spot_img
spot_img

ಸಾಮಾಜಿಕ ನಾಟಕದ ಹೀರೋ ಕುರುಕ್ಷೇತ್ರದ ದುರ್ಯೋಧನ ಬಿದರೆ ರವಿ

Must Read

spot_img
- Advertisement -

ಅಂದು ಭಾನುವಾರ ರಜಾ ದಿನ. ಮನೆಯಲ್ಲಿ ಭರ್ಜರಿ ಬಾಡೂಟ ಉಂಡಿದ್ದು ಅರಗಿಸಿಕೊಳ್ಳಲು ತಿರುಗಾಡಿ ಬರಲು ಹೊರಟೆ. ಕಾಲು ಕಲಾಭವನದತ್ತ ನಡೆದವು. ಅಲ್ಲಿ ರತ್ನ ಮಾಂಗಲ್ಯ ನಾಟಕ ನಡೆದಿತ್ತು. ಕೆಳಗಿನ ಫ್ಲೋರ್ ಅರ್ಧ ತುಂಬಿತ್ತು. ಐದಾರು ಗಂಟೆಯ ಈ ಸಾಂಸಾರಿಕ ನಾಟಕದಲ್ಲಿ ಬದುಕಿನ ಎಲ್ಲಾ ಸಾರ-ತಾತ್ಸರಗಳು ಅಡಗಿದ್ದವು.

ನಾನು ವಿದ್ಯಾರ್ಥಿ ದಿನಗಳಲ್ಲಿ ಕಾಲೇಜು ಓದುವಾಗ ಇದೇ ಕಲಾ ಭವನ ಜಾಗ ಖಾಲಿ ಮೈದಾನ. ಇಲ್ಲಿ ಉತ್ತರ ಕರ್ನಾಟಕದಿಂದ ಹಾಸನ ಜಾತ್ರೆಗೆ ಬರುತ್ತಿದ್ದ ನಾಟಕ ಕಂಪನಿಗಳು ಪ್ರದರ್ಶಿಸುತ್ತಿದ್ದ ಮುದುಕನ ಮದುವೆ, ಕೊಂಡು ತಂದ ಗಂಡ ಇವೇ ಮಾದರಿಯ ನಾಟಕ ರತ್ನ ಮಾಂಗಲ್ಯದಲ್ಲೂ ಸಾಕಷ್ಟು ದ್ವಂದ್ವಾರ್ಥದ ಹಾಸ್ಯರಸ ನಳಪಾಕ, ತಾಯಿ ಪ್ರೀತಿ, ಸೊಸೆಯ ಹಿಕ್‍ಮತ್ ಸಕ್ಕತ್ತಾಗೇ ಇತ್ತು. ಸಿನಿಮಾ ಹಾಡಿಗೆ ರಂಗದ ಮೇಲೆ ನಮ್ಮ ಹಳ್ಳಿ ಹೈದ ವೃತ್ತಿ ಕಲಾವಿದೆ ಜೊತೆಗೆ ತಕ್ಕಮಟ್ಟಿಗೆ ಡ್ಯಾನ್ಸ್ಗೆ ಸ್ಟೆಪ್ ಹಾಕಿದ್ದರು. ನಾಟಕ ಸಕಲಾಕಲಾ ಮಸಾಲೆ ಮಿಕ್ಸ್ ನಾಟಿ ಕೋಳಿ ಸಾರು ಇದ್ದಂತೆ ಇತ್ತು.

ನಾಟಕ ಮುಗಿದಾಗ ಸಮಯ ಒಂಬತ್ತು. ಅಷ್ಟೊತ್ತಿಗೆ ಉಂಡಿದ್ದು ಅರಗಿತ್ತು. ನಾಟಕದ ಡ್ಯಾನ್ಸ್ ಹೀರೋ ರವಿಕುಮಾರ್ ಬಿ.ಎ. ಬಿದರೆ ಗ್ರಾಮದವರು. ತಂದೆ ಅರಸೇಗೌಡರು. ತಾಯಿ ಹಿಂಡ್ಲಮ್ಮ. ಈ ಬಿದರೆ ಗ್ರಾಮ ಚನ್ನರಾಯಪಟ್ಟಣ ತಾ. ಬಾಗೂರು ಹೋಬಳಿಗೆ ಸೇರಿದೆ. ‘ರವಿಯವರೇ, ನಿಮಗೇಕೆ ಈ ನಾಟಕದ ಚಪಲ ಅಂಟಿಕೊಂಡಿತು.? ಪ್ರಶ್ನೆ ಕೇಳಿ ತಲೆ ಎತ್ತಿ ಆಕಾಶ ನೋಡಿದೆ.

