ಸಿಂದಗಿ: ವಿಶ್ವ ತಂಬಾಕು ದಿನಾಚರಣಿಯ ಅಂಗವಾಗಿ ಜೇರಟಗಿಯಲ್ಲಿ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆ ಮಕ್ಕಳಿಂದ ಜಾಗೃತಿ ಜಾಥಾ ಹಮ್ಮಿಕೊಂಡಿದ್ದು ಶಾಲೆಯ 10ನೇ ತರಗತಿಯ ಮಕ್ಕಳಿಂದ ಬೀದಿನಾಟಕ ಮೂಲಕ ಜನರಲ್ಲಿ ತುಂಬಾಕು ಹಾಗೂ ಸಿಗರೇಟು ಸೇದುವುದರಿಂದ ಶ್ವಾಸಕೋಶ ದುರ್ಬಲವಾಗುವುದು, ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಕುಟುಂಬದ ಮುಖ್ಯಸ್ಥ ಸಾವಿನಿಂದ ಕುಟುಂಬ ಸದಸ್ಯರು ಅನಾಥರಾಗುವರು ಎಂಬ ಸಂದೇಶವನ್ನು ಸಾರಿದರು.
ಇನ್ನು ನಿಕೋಟಿನ್ ರಾಸಾಯನಿಕ ಪದಾರ್ಥ ಸುಟ್ಟ ಗಾಜು ಮಿಶ್ರಿತ ಗುಟಕಾ ಸೇವನೆಯಿಂದ ನರದೌರ್ಬಲ್ಯ, ಮರೆವು ಹೆಚ್ಚಾಗುವುದು ಅದನ್ನು ತಡೆಗಟ್ಟಲು ಪಾಲಕರು, ಶಿಕ್ಷಕರು ಹಿರಿಯರು ಮಕ್ಕಳಲ್ಲಿ ಅರಿವು ಮೂಡಿಸಿ ಈ ದುಶ್ಚಟಗಳಿಂದ ದೂರವಾಗಲೂ ಮಾರ್ಗದರ್ಶನ ನೀಡಬೇಕೆಂದು ಕನ್ನಡ ಹಾಗೂ ಇಂಗ್ಲೀಷನಲ್ಲಿ ಭಾಷೆಯಲ್ಲಿ ಜಾನ್ವಿ , ಸೌಮ್ಯ, ಖಾಜಿಯಾ ವಿದ್ಯಾರ್ಥಿನಿಯರು ಭಾಷಣ ಮಾಡುವ ಮೂಲಕ ತಿಳಿವಳಿಕೆ ಮೂಡಿಸಿದರು .
ಅನುಶ್ರೀ, ಕಾರ್ಯಕ್ರಮ ನಿರೂಪಿಸಿದಳು ಸಹ ಶಿಕ್ಷಕರಾದ ಅತ್ತಾವುಲ್ಲಾ, ಸಂತೋಷ, ಚಿದಾನಂದ, ಪದ್ಮಾ, ಅನುಷಾ ಸಹ ಶಿಕ್ಷಕರು ಜಾಗೃತಿ ಜಾಥಾದಲ್ಲಿ ಭಾಗವಹಿಸಿದರು. ಪ್ರಾಂಶುಪಾರಾದ ಶಾಲಿನಿ ಮತ್ತು ಅಧ್ಯಕ್ಷ ವಿಠ್ಠಲ ಜಿ. ಕೊಳೂರು ಶ್ಲಾಘಿಸಿದರು.