ಒಳ್ಳೆಯ ಸರ್ಕಾರ ರಚನೆಗೆ ಮತದಾನ ಮಾಡಬೇಕು – ಈರಣ್ಣ ಕಡಾಡಿ

Must Read

ಮೂಡಲಗಿ: 5 ವರ್ಷಗಳ ಕಾಲ ರಾಷ್ಟ್ರವನ್ನಾಳುವ ಸರ್ಕಾರವನ್ನು ಆಯ್ಕೆ ಮಾಡುವ ಅತ್ಯಂತ ಮಹತ್ವ ಪೂರ್ಣವಾದ ಜವಾಬ್ದಾರಿ ಮತದಾರರ ಮೇಲಿದ್ದು, ಮತ ಎಂಬುವುದು ಒಂದು ಬ್ರಹ್ಮಾಸ್ತ್ರವಿದಂತೆ ಅದನ್ನು ಬಳಸುವ ಮೂಲಕ ಒಂದು ಒಳ್ಳೆಯ ಸರ್ಕಾರವನ್ನು ರಚನೆ ಮಾಡಲು ಕಾರಣೀಭೂತರಾಗಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಮತದಾರರಿಗೆ ವಿನಂತಿಸಿದರು.

ಲೋಕಸಭಾ ಕ್ಷೇತ್ರದ ಚುನಾವಣೆ ದಿನದಂದು ಕಲ್ಲೋಳಿ ಪಟ್ಟಣದ 101ನೇ ಮತ ಕೇಂದ್ರದಲ್ಲಿ ಕುಟುಂಬಸ್ಥರೊಂದಿಗೆ ಮತ ಚಲಾಯಿಸಿ ಅವರು ಮಾತನಾಡಿದರು.

ಜಗತ್ತಿನ ಬೇರೆ ಬೇರೆ ದೇಶಗಳ ಸುಮಾರು 20 ರಾಜಕೀಯ ಪಕ್ಷಗಳು ಈ ಚುನಾವಣೆಯ ಅಧ್ಯಯನ ಮಾಡಲಿಕ್ಕೆ ಭಾರತಕ್ಕೆ ಬಂದಿದ್ದಾರೆ ಇದು ಅತ್ಯಂತ ಗಮನಾರ್ಹ ಅಂಶವೆಂದು ಹೇಳಿದರು. ಕಳೆದ ಒಂದು ತಿಂಗಳುಗಳ ಕಾಲ ನಮ್ಮೆಲ್ಲ ಕಾರ್ಯಕರ್ತರ ಪರಿಶ್ರಮದ ಫಲವಾಗಿ ಬೆಳಗಾವಿ ಮತ್ತು ಚಿಕ್ಕೋಡಿ ಈ ಎರಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಹೆಚ್ಚು ಮತಗಳನ್ನು ಪಡೆಯುವ ಮೂಲಕ ನೀರಿಕ್ಷಿತ ಗೆಲುವನ್ನು ಸಾಧಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದರ ತಂದೆಯವರಾದ ಭೀಮಪ್ಪ ಕಡಾಡಿ, ಸಂಸದರ ಪತ್ನಿ ಸುಮಿತ್ರಾ ಕಡಾಡಿ, ಮಕ್ಕಳಾದ ಸತೀಶ ಕಡಾಡಿ (ಬಿಡಿಸಿಸಿ ಬ್ಯಾಂಕ ನಿರ್ದೇಶಕ), ಲಾವಣ್ಯ, ಪ್ರತಿಭಾ ಉಪಸ್ಥಿತರಿದ್ದರು.

Latest News

ಗಾರ್ಡನ್ ಅಭಿವೃದ್ದಿಗೆ  ರೂ.೨೩.೩೯ ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ

ಸಿಂದಗಿ; ಆಯಾ ವಾರ್ಡುಗಳು ಸಾರ್ವಜನಿಕರು, ವಯೋ ವೃದ್ಧರು ವಾಯು ವಿಹಾರಕ್ಕೆ ಅನುಕೂಲವಾಗಲೆಂದು ಪಟ್ಟಣದ ಎಲ್ಲ ಉದ್ಯಾನವನಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಪಟ್ಟಣದಲ್ಲಿ ಒಟ್ಟು ೭೨...

More Articles Like This

error: Content is protected !!
Join WhatsApp Group