- Advertisement -
ಸಿಂದಗಿ – ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವತಿಯಿಂದ ಪಟ್ಟಣದ ಕಾಳಿಕಾ ನಗರ ಕಾರ್ಯಕ್ಷೇತ್ರದಲ್ಲಿ ಸಂಘದ ಸದಸ್ಯರುಗಳಿಗೆ ಪೇರು ಗಿಡ ವಿತರಣೆ ಮಾಡಲಾಯಿತು
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಪ್ರಸನ್ನ ಅವರು ಯೋಜನೆಯ ಕಾರ್ಯಕ್ರಮಗಳ ಕುರಿತು ಮಾಹಿತಿ ಜೊತೆಗೆ ಪರಿಸರ ಸಂರಕ್ಷಣೆಯಲ್ಲಿ ನಾವು ವಹಿಸಬೇಕಾದ ಜವಾಬ್ದಾರಿ ಕುರಿತು ತಿಳಿಸಿದರು
ಕಾರ್ಯಕ್ರಮ ಉದ್ಘಾಟಕರಾಗಿ ಆಗಮಿಸಿದ ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾಗಿರುವಂತ ಅಶೋಕ್ ಅಲ್ಲಾಪುರ, ಉತ್ತಮ ಆರೋಗ್ಯ ವಾತಾವರಣ ಇರಬೇಕಾದ್ರೆ ಗಿಡ ಮರಗಳನ್ನು ಮಕ್ಕಳಂತೆ ಬೆಳೆಸಿ ಸಂರಕ್ಷಣೆ ಮಾಡುವ ಬಗ್ಗೆ ತಿಳಿಸಿ ಈ ವರ್ಷ ತಾಪಮಾನದಲ್ಲಾದ ಏರಿಳಿತಗಳ ಬಗ್ಗೆ ಮಾಹಿತಿ ನೀಡಿದರು
- Advertisement -
ಸಂಘದ ಸದಸ್ಯರಿಗೆ ಅವರಿಂದ ಗಿಡಗಳ ವಿತರಣೆ ಮಾಡಿಸಲಾಯಿತು ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕರು ಸುರೇಶ್ ವಲಯ ಮೇಲ್ವಿಚಾರಕರು ಸಿದ್ದಪ್ಪ ಒಕ್ಕೂಟದ ಅಧ್ಯಕ್ಷರು ಅನ್ನಪೂರ್ಣ ಸೇವಾ ಪ್ರತಿನಿಧಿ ಭಾಗೀರಥಿ ಬಡಿಗೇರ್ ಸಂಘದ ಸದಸ್ಯರು ಉಪಸ್ಥಿತರಿದ್ದರು