಳಗಾವಿ ಟಿಕೇಟ್ ಜಗದೀಶ ಶೆಟ್ಟರ್ ಗೆ ಬಹುತೇಕ ಅಂತಿಮ ಆದಂತಿದೆ. ಇದರೊಂದಿಗೆ ಗೆಲುವು ಕಬ್ಬಿಣದ ಕಡಲೆ ಆಗಲಿದೆ. ಶೆಟ್ಟರ ಕೇವಲ ಮೋದಿ ಹೆಸರು ಹಾಗೂ ಬಣಜಿಗ ಸಮುದಾಯದ ಮತಗಳನ್ನು ಮಾತ್ರ ನೆಚ್ಚಿಕೊಳ್ಳಬೇಕಾಗುತ್ತದೆ. ಯಾಕೆಂದರೆ, ಶೆಟ್ಟರ್ ಈ ಹಿಂದೆ ಬೆಳಗಾವಿ ಉಸ್ತವಾರಿಯಾದಾಗ ಜಿಲ್ಲೆಗೆ ಅನ್ಯಾಯ ಮಾಡಿದರು ಮತ್ತು ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎನ್ನುವ ಮಾತುಗಳು ಒಂದೆಡೆಯಾದರೆ ಕ್ಷೇತ್ರದ ಹೊರಗಿನವರು ಎಂಬ ಭಾವನೆ ಕೂಡ ಇದೆ. ಇತ್ತಿಚಿಗೆ ಗೋ ಬ್ಯಾಕ್ ಶೆಟ್ಟರ್ ಅಭಿಯಾನ ಕೂಡ ಸದ್ದು ಮಾಡಿತ್ತು ಎಂದರು.

- Advertisement -

ಕಾಂಗ್ರೆಸಿನಿಂದ ಲಕ್ಷ್ಮಿ ಹೆಬ್ಬಾಳಕರ ಪುತ್ರ ಮೃಣಾಲ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಇದರಿಂದ ಲಿಂಗಾಯತ ಮತಗಳು ವಿಭಜನೆ ಆಗುತ್ತವೆ. ಪಂಚಮಸಾಲಿ ಮತಗಳು ಹಾಗೂ ನಿರ್ಣಾಯಕ ಸಮಾಜಗಳಾದ ಕುರುಬ ಮತ್ತು ಉಪ್ಪಾರ ಮತಗಳು ಕಾಂಗ್ರೆಸ್ಸಿನ ಪಾಲಾಗುವ ಸಂಭವವಿದೆ. ಸಿದ್ದರಾಮಯ್ಯ ಕಾರಣದಿಂದ ಕುರುಬ, ಪುಟ್ಟರಂಗಶೆಟ್ಟರ ಕಾರಣಕ್ಕೆ ಉಪ್ಪಾರ ಮತಗಳು ಸೇರಿದಂತೆ ಅಹಿಂದ ಮತಗಳು ಮೃಣಾಲ ಬುಟ್ಟಿಗೆ ಬಿಳಲಿವೆ. ಹಾಗೆ ಗ್ಯಾರಂಟಿ ಲಾಭದ ಕಾರಣಕ್ಕೆ ಮತಗಳು ಕಾಂಗ್ರೆಸ್ಸಿನ ಪಾಲಾಗುತ್ತವೆ. ಇದರಿಂದ ಬಿಜೆಪಿ ಸ್ಥಾನ ಕಳೆದು ಕೊಳ್ಳಬಹುದು.

ಶೆಟ್ಟರ ಸ್ಪರ್ಧೆಯ ಲಾಭ ಕಾಂಗ್ರೆಸ್ಸಿಗೆ ಸಿಗಬಾರದು ಹಾಗೂ ಮತ್ಸರದ ಕಾರಣದಿಂದ ಬಿಜೆಪಿ ಮತಗಳು ವಿಭಜನೆ ಆಗಬಾರದು ಎಂದರೆ ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಸ್ಪರ್ಧಿಸುವ ಬದಲು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಬೆಳಗಾವಿಯಿಂದ ಸ್ಪರ್ಧಿಸುವುದು ಉತ್ತಮ. ಇದರಿಂದ ಕಾಂಗ್ರೆಸ್ಸಿನ ಮತಗಳ ವಿಭಜನೆ ಸಾಧ್ಯವಾಗುತ್ತದೆ. ಹಾಗೆ ಒಡೆದು ಹೋಗಬಹುದಾದ ಬಿಜೆಪಿಯ ಮತಗಳು ಈಶ್ವರಪ್ಪ ಬುಟ್ಟಿಗೆ ಬಿಳಬಹುದು. ಆಗ ಶೆಟ್ಟರ ಅಥವಾ ಈಶ್ವರಪ್ಪ ಯಾರೆ ಗೆದ್ದರು ಬಿಜೆಪಿಗೆ ಲಾಭವಾಗುತ್ತದೆ ಎಂದು ಚೌಕಾಶಿ ಹೇಳಿದ್ದಾರೆ.

- Advertisement -
- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group