spot_img
spot_img

ಅಳಿದ ಮೇಲೆ ಉಳಿಯುವಂತಾಗಬೇಕು : ಎಸ್ ಆರ್.ಮನಹಳ್ಳಿ

Must Read

spot_img
- Advertisement -

ತಿಮ್ಮಾಪುರ – ಜೀವನದ ಸಾರ್ಥಕತೆ, ಉತ್ತಮ ಆಚಾರ,  ವಿಚಾರ,ಅಳವಡಿಸಿಕೊಂಡು ಜೀವನ ಸಾಗಿಸಿ, ಮನುಷ್ಯ ಅಳಿದ ಮೇಲೆಯೂ ಉಳಿಯುಂತಾಗಬೇಕು ಎಂದು ಶಿಕ್ಷಣ ತಜ್ಞ ಎಸ್.ಆರ್.ಮನಹಳ್ಳಿ ಹೇಳಿದರು.

ಹುನಗುಂದ ತಾಲೂಕಿನ ಅಮಿನಗಡ ಪಟ್ಟಣದ ಕಾಳಿಕಾಂಬ ದೇವಾಲಯದ ಸಭಾಭವನದಲ್ಲಿ ಶಾಲಾ ಶಿಕ್ಷಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಸಿದ್ದಮ್ಮ ಪಾಟೀಲ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಸೇವೆಯನ್ನು ನಿವೃತ್ತಿ ನಂತರ ಸಂಸ್ಥೆ, ಸಮಾಜ ಸ್ಮರಿಸುವಂತಾಗಬೇಕು,
ಶಿಕ್ಷಕ ವೃತ್ತಿ ಪವಿತ್ರವಾದದ್ದು, ಆದರ್ಶ, ಅನುಕರಣಾ ನಡತೆ ನಾವು ಅಳವಡಿಸಿಕೊಂಡಾಗ ಸಮಾಜ ನಮ್ಮನ್ನು ಖಂಡಿತ ಗೌರವಿಸುವ ಕಾರ್ಯ ಮಾಡುತ್ತದೆ ಎಂದರು.

ಸಮಾರಂಭದಲ್ಲಿ ಮಾಜಿ ಶಾಸಕ ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್‌.ಜಿ.ನಂಜಯ್ಯನಮಠ ಮಾತನಾಡಿ, ಸತತ ಓದು ,ಆನಂದ ನೀಡುತ್ತದೆ,ಯಾವುದೇ ವೃತ್ತಿಯಿಂದ ನಿವೃತ್ತರಾದವರು ಅಧ್ಯಯನ, ಸಮಾಜ ಸೇವೆ ತೊಡಗಿ ಉತ್ತಮ ಜೀವನ ನಡೆಸಬಹುದು.ವೃತ್ತಿ ಪಾವಿತ್ರ್ಯ ಇಂದು ಕಡಿಮೆಯಾಗುತ್ತಿದೆ ಗುರು ಶಿಷ್ಯರ ಸಂಬಂಧ, ಗುರುಭಕ್ತಿ,ಭಯ ,ಗೌರವ ಭಾವನೆ ಕಡಿಮೆಯಾಗಿ,ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಹಿಂದೆ ವಿದ್ಯಾರ್ಥಿಗಳನ್ನು ಹೆದರಿಸಿ,ಗದರಿಸಿ ಬುದ್ದಿ ಕಲಿಸುವ ವ್ಯವಸ್ಥೆ, ಇಂದು ಉಳಿದಿಲ್ಲ ಗುರುಗಳು ವಿದ್ಯಾರ್ಥಿಗಳ ಸಂಬಂಧ ಮೊದಲಿನಂತೆ ಉಳಿದಿಲ್ಲ ಎಂದರು.

- Advertisement -

ಸಮಾರಂಭದ ಸಾನ್ನಿಧ್ಯವನ್ನು ಹಡಗಲಿಯ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಬಾದನಾಳದ ಶಿವಸಿದ್ದ ಮಹಾಸ್ವಾಮಿಗಳು ವಹಿಸಿದ್ದರು.

ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶಂಕ್ರಪ್ಪ ನೇಗಲಿ, ಹಾಲಮತ ಸಮಾಜದ ಅಧ್ಯಕ್ಷ ಯಮನಪ್ಪ ನಾಗರಾಳ, ಜಗಧೀಶ ಬಿಸಲದಿನ್ನಿ, ಎಚ್.ಎಸ್.ನಾಗೂರ, ಪಿ.ಎಚ್.ಪವಾರ, ಕನಕಪ್ಪ ಕಂಬಳಿ, ಶಿವಬಸಯ್ಯ ಹಿರೇಮಠ, ಬಸವರಾಜ ಆಸಂಗಿ, ನೌಕರರ ಸಂಘದ ಅಧ್ಯಕ್ಷ ಸಂಗಣ್ಣ ಹಂಡಿ, ಶಿಕ್ಷಕರ ಸಂಘದ ಅಧ್ಯಕ್ಷ ಸಂಗಮೇಶ ಪಾಟೀಲ, ರಂಗನಾಥ ಮಾಸರಡ್ಡಿ, ಸುಜಾತ ಹಂಚಿನಾಳ ಇದ್ದರು.

ರವಿ ಕಾಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು‌.
ಅಭಿನಂದನಾ ಹಾಗೂ ಸನ್ಮಾನ ಸಮಾರಂಭದಲ್ಲಿ ನಾಲ್ಕು ದಶಕಗಳ ಕಾಲ ಶಿಕ್ಷಕಿ, ಅಧಿಕಾರಿಯಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಿದ್ದಮ್ಮ ಪಾಟೀಲ ಅವರನ್ನು ವಿವಿಧ ಸಂಘ ಸಂಸ್ಥೆಗಳು, ಶಿಕ್ಷಕರು ಗೌರವಿಸಿ, ಸನ್ಮಾನಿಸಿದರು.

- Advertisement -

ವಿಜಯಲಕ್ಷ್ಮಿ ನಾಗಲೋಟಿ ಪ್ರಾರ್ಥಿಸಿ, ಮಲ್ಲಿಕಾರ್ಜುನ ಸಜ್ಜನ ಸ್ವಾಗತಿಸಿದರು. ಗಿರಿಯಪ್ಪ ಆಲೂರ ನಿರೂಪಿಸಿ,ಅಶೋಕ ಎಮ್ಮಿ ವಂದಿಸಿದರು.

- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group