ಬೆಂಗಳೂರು – ಹರಿದಾಸ ಮಿಲನ ಮತ್ತು ದಾಸೋಪಾಸನ, ಚಿಪ್ಪಗಿರಿ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗವು ೨೦೧೯ ಕೊರೋನದ ವೇಳೆಯಲ್ಲಿ ದೇವಸ್ಥಾನಕ್ಕೆ, ಭಜನೆಗೆ ಎಲ್ಲೂ ಹೋಗದ ಪರಿಸ್ಥಿತಿಯಲ್ಲಿ ಮನೆಯಲ್ಲಿಯೇ ಹಿರಿಯರಿಗೆ ಕಿರಿಯರಿಗೆ ಹೀಗೆ ಎಲ್ಲ ವಯೋಮಿತಿ ಜನರು ಮನೆಯಲ್ಲಿಯೇ ಕುಳಿತು ದೇವರ ಸ್ಮರಣೆ ಮಾಡಲು ಎರಡು ವೇದಿಕೆಯನ್ನು ಡಾ ಆರ್ ಪಿ ಕುಲಕರ್ಣಿ ಅವರು ಸ್ಥಾಪಿಸಿದರು.
ಅಂದಿನಿಂದ ನಮ್ಮ ಸಮೂಹದಲ್ಲಿ “ನಿತ್ಯ ಗಾಯನ ಸೇವೆ”, ವಾರದ ನೇರ ಪ್ರಸಾರ ಗಾಯನ ಸೇವೆ, ವಿಶೇಷ ದಾಸರ ಮತ್ತು ಯತಿಗಳ “ಗಾಯನ ಸ್ಪರ್ಧೆ”, ತಿಂಗಳಿಗೆ ಎರಡು ಬಾರಿ “ಪಟ್ ಅಂತ ಹೇಳ್ರಿ” ಇನ್ನು ವಿಶೇಷವಾಗಿ ಶ್ರಾವಣಮಾಸದಲ್ಲಿ “ಶ್ರಾವಣೀಯ ಶ್ರಾವಣೋಪಾಸನೆ”, ಪಕ್ಷಮಾಸದಲ್ಲಿ ಪಿತೃಗಳ ಚಿಂತನೆ, ಹಲವಾರು ವೈವಿದ್ಯಮಯ ಸ್ಪರ್ಧೆ, ಚಿಂತನೆ ನಡೆಸುತ್ತಾ ಅಂತರ್ಜಾಲದಲ್ಲಿ ಹರಿನಾಮ ಘೋಷ ಮೊಳಗಿಸುತ್ತಿದೆ. ಒಟ್ಟಾರೆ ೧೧ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.
ಮೂರನೇ ವಾರ್ಷಿಕೋತ್ಸವ
ಇದೆ ಮೇ ೨೬/೦೫/೨೪ ಭಾನುವಾರ, ಪೇಜಾವರ ವಿದ್ಯಾಪೀಠ, ಕತ್ರಿಗುಪ್ಪೆ ಯಲ್ಲಿ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು, ಪೇಜಾವರ ಶ್ರೀ ಅಧೋಕ್ಷಜ ಮಠ, ಉಡುಪಿ.ಇವರ ದಿವ್ಯ ಉಪಸ್ಥಿತಿ ಹಾಗೂ ಮುಖ್ಯ ಅತಿಥಿಗಳು ವಿದ್ವಾನ್ ಡಾ|| ಸತ್ಯಧ್ಯಾನಾಚಾರ್ಯ ಕಟ್ಟಿ, ಪ್ರಾಂಶುಪಾಲರು, ಶ್ರೀ ಜಯತೀರ್ಥ ವಿದ್ಯಾಪೀಠ, ಬೆಂಗಳೂರು ಇವರ ಉಪಸ್ಥಿತಿಯಲ್ಲಿ ಮೂರನೇ ವಾರ್ಷಿಕೋತ್ಸವ ನಡೆಯಲಿದೆ.
ಡಾ|| ಹೆಚ್. ಸತ್ಯನಾರಾಯಣಾಚಾರ್ಯ, ಪ್ರಾಂಶುಪಾಲರು, ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರು, ಹೆಚ್.ವಿ.ಗೌತಮ, ವಿ.ಕೆ. ಹರಿದಾಸ ಅತಿಥಿಗಳು. ಬೆಳಗ್ಗೆ ೮ ಗಂಟೆಗೆ ಶೋಭಾಯಾತ್ರೆ ಯಿಂದ ಪ್ರಾರಂಭವಾಗಿ ಶ್ರೀಗಳ ಅನುಗ್ರಹ ಸಂದೇಶ, ಪ್ರಶಸ್ತಿ ಪ್ರದಾನ, ಪ್ರವಚನ, ಭರತ ನಾಟ್ಯ, ಸಂಗೀತ ಸೇವೆ ವಿವಿಧ ಕಾರ್ಯಕ್ರಮ ಜರುಗಲಿವೆ.
ಶ್ರೀ ಶ್ರೀಪಾದ ಸಿಂಗನಮಲ್ಲಿ, ಪಂಡಿತ ಶ್ರೀ ಪದ್ಮನಾಭ ವರಖೇಡಿ, ಸುರೇಶ ಕಲ್ಲೂರ, ಡಾ ಆರ್. ಪಿ. ಕುಲಕರ್ಣಿ, ಶ್ರೀಮತಿ ರಾಧಿಕಾ ಜೋಶಿ, ಶ್ರೀಮತಿ ವಾರುಣಿ ಅನಿಲ, ಶ್ರೀಮತಿ ಪೂರ್ಣಿಮಾ ಕುಲಕರ್ಣಿ, ಶ್ರೀಮತಿ ಪ್ರಿಯಾ ಪ್ರಾಣೇಶ ಹರಿದಾಸ ಹಾಗೂ ಸಮೂಹದ ಸದಸ್ಯರಿಂದ ಸ್ವಾಗತ ಕೋರಿದ್ದಾರೆ.