- Advertisement -

ನೋಡಿ ಅನಂತರಾಜು ಅವರೇ, ನಾನು ರಂಗಭೂಮಿಗೆ ಬರಲು ನನ್ನ ಸೋದರಮಾವ ಪದ್ಮರಾಜ್ ಪ್ರೇರಕರು. ಊರಿನಲ್ಲಿ ಶನಿದೇವರ ಪಾತ್ರ ದುರ್ಯೋಧನ ರಾವಣನಾಗಿ ಮಿಂಚುತ್ತಿದ್ದರು. ನನ್ನ ಪ್ರೈಮರಿ ವಿದ್ಯೆ ಬಿದರೆನಲ್ಲಿ. ಪಿಯುಸಿಗೆ ಎಜುಕೇಶನ್ ಮಟಾಷ್. ಹೆಚ್‍ಪಿಎಸ್ ನಿಂದ ಹೈಸ್ಕೂಲ್ ತನಕ ಏಕಪಾತ್ರಾಭಿನಯ ಮಿಮಿಕ್ರಿ ಮಾಡುತ್ತಿದ್ದೆ. ಹೀಗಾಗಿ ನನಗೆ ಸ್ಟೇಜ್ ಫಿಯರ್ ಇಲ್ಲ..ಕಾಲರ್ ನೀವಿಕೊಂಡರು. ಊರಿನ ಗ್ರಾಮ ದೇವತೆ ಉಚ್ಚಮ್ಮದೇವಿ ಜಾತ್ರೆಗೆ ಮಿತ್ರರಾದ ದಿನೇಶಕುಮಾರ್ ಲೋಕೇಶ್ ನಾವು ಸೇರಿ ಪ್ರೇಮ ತ್ಯಾಗ, ಗೌರಿ ಗೆದ್ದಳು ಮೂರು ಗಂಟೆಯ ನಾಟಕ ಪ್ರದರ್ಶಿಸಿದೆವು.

ಹಾಸನದ ಕಲಾ ಭವನದಲ್ಲಿ ತೇಜೂರು ಶಕುನಯ್ಯನವರ ನಿರ್ದೇಶನದಲ್ಲಿ ಕುರುಕ್ಷೇತ್ರ ನಾಟಕದಲ್ಲಿ ಪ್ರಥಮ ಬಾರಿಗೆ ದುರ್ಯೋಧನ ಪಾತ್ರ ನಿರ್ವಹಿಸಿದೆ. ಈವರೆಗೆ 25 ಪ್ರಯೋಗಗಳಲ್ಲಿ ಗದೆ ತಿರುಗಿಸಿದ್ದೇನೆ ಎಂದು ಮೀಸೆ ತಿರುವಿದರು. ಮೈಸೂರು ದಸರಾದಲ್ಲಿ ಒಮ್ಮೆ ಬಿಜಾಪುರ ಜಿಲ್ಲೆ ಮುದ್ದೆಬಿಹಾಳ ತಾ. ಬಸರಕೊಡು ಗಾಮದ ಪವಾಡ ಶ್ರೀ ಬಸವೇಶ್ವರ ಜಾತ್ರೆಗೆ ಹಾಸನ ಜಿಲ್ಲೆಯಿಂದ ತಂಡ ಹೋಗಿ ಕುರುಕ್ಷೇತ್ರ ಪ್ರದರ್ಶಿಸಿ ಜನಮೆಚ್ಚುಗೆ ಪಡೆದಿದ್ದನ್ನು ಸ್ಮರಿಸಿದರು. ಓನ್ಲಿ ದುರ್ಯೋದನ ಪಾತ್ರ ಅಷ್ಟೆಯೇ..? ಕೆದಕಿದೆ. ರಾಮಾಯಣದಲ್ಲಿ ಒಂದು ಬಾರಿ ದಶರಥನ ಮಂತ್ರಿ ಸುಮಂತ್ರನ ಪಾತ್ರ ಮಾಡಿದ್ದೆ. ಅದು ಚಿಕ್ಕದು ಎಂದರು.

ಕಳೆದ 2 ವರ್ಷಗಳಿಂದ ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಅಧ್ಯಕ್ಷರು. ಅಷ್ಟೊತ್ತಿಗೆ ಕಾರ್ಯದರ್ಶಿ ರಮೇಶ್ ಅಧ್ಯಕ್ಷರನ್ನು ಹುಡುಕಿಬಂದರು. ಅನಂತು, ನೆಕ್ಸ್ಟ್ ನಂದೂ ರಂಗಮಾಹಿತಿ ಕೊಡುತ್ತೇನೆ. ಬರೆಯುವಿರಂತೆ, ಸದ್ಯದಲ್ಲೇ ಸಂಘದ ವಾರ್ಷಿಕ ಸಭೆ ಇದೆ ಬನ್ನಿ ಎಂದರು. ಆಗಲಿ ಬರುತ್ತೇನೆ ಎಂದು ಮನೆಗೆ ಬಂದೆ.

- Advertisement -

ಗೊರೂರು ಅನಂತರಾಜು, ಹಾಸನ.
ಮೊ: 9449462879
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೇಶ್ವರ ದೇವಸ್ಥಾನ ರಸ್ತೆ, 3ನೇ ಕ್ರಾಸ್, ಹಾಸನ.

- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group