ರಮೇಶ ಜಿಗಜಿಣಗಿ ಗಾಣಿಗ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ – ಸುರೇಶ ಮಳಲಿ

0
376

ಸಿಂದಗಿ: ಸಂಸದ ರಮೇಶ ಜಿಗಜೀಣಗಿಯವರು ಗಾಣಿಗ ಸಮಾಜವನ್ನು ಎಲ್ಲ ರೀತಿಯಲ್ಲಿ ಬಳಕೆ ಮಾಡಿಕೊಂಡು ಸ್ಥಾನ ನೀಡುವಲ್ಲಿ ಮಲತಾಯಿ ದೋರಣೆ ತಾಳಿದ್ದಲ್ಲದೆ ಈ ಸಮುದಾಯಕ್ಕೆ ಒಂದೇ ಒಂದು ಬಿಡಿಕಾಸು ಅನುದಾನ ಹಾಕಿಲ್ಲ ಗಾಣಿಗ ಸಮುದಾಯವನ್ನು ಬರೀ ಮತಯಂತ್ರವನ್ನಾಗಿ ಬಳಕೆ ಮಾಡಿಕೋಂಡಿದ್ದಾರೆ ಕಾರಣ ಈ ಬಾರಿ ಮಾಜಿ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಗಾಣಿಗ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಬೆಂಬಲಿಸಿ ಸವದಿಯವರ ಕೈ ಬಲಪಡಿಸೋಣ ಎಂದು ಮುಖಂಡ ಸುರೇಶ ಮಳಲಿ ಮನವಿ ಮಾಡಿಕೊಂಡರು.

ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಗಾಣಿಗ ಸಮಾಜದವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಮೇಶ ಜಿಗಜಿಣಗಿಯವರು ಲಕ್ಷ್ಮಣ ಸವದಿಯವರ ಟಿಕೆಟ ತಪ್ಪಿಸುವಲ್ಲಿ ಮೊದಲಿಗರು ಇವರಿಗೆ ಲಕ್ಷ್ಮಣ ಸವದಿಯವರು ಆಯ್ಕೆಯಾದರೆ ಮುಖ್ಯಮಂತ್ರಿ ಸ್ಥಾನದಲ್ಲಿ ನಿಲ್ಲುತ್ತಾರೆ ಅವರನ್ನು ಇಲ್ಲಿಯೇ ಕೈ ಬಿಟ್ಟರೆ ಮುಂದೆ ಬರುವುದಿಲ್ಲ ಎನ್ನುವ ಕುತಂತ್ರ ರಾಜಕಾರಣದಲ್ಲಿ ತೊಡಗಿ ಸಣ್ಣತನ ತೋರಿಸಿದ್ದಾರೆ. ಇಂತವರು ಇನ್ನೊಮ್ಮೆ ಆಯ್ಕೆಯಾದರೆ ಸಮುದಾಯ ಓರ್ವ ನಾಯಕರು ರಾಜಕೀಯಕ್ಕೆ ಬರುವುದಿಲ್ಲ ಅದಕ್ಕೆ ಈ ಬಾರಿ ಗಾಣಿಗ ಸಮುದಾಯ ಸಂಪೂರ್ಣವಾಗಿ ಬೆಂಬಲಿಸಿ ಎಂದರು.

ಗೋಲ್ಲಾಳಪ್ಪಗೌಡ ತಮ್ಮನಗೌಡ ಪಾಟೀಲ ಮಾತನಾಡಿ, ರಮೇಶ ಜಿಗಜೀಣಗಿಯವರು ಸಂಸದರಾದಾಗಿನಿಂದ ಗಾಣಿಗ ಸಮಾಜವನ್ನು ತುಳಿಯುತ್ತ ಬಂದಿದ್ದಾರೆ. ಆಲಮೇಲಕ್ಕೆ ಮಂಜೂರಾದ ತೋಟಗಾರಿಕೆ ಕಾಲೇಜು ರದ್ದಿಗೆ ಶಿಫಾರಸು ಮಾಡಿದ್ದಾರೆ. ಮಾಜಿ ಶಾಸಕರು ಕೂಡಾ ಈ ಸಮುದಾಯದ ಓರ್ವ ಸದಸ್ಯನನ್ನು ಬೆಳೆಯಲು ಬಿಟ್ಟಿಲ್ಲ ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿ ನಮ್ಮ ಸಮಾಜಕ್ಕೆ 2ಎ ಮಿಸಲಾತಿ ಸಿಕ್ಕಿದೆ ಹೀಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಾಗಿವೆ ಈ ಪಕ್ಷ ನಮ್ಮ ಸಮುದಾಯದ ಲಕ್ಷ್ಮಣ ಸವದಿಯವರನ್ನು ಸ್ಟಾರ್ ಪ್ರಚಾರ ಹುದ್ದೆ ನೀಡಿ ಗೌರವಿಸಿದೆ ಅವರ ಬೆಂಬಲಕ್ಕೆ ನಾವೆಲ್ಲರು ನಿಂತು ಅವರ ಕೈ ಬಲಪಡಿಸೋಣ ಎಂದು ಹೇಳಿದರು.

ಸುರೇಶ ಚೌಧರಿ, ಶಿವಲಿಂಗಪ್ಪ ಚೌಧರಿ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರ ಬಂದ ನಂತರ ಸಿಂದಗಿಯಲ್ಲಿನ ವನಶ್ರೀ ಸಮುದಾಯ ಭವನಕ್ಕೆ ರೂ 2 ಕೋಟಿ, ಇಂಡಿಯಲ್ಲಿನ ವನಶ್ರೀ ಭವನಕ್ಕೆ ರೂ 5 ಕೋಟಿ ಅನುದಾನ ನೀಡಿದ್ದಾರೆ . ಸಂಸದರು ತಮ್ಮ ಅವಧಿಯಲ್ಲಿ ಒಂದು ಬಿಡಕಾಸು ಕೂಡಾ ಈ ಸಮುದಾಯ ಕ್ಕೆ ನೀಡಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಮಹಾಂತಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ಪ್ರವೀಣ ಕಂಠಿಗೊಂಡ, ಗಿರೀಶಗೌಡ ಪಾಟೀಲ, ಮಾಜಿ ತಾಪಂ ಸದಸ್ಯ ರಾವುತಗೌಡ ಬಿರಾದಾರ, ಸೇರಿದಂತೆ ಅನೇಕರಿದ್ದರು.