ಆರ್ಯವೈಶ್ಯ ಸಮಾಜದಿಂದ ಕನ್ನಿಕಾ ಪರಮೇಶ್ವರಿ ಜಯಂತ್ಯುತ್ಸವ : ಕುಂಕುಮಾರ್ಚನೆ,ಉಡಿ ತುಂಬುವ ಕಾರ್ಯಕ್ರಮ

Must Read

ಹುನಗುಂದ: ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮಾಜ ಬಾಂಧವರಿಂದ ಶುಕ್ರವಾರ ಕನ್ನಿಕಾ ಪರಮೇಶ್ವರಿ ಜಯಂತ್ಯುತ್ಸವವನ್ನು ಶ್ರದ್ಧಾ ಭಕ್ತಿಯಿಂದ ಕುಂಕುಮಾರ್ಚನೆ, ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಆಚರಿಸಲಾಯಿತು.

ಜಯಂತ್ಯುತ್ಸವ ನಿಮಿತ್ತ ದೇವಸ್ಥಾನದಲ್ಲಿ ತಳಿರು ತೋರಣ ಕಟ್ಟಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.ಬೆಳಗ್ಗೆ 5:00 ಗಂಟೆಯಿಂದ ದೇವಸ್ಥಾನದಲ್ಲಿ ವಿವಿಧ ಪೂಜಾ ಧಾರ್ಮಿಕ ಕೈಂಕರ್ಯ ಜರುಗಿದವು. ಬೆಳಗ್ಗೆ 6:00 ಗಂಟೆಗೆ ಕನ್ನಿಕಾ ಪರಮೇಶ್ವರಿ ಮೂರ್ತಿಗೆ ಅಲಂಕಾರ, ದೇವಿಯ ಅಷ್ಟೋತ್ತರ ಪಾರಾಯಣ, ಸಹಸ್ರನಾಮಾವಳಿ ಸಹಿತ ಕುಂಕುಮಾರ್ಚನೆ, ಪುಷ್ಪಾರ್ಚನೆ, ಮಂಗಳಾರತಿ, ಮಹಾ ಮಂಗಳಾರತಿ,ಮಂತ್ರ ಪುಷ್ಪ,ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.

ಇದೆ ವೇಳೆ ಜನಾದ್ರಿ ಕುಟುಂದವರು ಸಮಾಜದವರಿಗೆ ಕುಂಕುಮಾರ್ಚನೆ ಮಾಡಿದರು. ಹಾಗೂ ಡಾ. ಶಿವಶಂಕರ ಮುದಗಲ್ ಇವರಿಂದ 108 ಬಳೆಗಳನ್ನು ಸೇವೆ ಮಾಡಿದರು.

ಸಮಾಜದ ಪ್ರಮುಖರಾದ ಸತ್ಯನಾರಾಯಣ ಜನಾದ್ರಿ, ಮುತ್ತಣ್ಣ ಮುದಗಲ್, ಸಂಗಮೇಶ್ವರ ಓಬಳ್ಳೆಪ್ಪನವರ, ವಾಸು ಹಳ್ಳಿಕೇರಿ, ಭಕ್ತ ಪ್ರಹ್ಲಾದ ಜನಾದ್ರಿ, ವೆಂಕಟೇಶ ಜನಾದ್ರಿ, ರಾಜಶೇಖರ ಜನಾದ್ರಿ, ಗಜೇಂದ್ರ ಜನಾದ್ರಿ,ಶ್ರೀಕಾಂತ ಜನಾದ್ರಿ,ವಿನಾಯಕ ಜನಾದ್ರಿ,ಮಯೂರ ಜನಾದ್ರಿ,ವೀರೇಶ ಮುದಗಲ್ಲ ಸೇರಿದಂತೆ ಅನೇಕರು ಇದ್ದರು.

 

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group