ರಾಯಚೂರು ಜಿಲ್ಲೆಯ 65 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಕ್ಕಳ ಸ್ನೇಹಿ ಗ್ರಂಥಾಲಯ ಸ್ಥಾಪನೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯನ್ನು ದಿನಾಂಕ 19/4/2024 ರಂದು ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಶಕ್ತಿನಗರದಲ್ಲಿ ಸಾಹಿತ್ಯ ಆಯ್.ಎ.ಎಸ್. (ಪ್ರೊಬೇಶನರಿ) ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಮಕ್ಕಳನ್ನು ಗ್ರಂಥಾಲಯದತ್ತ ಸೆಳೆಯಲು ಆಕರ್ಷಕ ಬಣ್ಣಬಣ್ಣದ ಚಿತ್ರ ಚಿತ್ತಾರಗಳನ್ನು ಬಿಡಿಸಿ ಮಕ್ಕಳ ಸಂತೋಷಕಲಿಕೆಗೆ ಸಹಕಾರಿಯಾಗುವಂಥ ವಾತಾವರಣ ಕಲ್ಪಿಸಲಾಗಿದ್ದು, ಪುಸ್ತಕಗಳನ್ನು ಒಪ್ಪ ಓರಣವಾಗಿ ಜೋಡಿಸಿಡಲು, ಮಕ್ಕಳ ಕೈಗೆಟಕುವಂಥ ಶೆಲ್ಫ್, ರ್ಯಾಕ್ ಹಾಗೂ ಸರಾಗವಾಗಿ ಕುಳಿತು ಓದಿಗಾಗಿ ಬೇಕಾಗುವ ಪೀಠೋಪಕರಣಕರಣಗಳನ್ನು ಬಹುತೇಕ ಶಾಲೆಗಳಲ್ಲಿ ಈಗಾಗಲೇ ಅಳವಡಿಸಲಾಗಿದ್ದು, ಶೇಕಡಾ 90% ಶಾಲೆಗಳಲ್ಲಿ ಅನುಷ್ಠಾನಗೊಳಿಸುವ ಪ್ರಕ್ರಿಯೆ ಮುಕ್ತಾಯದ ಹಂತದಲ್ಲಿದ್ದು, ಮೇ 2024 ರ ಕೊನೆಯಲ್ಲಿ ಸಂಪೂರ್ಣ ಕಾರ್ಯಗತಗೊಳಿಸಲು ಸಾಹಿತ್ಯ ಆಯ್.ಎ.ಎಸ್.ರವರು ಸೂಚಿಸಿದರು.
ಶರಣಬಸಪ್ಪ ಪಟ್ಟೇದ, ವೆಂಕಟೇಶಸಿಂಗ್ ಹಜಾರೆ, ಅನಿಲ ಕುಲಕರ್ಣಿ, ವಿಜಯಕುಮಾರ, ಬಸವರಾಜ ಹಿರೇಮಠ, ತಿಮ್ಮಣ್ಣ ಮಸ್ಕಿ, ವಿನಯ, ಕೌಸರ ಪಾಷಾ, ಸುರೇಂದ್ರ ಪಾಟೀಲ, ವಿನೋದ ಸಭೆಯಲ್ಲಿ ಉಪಸ್ಥಿತರಿದ್ದರು