HomeUncategorizedಸಾರ್ಥಕ ಬದುಕಿನ ಗುಟ್ಟು ಬುದ್ಧನ ಉಪದೇಶಗಳು

ಸಾರ್ಥಕ ಬದುಕಿನ ಗುಟ್ಟು ಬುದ್ಧನ ಉಪದೇಶಗಳು

ಬೌದ್ಧಧರ್ಮವು ಭಾರತದಲ್ಲಿ 2,600 ವರ್ಷಗಳ ಹಿಂದೆ ಪ್ರಾರಂಭವಾಯಿತು, ಅದು ವ್ಯಕ್ತಿಯನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿರುವ ಜೀವನ ವಿಧಾನವಾಗಿದೆ.

ಬದಲಾದ ಜೀವನ ಶೈಲಿ, ಅಶಾಂತಿ, ಆತುರ, ಅತಿಯಾದ ಸಿಟ್ಟು, ಅತಿಯಾದ ನಂಬಿಕೆ,ಎಲ್ಲವೂ ಈಗಲೆ ಬೇಕು,ನಾನು ಅಂದುಕೊಂಡ ಹಾಗೆ ಆಗಬೇಕು….. ಅಬ್ಬಬ್ಬಾ ನಿಜವಾಗಲೂ ವಾಸ್ತವ ಪರಿಸ್ಥಿತಿಗೆ ಬುದ್ಧನ ಉಪದೇಶದ ಅಗತ್ಯ ಇದೆ.”

ಆಸೆಯೆ ದುಃಖಕ್ಕೆ ಮೂಲ” ಯಾವಾಗಲೂ ನಾವು ಅತಿಯಾದ ಆಸೆ ಮಾಡಬಾರದು, ನಮ್ಮ ಶ್ರಮದ ಮೇಲೆ ನಮ್ಮ ಕನಸುಗಳು ಸಾಕರಾಗೊಳ್ಳುತ್ತವೆ. ಇತ್ತೀಚಿನ ದಿನಗಳಲ್ಲಿ ಎಲ್ಲವೂ ಬೇಕು, ಅದು ಈಗಲೇ ಬೇಕು, ಹೀಗೆ ಎಲ್ಲ ಮೋಜು,ಮಸ್ತಿ, ಐಶ್ವರ್ಯ, ಹಣ, ಹೆಣ್ಣಿಗೂ… ಕೂಡ ಬಿಡ್ತಾ ಇಲ್ಲ. ಓದದೇ ಉತ್ತಮ ಫಲಿತಾಂಶದ ನಿರೀಕ್ಷೆ.. ಬರದಿದ್ದರೆ ಆತ್ಮ ಹತ್ಯೆ,ಸೋಮಾರಿತನ.ಆದರೂ ಶ್ರೀಮಂತನಾಗಲು ಹಣ ಗಳಿಸುವ ಸುಲಭ ಮಾರ್ಗದ ಮೂಲಕ ಕೊಲೆ, ಸುಲಿಗೆ, ಹಾಡುಹಗಲೇ ಕಳ್ಳತನ.ಕಂಡ ಕಂಡ ಹೆಣ್ಣು ಮಕ್ಕಳಿಗೆ ಪ್ರೀತಿ ಪ್ರೇಮ ಅಂತಹ ಅರ್ಹತೆ ಇಲ್ಲದಿದ್ದರೂ ಪ್ರೀತಿಸು ಅಂತ ಪೀಡಿಸುವ ಪೀಡೆಗಳು, ನಿರಾಕರಿಸಿದ್ದರೆ ನಿರ್ಧಾಕ್ಷಿಣವಾಗಿ ಕೊಲೆಗೈಯುವ ಮನೋವೃತ್ತಿ…
ಹೀಗೆ ಮಾನವೀಯ ಮೌಲ್ಯ ಇಲ್ಲದ ಜೀವನ ಶೈಲಿ ಹೆಚ್ಚುತ್ತಿದೆ.

ದಿನ ನಿತ್ಯದ ಜೀವನದಲ್ಲಿ ಮನೆಯಿಂದ… ಉನ್ನತ ಶಿಕ್ಷಣ ಹಾಗೂ ಪಾಲಕರಿಂದ…… ಶಿಕ್ಷಕರು ಉಪನ್ಯಾಸಕರು ಧರ್ಮಗುರುಗಳ ವರೆಗೂ ಬುದ್ಧ ವಾಣಿಯಲ್ಲಿ ಇರುವ ನೈತಿಕತೆ, ಚಿಂತನೆ, ಶಾಂತಿ, ಸಮಾಧಾನ ಸರಳತೆ, ಶಿಸ್ತು,ದುಡಿಮೆ,ಮನಸಿನ ನಿಯಂತ್ರಣ ಹೀಗೆ ಇವೆಲ್ಲ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಜೀವನ ರೂಪಿಸಿಕೊಂಡು ಬದುಕುವುದನ್ನು ಕಲಿಸಬೇಕು.

