ನಿಮ್ಮ ತಾತ ಮುತ್ತಾತ ಬಂದರೂ ಶ್ರೀ ರಾಮನ ಹಾಡು ನಿಲ್ಲಿಸೋದಕ್ಕೆ ಆಗಲ್ಲ – ಶಾಸಕ ಶರಣು ಸಲಗರ

Must Read

ಬೀದರ – ಬಸವಕಲ್ಯಾಣದ ಗುರುನಾನಕ ಕಾಲೇಜಿನಲ್ಲಿ ಶ್ರೀ ರಾಮನ ಹಾಡು ಹಾಡಿದ ವಿದ್ಯಾರ್ಥಿಗಳ ಮೇಲೆ ಕೇಸು ದಾಖಲಿಸಿದ ರಾಜ್ಯ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದ ಶಾಸಕ ಶರಣು ಸಲಗರ, ನಿಮ್ಮ ತಾತ ಮುತ್ತಾತ ಬಂದರೂ ರಾಮನ ಹಾಡನ್ನು ನಿಲ್ಲಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಗುರುನಾನಕ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಶ್ರೀ ರಾಮನ ಹಾಡು ಹಾಡಿದ್ದಕ್ಕೆ ಅವರ ಮೇಲೆ ಕೇಸು ದಾಖಲಿಸಿದ್ದು ಹಾಗೂ ಸ್ಥಳೀಯ ಶಾಸಕ ರಹೀಮ್ ಖಾನ್ ಹಾಗೂ ಅವರ ಪುತ್ರ ರಷೀದ್ ಸೇರಿಕೊಂಡು ಗೂಂಡಾಗಿರಿ ಮಾಡಿದ್ದಾರೆಂದು ಆರೋಪಿಸಿ ಬಹಿರಂಗ ಸಭೆಯಲ್ಲಿ ಅವರು ಮಾತನಾಡುತ್ತ, ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಈ ಕೂಡಲೇ ಕೇಸುಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ನಾಳೆಯಿಂದ ಪ್ರತಿ ಶನಿವಾರ ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬರುವಂತೆ ವಿದ್ಯಾರ್ಥಿಗಳಿಗೆ ಕರೆ ಕೊಟ್ಟ ಅವರು, ಹಿಂದೂಗಳನ್ನು ವ್ಯವಸ್ಥಿತವಾಗಿ ತುಳಿಯುತ್ತಿರುವ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಹೇಳಿದರು.

ವರದಿ : ನಂದಕುಮಾರ ಕರಂಜೆ, ಬೀದರ

Latest News

ವೈ ಬಿ ಕಡಕೋಳ ವರಿಗೆ ಗೌರವ ಸನ್ಮಾನ

ಸವದತ್ತಿ : ತಾಲೂಕಿನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಲ್ಲಿಸಿದ ತಲ್ಲೂರು ರಾಯನಗೌಡರು, ಸಮಗ್ರ...

More Articles Like This

error: Content is protected !!
Join WhatsApp Group