spot_img
spot_img

ಮಹಿಳಾ ಕಾಲೇಜಿನಲ್ಲಿ ಪಾಲಕರ ಸಭೆ

Must Read

- Advertisement -

ಬೆಳಗಾವಿ : ಇದೇ ದಿ. 10 ರಂದು ಬೆಳಗಾವಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಐ.ಕ್ಯೂ.ಎ.ಸಿ ಘಟಕದ ಸಹಯೋಗದಲ್ಲಿ “ಪಾಲಕರ ಸಭೆ “ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಆರ್.ಎಸ್. ಮಾಂಗಳೇಕರ ಅವರು ವಹಿಸಿ,ಕಾಲೇಜಿನ ಸೌಲಭ್ಯಗಳ ಕುರಿತು ಹೇಳಿ, ಇರುವ ಸೌಲಭ್ಯಗಳಲ್ಲಿಯೇ ಶ್ರಮವಹಿಸಿ ಅಧ್ಯಯನ ಮಾಡಿ ಪಾಲಕರ ಕನಸನ್ನು ಮಕ್ಕಳು ನನಸಾಗಿಸಬೇಕೆಂದು ತಿಳಿಸಿದರು.

ವಾಣಿಜ್ಯ ಶಾಸ್ತ್ರ ಸಹ ಪ್ರಾಧ್ಯಾಪಕರಾದ ಡಾ. ಜಯಶೀಲಾ .ಜಿ ಮಾತನಾಡಿ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಹಾಗೂ ಉದ್ಯೋಗ ಮಾಡಲು ಅವಕಾಶ ಕಲ್ಪಿಸಿಕೊಟ್ಟು ಸಶಕ್ತರನ್ನಾಗಿ ಮಾಡುವುದು ಪಾಲಕರ ಜವಾಬ್ದಾರಿಯುತ ಕರ್ತವ್ಯವಾಗಿದೆ,ಎಂದು ಹೇಳಿದರು.

- Advertisement -

ಡಾ .ಬಿ.ಎಸ್.ಗಂಗನಳ್ಳಿ ಕನ್ನಡ ಸಹಾಯಕ ಪ್ರಾಧ್ಯಾಪಕರು, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಜ್ಯೋತಿ ಯಮಕನಮರಡಿ ಆಂಗ್ಲ ಭಾಷಾ ಸಹ ಪ್ರಾಧ್ಯಾಪಕರು ಸ್ವಾಗತಿಸಿದರು.ಪಾಲಕರ ಪರಿಚಯವನ್ನು ಡಾ. ವಿಜಯಲಕ್ಷ್ಮಿ ಕಲಪತ್ರಿ ಮತ್ತು ಈರಮ್ಮ ಪತ್ರಾವಳಿ ಇವರುಗಳು ಮಾಡಿದರು.ರೂಪಾ ಬಾಡಗಿ ಪ್ರಾರ್ಥನೆ ಹಾಡಿದರು.

ಪಾಲಕರಾದ ಜಾವೀದ ನೇಗಿನಾಳ ಮಾತನಾಡಿ, ನಮ್ಮ ಹೆಣ್ಣು ಮಕ್ಕಳಿಗೆ ಉನ್ನತ ವ್ಯಾಸಂಗ ಮಾಡಿಸುತ್ತೇವೆ ಮತ್ತು ಅವರಿಗೆ ಉದ್ಯೋಗ ಮಾಡಲು ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳಿದರು.  ಮಹೇಶ ಜಿಲ್ಲಾ ಪಂಚಾಯಿತಿ, ಕಚೇರಿ ವ್ಯವಸ್ಥಾಪಕರು, ಮಾತನಾಡಿದರು ಜುಂಜಪ್ಪ ಶೀಗಿಹಳ್ಳಿ ( ಪಾಲಕರು) ಡಾ. ಪ್ರವೀಣ್ ಕೊರಬು( ಐಕ್ಯೂಎಸಿ ಸಂಯೋಜಕರು) ವೇದಿಕೆ ಮೇಲೆ ಉಪಸ್ಥಿತರಿದ್ದರು.

ಶ್ರೀಮತಿ. ಮಧು ಮಾಲಿನಿ,ಡಾ. ರೇಶ್ಮಾ ಬದಲಿಗೆ  ಡಾ. ವಿಜಯಲಕ್ಷ್ಮಿ ಕಲಪತ್ರಿ, ಪ್ರಕಾಶ ಮಬನೂರ ಕಾರ್ಯಕ್ರಮದ ಸಂಯೋಜಕರಾಗಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.       ಕಾರ್ಯಕ್ರಮದ ನಿರೂಪಣೆಯನ್ನು ಕು. ತಬಸುಮ್ ನೇಗಿನಾಳ ಮಾಡಿದರು, ವಂದನಾರ್ಪಣೆಯನ್ನು ಶ್ರೀಮತಿ ಸವಿತಾ ಚೌಗಲಾ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕರು ಮಾಡಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಕಾಲೇಜಿನ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ರೇಂಜರ್ಸ್ ತಂಡದವರು ಮಾಡಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು. ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group