ನಮ್ಮ ಬದುಕು, ನಮ್ಮ ಯೋಚನೆ ಇವು ನಮ್ಮ ವ್ಯಕ್ತಿತ್ವ ಕ್ಕೆ ಕನ್ನಡಿ ಹಿಡಿದ ಹಾಗೆ. ಶಾಂತಿ ನೆಮ್ಮದಿ ನಮ್ಮಲ್ಲಿಯೇ ಇವೆ, ನಮ್ಮಲ್ಲಿಯೇ ಇರುವ ದ್ವೇಷ, ಅಸೂಯೆ, ಸೋಮಾರಿತನ ನಮಿಂದ ನಾವೇ ತೆಗೆದು ಹಾಕುವುದು ಎಂದು ಬುದ್ಧ ಉಪದೇಶ ಹೇಳುತ್ತದೆ.
29 ನೇ ವಯಸ್ಸಿನಲ್ಲಿ, ಗೌತಮನು ಮನೆಯನ್ನು ತೊರೆದನು ಮತ್ತು ತನ್ನ ಸಂಪತ್ತಿನ ಜೀವನವನ್ನು ತಿರಸ್ಕರಿಸಿದನು ಮತ್ತು ವೈರಾಗ್ಯದ ಜೀವನಶೈಲಿಯನ್ನು ಸ್ವೀಕರಿಸಿದನು, ಅಥವಾ ತೀವ್ರವಾದ ಸ್ವಯಂ-ಶಿಸ್ತು.ಸತತ 49 ದಿನಗಳ ಧ್ಯಾನದ ನಂತರ, ಗೌತಮನು ಬಿಹಾರದ ಬೋಧಗಯಾ ಎಂಬ ಹಳ್ಳಿಯ ಮರವೊಂದರ ಕೆಳಗೆ ಬೋಧಿಗೆ (ಜ್ಞಾನೋದಯ) ಪ್ರಾಪ್ತನಾದನು. ದುಃಖ (ದುಃಖ) ಪ್ರಪಂಚದ ಸಾರವಾಗಿದೆ.
ಪ್ರತಿಯೊಂದು ದುಃಖಕ್ಕೂ ಒಂದು ಕಾರಣವಿದೆ – ಸಮುದ್ಯ .
ಸಂಕಟವನ್ನು ನೀಗಿಸಬಹುದು – ನಿರೋಧ .
ಅತ್ತಂಗ ಮಗ್ಗ (ಎಂಟು ಪಟ್ಟು ಮಾರ್ಗ) ಅನುಸರಿಸುವ ಮೂಲಕ ಇದನ್ನು ಸಾಧಿಸಬಹುದು.
*ಎಂಟು ಪಟ್ಟು ಮಾರ್ಗಗಳು*: ಇದು ಜ್ಞಾನ, ನಡವಳಿಕೆ ಮತ್ತು ಧ್ಯಾನ ಅಭ್ಯಾಸಗಳಿಗೆ ಸಂಬಂಧಿಸಿದ ವಿವಿಧ ಅಂತರ್ಸಂಪರ್ಕಿತ ಚಟುವಟಿಕೆಗಳನ್ನು ಒಳಗೊಂಡಿದೆ.
ಸರಿಯಾದ ನೋಟ
ಸರಿಯಾದ ಉದ್ದೇಶ
ಸರಿಯಾದ ಮಾತು
ಸರಿಯಾದ ಕ್ರಮ
ಸರಿಯಾದ ಜೀವನೋಪಾಯ
ಸರಿಯಾದ ಸಾವಧಾನತೆ
ಸರಿಯಾದ ಪ್ರಯತ್ನ
ಸರಿಯಾದ ಏಕಾಗ್ರತೆ
ಇಂತಹ ಸರಳ ವಿಚಾರಗಳನ್ನು ಬೋಧಿಸಿದ ಗೌತಮ ಬುದ್ಧ ನಮಗೆಲ್ಲ ಆದರ್ಶ ಇಂತಹ ಆದರ್ಶ ತತ್ವಗಳನ್ನು ನಾವು ಇಂದಿನ ಪೀಳಿಗೆಗೆ ತಿಳಿಸುವ ಮೂಲಕ ನಾವು ಕೂಡ ಆ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಜೀವನ ನಡೆಸಿದಾಗ ಮಾತ್ರ ನಾವು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬಹುದಾಗಿದೆ. ಜೊತೆಗೆ ಸಮಾಜದ ಕೆಟ್ಟ ಆಲೋಚನೆ ಉಳ್ಳ ಮನಸುಗಳ ಕಶ್ಮಲಗಳನ್ನು ತೊಡೆದು ಹಾಕಬಹುದಾಗಿದೆ.

ನಂದಿನಿ ಸನಬಾಳ್, ಶಿಕ್ಷಕಿ
ಕಲಬುರ್ಗಿ

RELATED ARTICLES

Most Popular

error: Content is protected !!
Join WhatsApp Group