ಮತ್ತೆ ಚೀನಾದ ೪೩ ಆ್ಯಪ್ ನಿಷೇಧಿಸಿದ ಕೇಂದ್ರ

0
2071

ಚೀನಾದ ೪೩ ಆ್ಯಪ್ ಗಳನ್ನು ನಿಷೇಧಿಸಿ ಕೇಂದ್ರ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಆದೇಶ ಹೊರಡಿಸಿದೆ.

ಈ ಆ್ಯಪ್ ಗಳು ಭಾರತದ ಸಾರ್ವಭೌಮತ್ವ ಹಾಗೂ ಸಮಗ್ರತೆ ಮತ್ತು ಭಾರತದ ಸುರಕ್ಷತೆಯ ಮೇಲೆ ಪ್ರಭಾವ ಬೀರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ ೬೯ ಎ ಪ್ರಕಾರ ಈ ನಿಷೇಧ ಹೇರಲಾಗಿದೆ ಎಂದು ಪ್ರಕಟಣೆಯೊಂದರಲ್ಲಿ ತಿಳಿಸಲಾಗಿದೆ.

ಈ ಮೊದಲು ಜೂನ್ ೨೯ ರಂದು ೫೯ ಆ್ಯಪ್ ಹಾಗೂ ಸೆಪ್ಟೆಂಬರ್ ೨ ರಂದು ೧೧೮ ಆ್ಯಪ್ ಗಳನ್ನು ಭಾರತದಲ್ಲಿ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ನೀಡಿತ್ತು.

ಭಾರತದ ವಿರುದ್ಧ ಕುತಂತ್ರ ನಡೆಸಿರುವ ಚೀನಾವನ್ನು ಆರ್ಥಿಕವಾಗಿ ಬಗ್ಗು ಬಡಿಯುವ ಕ್ರಮವಾಗಿ ಕೇಂದ್ರದ ಮೋದಿ ಸರ್ಕಾರವು ಚೀನಾದ ಆ್ಯಪ್ ಗಳನ್ನು ಭಾರತದಲ್ಲಿ ನಿಷೇಧಿಸಿದ್ದು ಇದರಿಂದ ಚೀನಾಕ್ಕೆ ಸಾವಿರಾರು ಕೋಟಿ ರೂ.ಗಳ ಹಾನಿಯಾಗಿದೆ ಎಂದು ಹೇಳಲಾಗಿದೆ.

ಮೋದಿಯವರ ಈ ನಡೆಯಿಂದಾಗಿ ಭಾರತೀಯರಲ್ಲಿಯೂ ಚೀನಾ ವಿರುದ್ಧ ಕ್ರಮ ಕೈಗೊಳ್ಳುವ ಯೋಚನೆ ಬಂದಿದ್ದು ಚೀನಾದಿಂದ ಆಮದಾಗುವ ವಸ್ತುಗಳ ಉಪಯೋಗವನ್ನು ಜನರು ಬಹಿಷ್ಕರಿಸುತ್ತಿದ್ದಾರೆ.