Homeಸುದ್ದಿಗಳುಮಹಿಳಾ ದಿನಾಚರಣೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಮಹಿಳಾ ದಿನಾಚರಣೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ

spot_img

ಅಖಿಲ ಭಾರತ ಕವಯಿತ್ರಿಯರ ಸಂಘಟನೆ ಬೆಳಗಾವಿ ಘಟಕ, ಕರ್ನಾಟಕ ಲೇಖಕಿಯರ ಸಂಘ ಬೆಳಗಾವಿ ಶಾಖೆ ಹಾಗೂ ಪೃಥ್ವಿ ಫೌಂಡೇಶನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಪುಸ್ತಕಗಳ ಬಿಡುಗಡೆ ಹಾಗೂ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮವನ್ನು 23 ರಂದು  ಹಮ್ಮಿಕೊಳ್ಳಲಾಗಿತ್ತು.

ಲೋಕದರ್ಶನ ದಿನ ಪತ್ರಿಕೆಯ  ಸುರೇಖಾ ದೇಸಾಯಿ ಕಾರ್ಯಕ್ರಮವನ್ನು ಬಲೂನ್ ಹಾರಿಸುವುದರ ಮೂಲಕ ಉದ್ಘಾಟಿಸಿದರು. 

ರಾಜೇಶ್ವರಿ ಹೆಗಡೆ ಅವರ ಕೃತಿ ಮೊದಲ ಹೆಜ್ಜೆ, ದೀಪಿಕಾ ಚಾಟೆ ಅವರ ಭಾವಗಳ ಮೆರವಣಿಗೆ, ಅನ್ನಪೂರ್ಣಾ ಹಿರೇಮಠ ಅವರ ಮೌನ ವೀಣೆ ನುಡಿದಾಗ ಹಾಗೂ ಜ್ಯೋತಿ ಬದಾಮಿ ಅವರ ಓಷಿಯಾನಿಯಾ ಕೃತಿಗಳನ್ನು ಪ್ರೇಮಾ ತಹಶೀಲದಾರ, ಲಲಿತಾ ಕೋಪರ್ಡೆ, ಹಮೀದಾ ಬೇಗಂ ದೇಸಾಯಿ ಹಾಗೂ ಶೋಭಾ ಕುಲಕರ್ಣಿ, ಜಯಶೀಲಾ ಬ್ಯಾಕೋಡ ಇವರು ಲೋಕಾರ್ಪಣೆ ಮಾಡಿದರು.

ಬಹು ಭಾಷಾ ಕವಿಗೋಷ್ಠಿಯಲ್ಲಿ ವಿದ್ಯಾ ಹುಂಡೇಕರ, ಸುಷ್ಮಾ ಜಗಜಂಪಿ, ಮಮತಾ ಶಂಕರ್,ಹೀರಾ ಚೌಗುಲೆ, ದಾನಮ್ಮ ಅಂಗಡಿ,ಮಹಾನಂದ ಪರುಶೆಟ್ಟಿ, ರೇಣುಕಾ ವಾಲಿ, ಡಾ.ಮೈತ್ರೇಯಿಣಿ,ಡಾ.ಭಾರತಿ ಮಠದ, ಲಲಿತಾ ಪರ್ವತರಾವ್,ಮಂಗಲಾ ಅರಳಿಮಟ್ಟಿ, ಸುನಂದಾ  ಹಾಲಭಾವಿ,ಸುಮಾ ಕಿತ್ತೂರು ಮುಂತಾದವರು ಕನ್ನಡ, ಹಿಂದಿ,ಮರಾಠಿ ಹಾಗು ಇಂಗ್ಲೀಷ್ ಕವನಗಳನ್ನು ವಾಚಿಸಿದರು.

ಇದೆ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರಾಜೇಶ್ವರಿ ಹೆಗಡೆ ಅವರಿಗೆ ಅನುಪಮ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ಕಸಾಪ ಬೆಳಗಾವಿ ತಾಲೂಕು ಸಮ್ಮೇಳನ ದ ಸರ್ವಾಧ್ಯಕ್ಷೆಯಾಗಿದ್ದ ನಿಮಿತ್ತ  ಜ್ಯೋತಿ ಬದಾಮಿ ಯವರಿಗೆ ಮೂರೂ ಸಂಸ್ಥೆ ಗಳಿಂದ ಗೌರವಿಸಲಾಯಿತು.

ಪಾರ್ವತಿ ಪಿಟಗಿ, ಜ್ಯೋತಿ ಕಟ್ಟಿ, ಭುವನೇಶ್ವರಿ ಪೂಜೇರಿ, ಉಮಾ  ನೇಸರ್ಗಿ, ಉಪಸ್ಥಿತರಿದ್ದರು.

ಶೈಲಾ ಹಿರೇಮಠ ಪ್ರಾರ್ಥನೆ ಹಾಗು ಎಐಪಿಸಿ ಕಾರ್ಯದರ್ಶಿ ಶೈಲಜಾ ಕುಲಕರ್ಣಿ ಎಐಪಿಸಿ ಕುಲಗೀತೆ ಹಾಡಿದರು.ಪೃಥ್ವಿ ಫೌಂಡೇಶನ್ ಅಧ್ಯಕ್ಷೆ  ಹೇಮಾವತಿ ಸೊನೊಳಿ ನಿರೂಪಿಸಿದರು. ಕಲೇಸಂ ಕಾರ್ಯದರ್ಶಿ ಡಾ.ನಿರ್ಮಲಾ ಬಟ್ಟಲ ಪರಿಚಯಿಸಿದರು.

ಕಲೇಸಂ ಸಹ ಕಾರ್ಯದರ್ಶಿ ರಾಜನಂದಾ ಗಾರ್ಗಿ ಸ್ವಾಗತಿಸಿದರು, ಕಲೇಸಂ ಉಪಾಧ್ಯಕ್ಷೆ ಜ್ಯೋತಿ ಬದಾಮಿ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group