spot_img
spot_img

ಕಣಚೂರು ಆಯುರ್ವೇದ ಆಸ್ಪತ್ರೆ – ಉಚಿತ ಚಿಕಿತ್ಸಾ ಶಿಬಿರ

Must Read

spot_img
- Advertisement -

ದಿನಾಂಕ 15-6-24 ರಂದು ಕನ್ಯಾನದ ಭಾರತ ಸೇವಾಶ್ರಮದಲ್ಲಿ ಕಣಚೂರು ಆಯುರ್ವೇದ ಆಸ್ಪತ್ರೆಯ ವತಿಯಿಂದ ಉಚಿತ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಅರ್ಹ ರೋಗಿಗಳಿಗೆ ವಾಕರ್ ಗಳನ್ನು ವಿತರಿಸಲಾಯಿತು.

ಸಂಸ್ಥೆಯ ಮುಖ್ಯ ವೈದ್ಯಕೀಯ ನಿರ್ದೇಶಕ ಡಾ ಸುರೇಶ ನೆಗಳಗುಳಿಯವರು ಈ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಅವರು ಮಾತನಾಡುತ್ತಾ ನಾವು ಯಾವುದೇ ಫಲಾಪೇಕ್ಷೆಯಿಲ್ಲದೆ ಅಗತ್ಯ ಉಳ್ಳ ಪ್ರದೇಶಗಳಲ್ಲಿ ಉಚಿತ ಚಿಕಿತ್ಸಾ ಶಿಬಿರ ನಡೆಸುತ್ತಲೇ ಇದ್ದೇವೆ. ಇದರ ಸದುಪಯೋಗವಾದರೆ ನಾವು ಧನ್ಯರು ಎನ್ನುತ್ತಾ ಫಲಾನುಭವಿಗಳಿಗೆ ಊರುಗೋಲು ಹಸ್ತಾಂತರಿಸಿದರು.

- Advertisement -

ಆಶ್ರಮದ ಮುಖ್ಯಸ್ಥ ಈಶ್ವರ ಭಟ್ ಸುಣ್ಣಂಬಳ ಅವರು ಶಿಬಿರವನ್ನುದ್ದೇಶಿಸಿ ಮಾತನಾಡುತ್ತಾ ಯಾವುದೇ ಫಲಾಪೇಕ್ಷೆಯಿಲ್ಲದೆ ಉತ್ತರ ಭಾರತದಿಂದ ಬಂದು ಇಲ್ಲಿ ನೊಂದವರ ಹಿತಕ್ಕಾಗಿ 1965 ರಲ್ಲಿ ಶ್ರೀ ಭಟ್ಚಾರ್ಯರವರು ಸ್ಥಾಪಿಸಿದ ಈ ಆಶ್ರಮವು ಇಂದು ಮುನ್ನೂರೈವತ್ತು ಅನಾಥರಿಗೆ ಆಶ್ರಯ ತಾಣವಾಗಿದೆ. ಇದಲ್ಲದೆ ನೂರಾರು ಗೋವುಗಳನ್ನೂ ಸಂರಕ್ಷಿಸಿ ಪಾಲಿಸುವ ಮೂಲಕ ಇತರರಿಗೆ ಮಾದರಿಯಾಗಿದೆ. ಕಣಚೂರು ಆಯುರ್ವೇದ ಕಾಲೇಜಿನವರು ನಡೆಸುವ ಈ ಆರೋಗ್ಯ ಸೇವೆ ಮುಂದೆಯೂ ನಮಗೆ ಲಭಿಸಲಿ ಎಂದು ಹಾರೈಸಿದರು.

ಆಸ್ಪತ್ರೆಯ ಉಪ ನಿರೀಕ್ಷಕ ಡಾ ಕಾರ್ತಿಕ್ ಅವರು ನಾವು ನಡೆಸುವ ಈ ಸೇವೆಗೆ ಪೂರಕವಾಗಿ ಮುಂದೆಯೂ ಚಿಕಿತ್ಸೆಗಾಗಿ ಆಸ್ಪತ್ರೆಯ ಒಳರೋಗಿಯಾಗಿ ಬರ ಬಹುದು ಎಂದರು

ಆಗತ್ಯ ಔಷಧಿ, ರಕ್ತ ತಪಾಸಣೆ, ರಕ್ತಛಾಪ ತಪಾಸಣೆ ಸಹಿತವಾಗಿ ಸುಮಾರು 250 ಮಂದಿ ಶಿಬಿರದ ಸದುಪಯೋಗ ಪಡೆದರು ಇದಲ್ಲದೆ ಎಲ್ಲರಿಗೂ ಹಣ್ಣು ಹಂಪಲು ಮತ್ತು ಬಿಸ್ಕಟ್ ಗಳನ್ಮು ಸಹ ಹಂಚಲಾಯಿತು.

- Advertisement -

ಡಾ ಕಾರ್ತಿಕ್ ಡಾ ಅರ್ಜುನ್, ಡಾ ಅರುಣಾ, ಡಾ ರಾಜೇಶ್, ಡಾ ಚರಣ್(ಆರ್ ಎಂ ಒ,), ಪರಿಚಾರಿಕೆಯರಾದ ಉಮಾಶ್ರೀ, ಅಫ್ರಾ,‌ ರಕ್ಷಿತಾ,,(,ಎಂ ಆರ್ ಡಿ,) ಶ್ರಾವ್ಯಾ (ಫಾರ್ಮಸಿ) ಸಜಿನಾ ,( ಲ್ಯಾಬ್) ಮತ್ತು ಪಿ.ಆರ್ ಒ ಅಭಿಯಾರವರು ಸಹಕರಿಸಿದರು

ವರದಿ
ಡಾ ಸುರೇಶ ನೆಗಳಗುಳಿ
ಕಣಚೂರು ಆಯುರ್ವೇದ ಆಸ್ಪತ್ರೆ
ನಾಟೆಕಲ್ ಮಂಗಳೂರು
9448216674

- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group